"ಸದ್ಯ ಧೋನಿ ನಾಯಕರಾಗಿಲ್ಲ, ಇದು ನನಗೆ ತುಂಬಾ ಸಂತಸದ ಸುದ್ದಿ": ಸೆಹ್ವಾಗ್!
ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವೀ ನಾಯಕ ಮಹೇಂದ್ರ ಸಿಂಗ್ ಧೋನಿ ಪುಣೆ ತಂಡದ ನಾಯಕರಾಗಿಲ್ಲದೇ ಇರುವುದು ಸಂತಸದ ಸುದ್ದಿ ಎಂದು ಮಾಜಿ ಕ್ರಿಕೆಟಿಗ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಲಹೆಗಾರರಾಗಿರುವ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ನವದೆಹಲಿ: ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವೀ ನಾಯಕ ಮಹೇಂದ್ರ ಸಿಂಗ್ ಧೋನಿ ಪುಣೆ ತಂಡದ ನಾಯಕರಾಗಿಲ್ಲದೇ ಇರುವುದು ಸಂತಸದ ಸುದ್ದಿ ಎಂದು ಮಾಜಿ ಕ್ರಿಕೆಟಿಗ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಲಹೆಗಾರರಾಗಿರುವ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಸೆಹ್ವಾಗ್, ಧೋನಿ ಪುಣೆ ತಂಡವನ್ನು ಮುನ್ನಡೆಸದೇ ಇರುವುದರಿಂದ ನನಗೆ ಅತೀವ ಸಂತಸವಾಗಿದೆ. ಇದರಿಂದ ನಮ್ಮ ಪಂಜಾಬ್ ತಂಡ ಪುಣೆ ತಂಡವನ್ನು ಸೋಲಿಸಲು ನೆರವಾಗುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ಧೋನಿ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಸೆಹ್ವಾಗ್, ನಾಯಕತ್ವ ಬದಲಾವಣೆ ಪುಣೆ ತಂಡದ ಆಂತರಿಕ ವಿಚಾರ. ಹೀಗಾಗಿ ಅದರ ಬಗ್ಗೆ ನಾನು ಹೆಚ್ಚೇನೂ ಮಾತನಾಡುವುದಿಲ್ಲ. ಆದರೆ ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವೀ ನಾಯಕರಲ್ಲಿ ಧೋನಿ ಪ್ರಮುಖರು ಎಂದು ಹೇಳಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಇತರೆ ಕಾರಣಗಳಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡವನ್ನು ಐಪಿಎಲ್ ನಿಂದ ಹೊರ ಹಾಕಲಾಗಿತ್ತು. ಹೀಗಾಗಿ ಹೊಸದಾಗಿ ಪುಣೆ ಮತ್ತು ಗುಜರಾತ್ ತಂಡಗಳು ಐಪಿಎಲ್ ಗೆ ಸೇರ್ಪಡೆಯಾಗಿದ್ದವು. ಈ ಹಿಂದೆ ಚೆನ್ನೈ ತಂಡದ ನಾಯಕರಾಗಿದ್ದ ಧೋನಿ, ಬಳಿಕ ಪುಣೆ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಆದರೆ ಐಪಿಎಲ್-9 ಆವೃತ್ತಿಯಲ್ಲಿ ಪುಣೆ ತಂಡ ಅಷ್ಟೇನೂ ಪ್ರಭಾವಿ ಪ್ರದರ್ಶನ ನೀಡಿರಲಿಲ್ಲ. ಕಳೆದ ಐಪಿಎಲ್ ಸರಣಿಯಲ್ಲಿ ಧೋನಿ ನಾಯಕತ್ವದ ಪುಣೆ ತಂಡ ಒಟ್ಟು 14 ಪಂದ್ಯಗಳನ್ನು ಆಡಿದ್ದು, ಈ ಪೈಕಿ 5 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಸರಣಿಯಲ್ಲಿ ಒಟ್ಟು 12 ಇನ್ನಿಂಗ್ಸ್ ಗಳನ್ನು ಆಡಿದ್ದ ಧೋನಿ 284 ರನ್ ಗಳಿಸಿದ್ದರು. ಇದರಲ್ಲಿ ಒಂದು ಅರ್ಧಶತಕ ಕೂಡ ಸೇರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


