ಟಿ20 ತ್ರಿಶತಕದಿಂದ ಐಪಿಎಲ್ ಕಡೆಗೆ ಮೋಹಿತ್ ಅಹ್ಲಾವತ್!
ಟಿ20 ಪಂದ್ಯದಲ್ಲಿ ವಿಶ್ವದಾಖಲೆಯ ತ್ರಿಶತಕ ಸಿಡಿಸಿ ವಿಶ್ವಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿರುವ ದೆಹಲಿ ಕ್ರಿಕೆಟಿಗ ಮೋಹಿತ್ ಅಹ್ಲಾವತ್ ಇದೀಗ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲೂ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಟಿ20 ಪಂದ್ಯದಲ್ಲಿ ವಿಶ್ವದಾಖಲೆಯ ತ್ರಿಶತಕ ಸಿಡಿಸಿ ವಿಶ್ವಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿರುವ ದೆಹಲಿ ಕ್ರಿಕೆಟಿಗ ಮೋಹಿತ್ ಅಹ್ಲಾವತ್ ಇದೀಗ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲೂ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ದೆಹಲಿಯ ಲಲಿತಾ ಪಾರ್ಕ್ ನಲ್ಲಿ ನಡೆದ ದೇಶೀ ಕ್ರಿಕೆಟ್ ಸರಣಿಯ ಟಿ20 ಪಂದ್ಯದಲ್ಲಿ ಕೇವಲ 72 ಎಸೆತಗಳಲ್ಲಿ ಬರೊಬ್ಬರಿ 300 ರನ್ ಗಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದ ಮೋಹಿತ್ ಅಹ್ಲಾವತ್ ಅವರ ಹೆಸರು ಮುಂಬರುವ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸೇರ್ಪಡೆಯಾಗಿದ್ದು, ವಿವಿಧ ತಂಡಗಳ ಫ್ರಾಂಚೈಸಿಗಳು ಮೋಹಿತ್ ಮೇಲೆ ಬಿಡ್ ಮಾಡಲು ಕಾತುರರಾಗಿದ್ದಾರೆ.
ಇನ್ನು ಈ ಬಗ್ಗೆ ಸಂತೋಷದಿಂದಲೇ ಮಾತನಾಡಿದ ಮೋಹಿತ್ ಅಹ್ಲಾವತ್, ಟಿ20 ಪಂದ್ಯವಾದ್ದರಿಂದ ಹೆಚ್ಚು ರನ್ ಗಳಿಸುವ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೇರಬೇಕು ಎಂಬ ಒಂದೇ ಅಂಶ ತಲೆಯಲ್ಲಿತ್ತು. ಬಹುಶಃ ಇದೇ ತ್ರಿಶತಕಕ್ಕೆ ದಾರಿ ಮಾಡಿತು ಎಂದೆನೆಸುತ್ತದೆ ಎಂದು ಹೇಳಿದ್ದಾರೆ.
ಇನ್ನು ಈ ಹಿಂದೆ ರಣಜಿ ಪಂದ್ಯದಲ್ಲೂ ಕೂಡ ಆಡಿದ್ದ ಮೋಹಿತ್ಲ್ ಅಹ್ಲಾವತ್ 5 ಇನ್ನಿಂಗ್ಸ್ ಗಳಲ್ಲಿ ಕೇವಲ ಐದು ರನ್ ಗಳಿಸಿದ್ದರು. ಆದರೆ ದೆಹಲಿಯಲ್ಲಿ ನಡೆದ ಫ್ರೆಂಡ್ಸ್ ಪ್ರೀಮಿಯರ್ ಲೀಗ್ ನ ಈ ಪಂದ್ಯ ಮೋಹಿತ್ ಅಹ್ಲಾವತ್ ನ ಜೀವನ ದಿಕ್ಕನ್ನೇ ಬದಲಿಸಿದ್ದು, ಐಪಿಎಲ್ ಫ್ರಾಂಚೈಸಿಗಳು ಕೂಡ ಮೋಹಿತ್ ಗಾಗಿ ಮುಗಿಬಿದ್ದಿದ್ದಾರೆ. ಪ್ರಸ್ತತ ನನ್ನ ಹೆಸರನ್ನು ಐಪಿಎಲ್ ಆಟಗಾರರ ಹಾರಾಜು ಪ್ರಕ್ರಿಯೆಯಲ್ಲಿ ಸೇರಿಸಲಾಗಿದೆ. ಆದರೆ ನನ್ನ ತ್ರಿಶತಕವೊಂದರಿಂದಾಗಿಯೇ ನಾನು ಐಪಿಎಲ್ ಗೆ ಆಯ್ಕೆಯಾಗುತ್ತೇನೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಮೋಹಿತ್ ಹೇಳಿದ್ದಾರೆ.
ಪ್ರಸ್ತುತ ಮೋಹಿತ್ ಹೆಸರು ಐಪಿಎಲ್ ಫ್ರಾಂಚೈಸಿಗಳ ಲಿಸ್ಟ್ ನಲ್ಲಿ ಸೇರ್ಪಡೆಯಾಗಿದ್ದು, ಮೋಹಿತ್ ಯಾವ ತಂಡದ ಪಾಲಾಗುತ್ತಾರೆ ಎಂಬುದು ಹರಾಜಿನ ಬಳಿಕ ತಿಳಿಯುತ್ತದೆ.
ಇತ್ತೀಚೆ ದೆಹಲಿಯ ಲಲಿತಾ ಪಾರ್ಕ್ ನಲ್ಲಿ ನಡೆದ ಫ್ರೆಂಡ್ಸ್ ಪ್ರೀಮಿಯರ್ ಲೀಗ್ ನಲ್ಲಿ ಮೋಹಿತ್ ಕೇವಲ 72 ಎಸೆತಗಳನ್ನು ಎದುರಿಸಿ ಬರೊಬ್ಬರಿ 300 ರನ್ ಸಿಡಿಸಿದ್ದಾರು. ಈ ಪೈಕಿ 39 ಸಿಕ್ಸರ್ ಗಳು ಮತ್ತು 14 ಬೌಂಡರಿಗಳು ಸೇರಿದ್ದವು. ಈ ಪಂದ್ಯದ ಅದ್ಭುತ ಪ್ರದರ್ಶನದ ಬಳಿಕ ಮೋಹಿತ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟ್ರೆಂಡ್ ಆಗಿ ಬದಲಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


