ವಿರಾಟ್ ಕೊಹ್ಲಿಗಿಂತ ಸ್ಟೀವ್ ಸ್ಮಿತ್ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್: ಶೇನ್ ವಾರ್ನ್
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗಿಂತ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್ ಎಂದು ಆಸ್ಟ್ರೇಲಿಯಾದ ಮಾಜಿ...

Published On :
ಮೆಲ್ಬೋರ್ನ್: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗಿಂತ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್ ಎಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಹೇಳಿದ್ದಾರೆ.
ಶೇನ್ ವಾರ್ನ್ ಟಾಪ್ 11 ಟೆಸ್ಟ್ ಬ್ಯಾಟ್ಸ್ ಮನ್ ಗಳ ಪಟ್ಟಿ ರೆಡಿ ಮಾಡಿದ್ದು ಅದರಲ್ಲಿ ವಿರಾಟ್ ಕೊಹ್ಲಿ ಹಾಗೂ ಸ್ಟೀವ್ ಸ್ಮಿತ್ ಹೆಸರು ಇದೆ. ಇನ್ನು ಸ್ಟೀವ್ ಸ್ಮಿತ್ ಜಗತ್ತಿನ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್ ಮನ್ ಎಂದು ಪತ್ರಿಕೆಯೊಂದರ ಕಾಲಂನಲ್ಲಿ ಬರೆದಿದ್ದಾರೆ.
ಕ್ರಿಕೆಟ್ ನ ಮೂರು ಮಾದರಿಯಲ್ಲೂ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಐದು ದಿನಗಳ ಟೆಸ್ಟ್ ನಲ್ಲಿ ಮಾತ್ರ ಸ್ಟೀವ್ ಸ್ಮಿತ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ. ಭಾರತದ ನಾಯಕನ ಅದ್ಭುತ ವೃತ್ತಿಜೀವನದಲ್ಲಿ ಇಂಗ್ಲೆಂಡ್ ನಲ್ಲಿ ಮಾತ್ರ ಉತ್ತಮ ರನ್ ಕಲೆ ಹಾಕುವಲ್ಲಿ ಸೋತಿದ್ದಾರೆ.
2014ರ ಇಂಗ್ಲೆಂಡ್ ಪ್ರವಾಸದಲ್ಲಿ ಕೊಹ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಆದರೆ ಸ್ಟೀವ್ ಸ್ಮಿತ್ ಮಾತ್ರ ಇಂಗ್ಲೆಂಡ್ ನಲ್ಲಿ ನಡೆದ ಆಶಸ್ ಸರಣಿಯಲ್ಲಿ ಶತಕಗಳನ್ನು ಸಿಡಿಸಿದ್ದು 43.13ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ ಎಂದರು. ಈ ಅಂಕಿ ಅಂಶಗಳಿಂದಲೇ ಕೊಹ್ಲಿಗಿಂತ ಸ್ಮಿತ್ ಶ್ರೇಷ್ಠರು ಎಂದು ವಾರ್ನ್ ಅಭಿಪ್ರಾಯಕ್ಕೆ ಬಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Virat Kohliವಿರಾಟ್ ಕೊಹ್ಲಿSteve SmithShane Warneಶೇನ್ ವಾರ್ನ್ಸ್ಟೀವ್ ಸ್ಮಿತ್Test batsmanಟೆಸ್ಟ್ ಬ್ಯಾಟ್ಸ್ ಮನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


