ಕ್ರಿಕೆಟ್

1999ರಲ್ಲಿ ಇದೇ ದಿನ ಪಾಕ್ ವಿರುದ್ಧ ಕನ್ನಡಿಗ ಅನಿಲ್ ಕುಂಬ್ಳೆ 74 ರನ್ ಗೆ 10 ವಿಕೆಟ್ ಕಬಳಿಸಿದ್ದು!

ಟೆಸ್ಟ್ ಕ್ರಿಕೆಟ್ ನ ಒಂದೇ ಇನ್ನಿಂಗ್ಸ್ ನಲ್ಲಿ ಎಲ್ಲಾ ಹತ್ತು ವಿಕೆಟ್ ಗಳನ್ನು ಪಡೆಯುವುದು ಅಸಾಮಾನ್ಯ ಸಾಧನೆ. ಅಂತಹದರಲ್ಲಿ ಟೀಂ ಇಂಡಿಯಾ ಪರ ಆಡಿದ್ದ ಕನ್ನಡಿಗ ಅನಿಲ್ ಕುಂಬ್ಳೆ...

1999ರಲ್ಲಿ ಇದೇ ದಿನ ಪಾಕ್ ವಿರುದ್ಧ ಕನ್ನಡಿಗ ಅನಿಲ್ ಕುಂಬ್ಳೆ 74 ರನ್ ಗೆ 10 ವಿಕೆಟ್ ಕಬಳಿಸಿದ್ದು!
ಅನಿಲ್ ಕುಂಬ್ಳೆ
Published On :
ಟೆಸ್ಟ್ ಕ್ರಿಕೆಟ್ ನ ಒಂದೇ ಇನ್ನಿಂಗ್ಸ್ ನಲ್ಲಿ ಎಲ್ಲಾ ಹತ್ತು ವಿಕೆಟ್ ಗಳನ್ನು ಪಡೆಯುವುದು ಅಸಾಮಾನ್ಯ ಸಾಧನೆ. ಅಂತಹದರಲ್ಲಿ ಟೀಂ ಇಂಡಿಯಾ ಪರ ಆಡಿದ್ದ ಕನ್ನಡಿಗ ಅನಿಲ್ ಕುಂಬ್ಳೆ ಅವರು ಪಾಕಿಸ್ತಾನ ತಂಡದ ಹತ್ತು ವಿಕೆಟ್ ಗಳನ್ನು ಪಡೆದು ವಿಶ್ವ ದಾಖಲೆಯನ್ನು ಮಾಡಿದ್ದಾರೆ. 
1999ರಲ್ಲಿ ಭಾರತದ ಅನಿಲ್ ಕುಂಬ್ಳೆ ಅವರು ಪಾಕಿಸ್ತಾನ ತಂಡದ ವಿರುದ್ಧ ದೆಹಲಿಯ ಫಿರೋಜ್ ಶಾ ಕೊಟ್ಲಾ ಮೈದಾನದಲ್ಲಿ ನಡೆದಿದ್ದ ಪಂದ್ಯ ಇನ್ನಿಂಗ್ಸ್ ನ ಎಲ್ಲಾ ಹತ್ತು ವಿಕೆಟ್ ಉರುಳಿಸಿ 1956ರಲ್ಲಿ ಇಂಗ್ಲೆಂಡ್ ಜಿಮ್ಮಿ ಲೇಕರ್ ಆಸ್ಟ್ರೇಲಿಯಾ ವಿರುದ್ಧ ಸ್ಥಾಪಿಸಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದರು.
1999ರ ಫೆಬ್ರವರಿ 7ರಂದು ಅನಿಲ್ ಕುಂಬ್ಳೆ ಈ ವಿಶ್ವದಾಖಲೆಯನ್ನು ಮಾಡಿದ್ದರು. ಅಂದರೆ ಇಂದಿಗೆ 18 ವರ್ಷಗಳ ಹಿಂದೆ ಅನಿಲ್ ಕುಂಬ್ಳೆ ಇಂತಹ ಸಾಧನೆ ಮಾಡಿದ್ದು ಆ ನಂತರ ಯಾವುದೇ ಆಟಗಾರ ಇಂತಹ ಸಾಧನೆ ಮಾಡಿಲ್ಲ. 
ಭಾರತ ನೀಡಿದ್ದ 420 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ್ದ ಪಾಕಿಸ್ತಾನ ಅನಿಲ್ ಕುಂಬ್ಳೆ ಅವರ ಮಾರಕ ದಾಳಿಗೆ ತತ್ತರಿಸಿದ್ದು ಕೇವಲ 207 ರನ್ ಗಳಿಗೆ ಸರ್ವಪತನ ಕಂಡಿತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.