ಓವರ್ ಫಿಟ್ನೆಸ್ ಮಾಂಸಖಂಡಗಳ ಬಲ ಕುಂಠಿತವಾಗಲು ಕಾರಣವಾಗಬಲ್ಲದು; ಕೊಹ್ಲಿಗೆ ಕಪಿಲ್ ದೇವ್ ಎಚ್ಚರಿಕೆ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಗೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಮತ್ತು ಭಾರತಕ್ಕೆ ಮೊಟ್ಟ ಮೊದಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಅವರು ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಗೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಮತ್ತು ಭಾರತಕ್ಕೆ ಮೊಟ್ಟ ಮೊದಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಅವರು ಎಚ್ಚರಿಕೆ ನೀಡಿದ್ದಾರೆ.
ಕಪಿಲ್ ದೇವ್ ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಗೆ ಸಂಬಂಧಿಸಿದಂತೆ ಎಚ್ಚರಿಕೆ ನೀಡಿದ್ದು, ಕೊಹ್ಲಿ ಅವರ ಓವರ್ ಫಿಟ್ನೆಸ್ ಅವರ ಧೀರ್ಘಕಾಲಿಕ ಗಾಯಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ."ಕ್ರಿಕೆಟ್ ಒಂದೇ ಅಲ್ಲ..ಕ್ರೀಡಾಕ್ಷೇತ್ರದ ಯಾವುದೇ ಕ್ರೀಡೆಯಾಗಿರಲಿ ಉತ್ತಮ ಪ್ರದರ್ಶನಕ್ಕೆ ಫಿಟ್ನೆಸ್ ಮುಖ್ಯ.. ಆದರೆ ಇತ್ತೀಚಿನ ದಿನಗಳಲ್ಲಿ ತಾವು ಗಮನಿಸಿದಂತೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರಷ್ಟು ಫಿಟ್ನೆಸ್ ಬಗ್ಗೆ ಚಿಂತಿಸುವವರನ್ನು ನಾನು ನೋಡಿಲ್ಲ. ನನ್ನ ಅಭಿಪ್ರಾಯದಂತೆ ಕೊಹ್ಲಿ ಓವರ್ ಫಿಟ್ನೆಸ್ ಹೊಂದಿದ್ದು, ಮುಂದೊಂದು ದಿನ ಅವರ ಈ ಓವರ್ ಫಿಟ್ನೆಸ್ ನಿಂದಲೇ ಅವರು ಗಾಯಾಳುವಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
"ಫಿಟ್ನೆಸ್ ನಿಂದಾಗಿ ಮಾಂಸಖಂಡಗಳು ಹೇಗೆ ಬಲವರ್ಧನೆಯಾಗುತ್ತದೆಯೋ. ಹಾಗೇಯೆ ಓವರ್ ಫಿಟ್ನೆಸ್ ನಿಂದಾಗಿ ಅದೇ ಮಾಂಸಖಂಡಗಳು ಬೇಗ ಶಕ್ತಿ ಕಳೆದುಕೊಳ್ಳುತ್ತದೆ. ಬಹುಶಃ ಸತತ ಸರಣಿಗಳಿಂದಾಗಿ ಕೊಹ್ಲಿ ಸತತ ಪರಿಶ್ರಮ ಪಡುತ್ತಿರಬಹುದು. ಆದರೆ ಅತಿಯಾದ ಪರಿಶ್ರಮ ಕೂಡ ಅವರ ಕ್ರಿಕೆಟ್ ಮೇಲೆ ದುಷ್ಪರಿಣಾಮ ಬೀರಬಹುದು. ಆಗ ಆಟಗಾರ ಗಾಯಕ್ಕೆ ತುತ್ತಾಗುತ್ತಾನೆ ಎಂದು ಕಪಿಲ್ ಎಚ್ಚರಿಸಿದ್ದಾರೆ.=
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


