ರಣಜಿ ಕ್ರಿಕೆಟ್: ಸೆಮಿ ಫೈನಲ್ ನಲ್ಲಿ ಕರ್ನಾಟಕಕ್ಕೆ 5 ರನ್ ಗಳ ವೀರೋಚಿತ ಸೋಲು
ರಣಜಿ ತ್ರೋಫಿ ಕ್ರಿಕೆಟ್ ಸರಣಿ ಪ್ರಾರಂಬದಿಂದ ಒಂದೂ ಸೋಲು ಕಾಣದೆ ಸೆಮಿ ಫೈನಲ್ಸ್ ತಲುಪಿದ್ದ ಕರ್ನಾಟಕ ತಂಡ ವಿದರ್ಭದ ಎದುರು 5 ರನ್ ವೀರೋಚಿತ ಸೋಲು ದಾಖಲಿಸಿದೆ.

Published On :
ಕೋಲ್ಕತ್ತ: ರಣಜಿ ತ್ರೋಫಿ ಕ್ರಿಕೆಟ್ ಸರಣಿ ಪ್ರಾರಂಬದಿಂದ ಒಂದೂ ಸೋಲು ಕಾಣದೆ ಸೆಮಿ ಫೈನಲ್ಸ್ ತಲುಪಿದ್ದ ಕರ್ನಾಟಕ ತಂಡ ವಿದರ್ಭದ ಎದುರು 5 ರನ್ ವೀರೋಚಿತ ಸೋಲು ದಾಖಲಿಸಿದೆ. ಇದರೊಡನೆ ಕರ್ನಾಟಕದ ಫೈನಲ್ ಕನಸು ನುಚ್ಚು ನೂರಾಗಿದೆ.
ನಾಲ್ಕನೇ ದಿನದ ಅಂತ್ಯಕ್ಕೆ 111 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ಕಡೆಯ ದಿನದಾಟದಲ್ಲಿ ಗೆಲ್ಲಲು ಅಗತ್ಯವಾಗಿದ್ದ 87 ರನ್ ಗಳಿಸುವಲ್ಲಿ ವಿಫಲವಾಯಿತು. ಈ ನಡುವೆ ಅಭಿಮನ್ಯು ಮಿಥುನ್ (33) ಮತ್ತು ಶ್ರೇಯಸ್ ಗೋಪಾಲ್ (23*) ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ ವಿದರ್ಭ ಪರ ರಜನೀಶ್ ಗುರ್ಬಾನಿ ಮಾರಕ ಬೌಲಿಂಗ್ ದಾಳಿಗೆ ಕರ್ನಾಟಕದ ಆಟಗಾರರು ಬೆದರುಗೊಂಬೆಗಳಾದರು.
ರಜನೀಶ್ ಗರ್ಬಾನಿ 68 ರನ್‌ಗಳನ್ನು ಖರ್ಚು ಮಾಡಿ 7 ವಿಕೆಟ್ ಸಂಪಾದಿಸುವ ಮೂಲಕ ವಿದರ್ಭ ತಂದದ ಗೆಲುವಿಗೆ ಕಾರಣಕರ್ತರಾದರು. ಇವರು ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಗಳಿಸಿದರೆ ಎರಡನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಪಡೆದು ಮಿಂಚಿದ್ದರು.ಹೀಗೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಗರ್ಬಾನಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಮುಂದಿನ ಫೈನಲ್ ಪಂದ್ಯ ಇಂದೋರ್ ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆಯಲಿದ್ದು ವಿದರ್ಭ ತಂಡ ದೆಹಲಿಯೊಡನೆ ಸೆಣಸಲಿದೆ.
ಈ ಸೋಲಿನೊಡನೆ ಕರ್ನಾಟಕವು 3 ವರ್ಷಗಳ ಬಳಿಕ ರಣಜಿ ಟೂರ್ನಿ ಫೈನಲ್ ತಲುಪುವ ಅವಕಾಶವನ್ನು ಕಳೆದುಕೊಂಡಿದೆ.
ಸ್ಕೋರ್ ವಿವರ
ವಿದರ್ಭ: 185, 313
ಕರ್ನಾಟಕ: 301, 192
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Vidarbhaವಿದರ್ಭKarnatakaಕರ್ನಾಟಕRanji Trophy cricketರಣಜಿ ಟ್ರೋಫಿ ಕ್ರಿಕೆಟ್Ranji semi-finalsರಣಜಿ ಸೆಮಿಫೈನಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


