ಕ್ರಿಕೆಟ್

ಚೆನ್ನೈ ಸೂಪರ್ ಕಿಂಗ್ಸ್ ಗೆ ಮರಳಲು ಧೋನಿಗೆ ಇದ್ದ ತೊಡಕು ನಿವಾರಣೆ!

2018 ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೆ ಭಾಗಿಯಾಗಲಿದ್ದು, ಐಪಿಎಲ್ ಗೌರ್ನಿಂಗ್ ಮಂಡಳಿ ಎಂಎಸ್ ಧೋನಿ ಅವರ ಪುನರಾಗಮನಕ್ಕೆ ಇದ್ದ ತೊಡಕುಗಳನ್ನು ನಿವಾರಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ಗೆ ಮರಳಲು ಧೋನಿಗೆ ಇದ್ದ ತೊಡಕು ನಿವಾರಣೆ!
ಧೋನಿ
Published On :
2018 ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೆ ಭಾಗಿಯಾಗಲಿದ್ದು, ಐಪಿಎಲ್ ಗೌರ್ನಿಂಗ್ ಮಂಡಳಿ ಎಂಎಸ್ ಧೋನಿ ಅವರ ಪುನರಾಗಮನಕ್ಕೆ ಇದ್ದ ತೊಡಕುಗಳನ್ನು ನಿವಾರಿಸಿದೆ. 
ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಆರೋಪದಡಿಯಲ್ಲಿ ಎರಡು ವರ್ಷಗಳ ನಿಷೇಧದ ನಂತರ ಮತ್ತೊಮ್ಮೆ ಸಿಎಸ್ ಕೆ ಐಪಿಎಲ್ ನಲ್ಲಿ ಆಡಲಿದ್ದು, ಐಪಿಎಲ್ ಆಡಳಿತ ಮಂಡಳಿ ಧೋನಿ ತಂಡಕ್ಕೆ ಮರಳಲು ಇದ್ದ ತೊಡಕನ್ನು ನಿವಾರಿಸಿದೆ. ಕಳೆದ 2 ಆವೃತ್ತಿಗಳಲ್ಲಿ ಧೋನಿ ರೈಸಿಂಗ್ ಪುಣೆ ತಂಡದ ಪರ ಆಡಿದ್ದಾರೆ. ಪ್ರತಿ ಐಪಿಎಲ್ ಫ್ರಾಂಚೈಸಿಗೂ ಪ್ರಿ ಪ್ಲೇಯರ್ ಆಕ್ಷನ್ ಅಡಿಯಲ್ಲಿ 5 ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ ಎಂದು ಬಿಸಿಸಿಐ ನ ಹಂಗಾಮಿ ಕಾರ್ಯದರ್ಶಿ ಅಮಿತಾಬ್ ಚೌದರಿ ಹೇಳಿದ್ದಾರೆ. 
ಆರ್ ಟಿಎಂ ಅಡಿಯಲ್ಲಿ ಐಪಿಎಲ್ 2015 ರಲ್ಲಿ ಸಿಎಸ್ ಕೆ ಹಾಗೂ 2017 ರಲ್ಲಿ ಆರ್ ಆರ್ ತಂಡಕ್ಕಾಗಿ ಆಡಿದವರನ್ನು ಮರಳಿ ಪಡೆಯುವ ಸಾಧ್ಯತೆ ಇದ್ದು ಸಿಎಸ್ ಕೆ ತಂಡಕ್ಕೆ ಧೋನಿ ಆಗಮನಕ್ಕೆ ಅವಕಾಶ ದೊರೆತಂತಾಗಿದೆ. ಆರ್ ಟಿಎಂ ಅಡಿಯಲ್ಲಿ ಫ್ರಾಂಚೈಸಿಯೊಂದು ಈ ಹಿಂದೆ ತನ್ನದೇ ಫ್ರಾಂಚೈಸಿಯಲ್ಲಿ  ಆಟಗಾರನಿಗೆ ಅತಿ ಹೆಚ್ಚು ಬಿಡ್ ಮಾಡುವ ಅವಕಾಶ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.