ನಾಯಕತ್ವದಿಂದ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ನಿರ್ಧಾರ: ಪತ್ನಿ ಸಾಕ್ಷಿ ಪ್ರತಿಕ್ರಿಯೆ
ಧೋನಿಯ ನಿವೃತ್ತಿ ನಿರ್ಧಾರಕ್ಕೆ ಪತ್ನಿ ಸಾಕ್ಷಿ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಸದಾ ಟ್ವಿಟರ್ ನಲ್ಲಿ ಕ್ರಿಯಾಶೀಲರಾಗಿರುವ ಸಾಕ್ಷಿ ತಮ್ಮ ಪತಿಯ ನಿರ್ಧಾರಕ್ಕೆ ತಮ್ಮ ..

ನವದೆಹಲಿ: ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವೀ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ಸ್ಥಾನ ತೊರೆದಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ನಾಯಕತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು ಧೋನಿ ಅಭಿಮಾನಿ ಸೇರಿದೆಂತೆ ಇಡೀ ಕ್ರಿಕೆಟ್ ರಂಗಕ್ಕೆ ಆಘಾತ ನೀಡಿದೆ.
ಆದರೆ ಧೋನಿಯ ನಿವೃತ್ತಿ ನಿರ್ಧಾರಕ್ಕೆ ಪತ್ನಿ ಸಾಕ್ಷಿ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಸದಾ ಟ್ವಿಟರ್ ನಲ್ಲಿ ಕ್ರಿಯಾಶೀಲರಾಗಿರುವ ಸಾಕ್ಷಿ ತಮ್ಮ ಪತಿಯ ನಿರ್ಧಾರಕ್ಕೆ ತಮ್ಮ ಬೆಂಬಲವಿರುವುದನ್ನು ಈ ಮೂಲಕ ತಿಳಿಸಿದ್ದಾರೆ.
ನಿಮಗಿನ್ನು ಏರಲು ಯಾವುದೇ ಎತ್ತರದ ಪರ್ವತ ಉಳಿದಿಲ್ಲ. ನಿಮ್ಮ ಬಗ್ಗೆ ಹೆಮ್ಮೆಯಿದೆ ಎಂದು ಸಾಕ್ಷಿ ಪತಿಯನ್ನು ಬೆಂಬಲಿಸಿ ಪ್ರೀತಿಯಿಂದ ಟ್ವೀಟ್ ಮಾಡಿದ್ದಾರೆ. ಧೋನಿ ಟ್ವಿಟರ್ ಬಳಸುವುದಿಲ್ಲ. ಪತ್ನಿ ಸಾಕ್ಷಿಯೇ ಟ್ವಿಟರ್ ಮೂಲಕ ಕೆಲವೊಮ್ಮೆ ಧೋನಿ ಖಾಸಗಿ ಜೀವನವನ್ನು ತೆರೆದಿಡುತ್ತಾರೆ.
@msdhoni There are no mountains high enough to stop you from climbing.Proud of you !! ❤❤❤❤❤❤❤❤
— Sakshi Singh
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


