ಕ್ರಿಕೆಟ್

3ನೇ ಟೆಸ್ಟ್: ಅಶ್ವಿನ್ ಮಾರಕ ದಾಳಿಗೆ ತತ್ತರಿಸಿದ ಲಂಕಾ ತಂಡ 356/9

ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಪ್ರವಾಸಿ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 356 ರನ್ ಪೇರಿಸಿದ್ದು ಭಾರತ 180 ರನ್ ಗಳ ಮುನ್ನಡೆ ಸಾಧಿಸಿದೆ...

3ನೇ ಟೆಸ್ಟ್: ಅಶ್ವಿನ್ ಮಾರಕ ದಾಳಿಗೆ ತತ್ತರಿಸಿದ ಲಂಕಾ ತಂಡ 356/9
ಟೀಂ ಇಂಡಿಯಾ
Published On :
ನವದೆಹಲಿ: ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಪ್ರವಾಸಿ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 356 ರನ್ ಪೇರಿಸಿದ್ದು ಭಾರತ 180 ರನ್ ಗಳ ಮುನ್ನಡೆ ಸಾಧಿಸಿದೆ.
ದೆಹಲಿ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 3 ವಿಕೆಟ್ ಬಾಕಿ ಇರುವಂತೆ 536 ರನ್ ಗಳಿಗೆ ಮೊದಲ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡರು. 
ನಂತರ ಇನ್ನಿಂಗ್ಸ್ ಪ್ರಾರಂಭಿಸಿದ ಲಂಕಾ ಪಡೆಗೆ ಭಾರತೀಯ ಬೌಲರ್ ಗಳು ಆರಂಭಿಕ ಆಘಾತ ನೀಡಿದರು. ಮೊದಲ ಎಸೆತದಲ್ಲೇ ಕರುಣರತ್ನೆಯನ್ನು ಮೊಹಮ್ಮದ್ ಶಮಿ ಔಟ್ ಮಾಡಿದರು. ನಂತರ ಡಿ ಸಿಲ್ವಾ 1 ರನ್ ಗಳಿಸಿ ಔಟಾದರು. ಉತ್ತಮವಾಗಿ ಆಡುತ್ತಿದ್ದ ಪೆರೇರಾ(42)ರನ್ನು ಜಡೇಜಾ ಎಲ್ ಬಿಡಬ್ಲ್ಯೂ ಬಲೆಗೆ ಬೀಳಿಸಿದರು. 
ಎರಡನೇ ದಿನದಾಟದಂತ್ಯಕ್ಕೆ ಲಂಕಾ 3 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತ್ತು. 57 ರನ್ ಗಳಿಸಿರುವ ಮ್ಯಾಥ್ಯೂಸ್ ಹಾಗೂ 25 ರನ್ ಗಳಿಸಿರುವ ಚಾಂಡಿಮಲ್ ಮೂರನೇ ದಿನದಾಟವನ್ನು ಪ್ರಾರಂಭಿಸಿದರು. ಇಂದು ಮ್ಯಾಥ್ಯೂಸ್(111) ಶತಕ ಸಿಡಿಸಿ ಆಡುತ್ತಿದ್ದು ಈ ವೇಳೆ ಅಶ್ವಿನ್ ದಾಳಿಗೆ ತುತ್ತಾದರು. ನಂತರ ಲಂಕಾ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಲಂಕಾ ತಂಡದ ನಾಯಕ ಚಾಂಡಿಮಲ್ ಮಾತ್ರ 147 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು ಸಂದಕನ್ ಜತೆ ನಾಲ್ಕನೇ ದಿನದಾಟವನ್ನು ಪ್ರಾರಂಭಿಸಲಿದ್ದಾರೆ. ಟೀಂ ಇಂಡಿಯಾ ಪರ ಆರ್ ಅಶ್ವಿನ್ 3, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಡೇಜಾ ತಲಾ 2 ವಿಕೆಟ್ ಪಡೆದಿದ್ದಾರೆ. 
ಭಾರತ ಪರ ಮುರಳಿ ವಿಜಯ್ 155, ಶಿಖರ್ ಧವನ್ 23, ಪೂಜಾರ 23, ವಿರಾಟ್ ಕೊಹ್ಲಿ 243, ರಹಾನೆ 1, ರೋಹಿತ್ ಶರ್ಮಾ 65, ಅಶ್ವಿನ್ 4, ವೃದ್ಧಿಮಾನ್ ಸಾಹಾ ಅಜೇಯ 9, ರವೀಂಜ್ರ ಜಡೇಜಾ ಅಜೇಯ 5 ರನ್ ಗಳಿಸಿದ್ದಾರೆ. ಲಂಕಾ ಪರ ಸಂದಕನ್ 4, ಘಮಗೆ 2, ಪೆರೇರಾ 1 ವಿಕೆಟ್ ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.