ಕ್ರಿಕೆಟ್

ನವ ವಿವಾಹಿತ ವಿರಾಟ್ ಗೆ ಸಚಿನ್ ಸಲಹೆ: ನಕಲಿ ಟ್ವೀಟ್ ಭಾರಿ ವೈರಲ್

ನಟಿ ಅನುಷ್ಕಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿವಾಹ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ವಿರಾಟ್ ಕೊಹ್ಲಿಗೆ ಸಲಹೆ ನೀಡಿದ ನಕಲಿ ಸಚಿನ್ ಖಾತೆದಾರನ ಟ್ವೀಟ್ ಕೂಡ ವ್ಯಾಪಕ ವೈರಲ್ ಆಗಿದೆ.

ನವ ವಿವಾಹಿತ ವಿರಾಟ್ ಗೆ ಸಚಿನ್ ಸಲಹೆ: ನಕಲಿ ಟ್ವೀಟ್ ಭಾರಿ ವೈರಲ್
ಕೊಹ್ಲಿ ಮದುವೆ ಮತ್ತು ನಕಲಿ ಟ್ವೀಟ್
Published On :
ಮುಂಬೈ: ನಟಿ ಅನುಷ್ಕಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿವಾಹ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ವಿರಾಟ್ ಕೊಹ್ಲಿಗೆ ಸಲಹೆ ನೀಡಿದ ನಕಲಿ ಸಚಿನ್ ಖಾತೆದಾರನ ಟ್ವೀಟ್ ಕೂಡ ವ್ಯಾಪಕ ವೈರಲ್ ಆಗಿದೆ.
ಮಾಸ್ಟರ್ ಬ್ಲಾಸ್ಟರ್ ಎಂಬ ನಕಲಿ ಸಚಿನ್ ತೆಂಡೂಲ್ಕರ್ ಖಾತೆ ವಿರಾಟ್ ಕೊಹ್ಲಿ ಅವರಿಗೆ ವಿವಾಹದ ಶುಭಾಷಯ ತಿಳಿಸಿದ್ದು ಈ ವೇಳೆ ನಕಲಿ ಕೊಹ್ಲಿ ಖಾತೆದಾರ ಕೆಲ ಟಿಪ್ಸ್ ಇದ್ದರೆ ಹೇಳಿ ಎಂದು ಮರು ಪ್ರಶ್ನೆ ಕೇಳಿದ್ದಾರೆ. ಈ ವೇಳೆ  ನಕಲಿ ಟ್ವೀಟ್ ಖಾತೆದಾರ ರಾತ್ರಿ ವೇಳೆ ಹೆಲ್ಮೆಟ್ ಧರಿಸು ಎಂದು ಉತ್ತರಿಸಿದ್ದು, ಈ ಟ್ವೀಟ್ ಇದೀಗ ವ್ಯಾಪಕ ವೈರಲ್ ಆಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗಳು ಕೂಡ ನಡೆಯುತ್ತಿವೆ.
ಇನ್ನು ಇದು ಸಚಿನ್ ಅವರ ಅಭಿಮಾನಿಗಳಿಗೆ ಗೊಂದಲ ಮೂಡಿಸಿದ್ದು, ಈ ಟ್ವೀಟ್ ಫೋಟೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಇದು ನಕಲಿ ಎಂದು ಅರಿಯದೆ ಹಲವಾರು ನೆಟಿಜನ್‍ಗಳು ಇದನ್ನು ಶೇರ್ ಮಾಡುತ್ತಿದ್ದಾರೆ. ಆದರೆ  ಇದು ನಕಲಿ ಖಾತೆಯಾಗಿದ್ದು, ಸಚಿನ್ ಅವರು @sachin_rt ಎಂಬ ಅಧಿಕೃತ ಖಾತೆಯನ್ನು ಹೊಂದಿದ್ದು, @MasterBlaster ಖಾತೆ ನಕಲಿ ಖಾತೆಯಾಗಿದೆ. ನವ ವಿವಾಹಿತ ಕೊಹ್ಲಿ ಮತ್ತು ಅನುಷ್ಕಾ ದಂಪತಿಗೆ ಸಚಿನ್  ಹರಿಸಿರುವ ಟ್ವೀಟ್ ಇಲ್ಲಿದ್ದು, ನವ ವಿವಾಹಿತ ಅನುಷ್ಕಾ-ಕೊಹ್ಲಿಗೆ ಶುಭ ಹಾರೈಕೆಗಳು, ಇಬ್ಬರು ಒಟ್ಟಾಗಿ ಅದ್ಬುತವಾಗಿ ಕಾಣುತ್ತಿದ್ದೀರಿ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಈ ಹಿಂದೆಯೂ ಸಚಿನ್ ತೆಂಡೂಲ್ಕರ್ ಗೆ ಸಂಬಂಧಿಸಿದ ಸಾಕಷ್ಟು ನಕಲಿ ಖಾತೆಗಳು ಭಾರಿ ಸುದ್ದಿಗೆ ಗ್ರಾಸವಾಗಿದ್ದವು. ಸಚಿನ್ ಮಾತ್ರವಲ್ಲದೇ ಅವರ ಪುತ್ರಿ ಸಾರಾ ಸಚಿನ್ ಮತ್ತು ಪತ್ಮಿ ಅಂಜಲಿ ಹೆಸರಲ್ಲೂ ಸಾಕಷ್ಟು ನಕಲಿ ಟ್ವೀಟ್  ಖಾತೆಗಳು ಹುಟ್ಟಿಕೊಂಡು ಸುದ್ದಿ ಮಾಡಿದ್ದವು. ಈ ಬಗ್ಗೆ ಸ್ವತಃ ಸಚಿನ್ ತೆಂಡೂಲ್ಕರ್ ಅವರೇ ಟ್ವಿಟರ್ ಸಂಸ್ಥೆಗೆ ಮನವಿ ಮಾಡಿ ನಕಲಿ ಖಾತೆಗಳ ಬಂದ್ ಮಾಡುವಂತೆ ಕೇಳಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.