ಕ್ರಿಕೆಟ್

ಹಾರ್ದಿಕ್ ಪಾಂಡ್ಯ 2 ವರ್ಷಗಳ ಕಾಲ ತಮ್ಮ ಹೊಸ ಕಾರನ್ನು ಬಚ್ಚಿಟ್ಟಿದ್ದು ಯಾಕೆ ಗೊತ್ತಾ!

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸದ್ಯ ತಂಡದ ಹಾಟ್ ಫೇವರಿಟ್. ಅಂತಹ ಪಾಂಡ್ಯ ತಮ್ಮ ಹಿಂದಿನ ಕಹಿ ಘಟನೆಯೊಂದನ್ನು..

ಹಾರ್ದಿಕ್ ಪಾಂಡ್ಯ 2 ವರ್ಷಗಳ ಕಾಲ ತಮ್ಮ ಹೊಸ ಕಾರನ್ನು ಬಚ್ಚಿಟ್ಟಿದ್ದು ಯಾಕೆ ಗೊತ್ತಾ!
ಹಾರ್ದಿಕ್ ಪಾಂಡ್ಯ
Published On :
ಮುಂಬೈ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸದ್ಯ ತಂಡದ ಹಾಟ್ ಫೇವರಿಟ್. ಅಂತಹ ಪಾಂಡ್ಯ ತಮ್ಮ ಹಿಂದಿನ ಕಹಿ ಘಟನೆಯೊಂದನ್ನು ಮೆಲಕು ಹಾಕಿದ್ದಾರೆ. 
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ಗೂ ಮುನ್ನ ನನ್ನ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಒಂದೊಂದು ರುಪಾಯಿಗೂ ಕಷ್ಟಪಡುವ ಸ್ಥಿತಿಯಿತ್ತು. ಸಾಲದ ಕಂತು ಕಟ್ಟಲಾಗದೆ ಎರಡು ವರ್ಷ ನನ್ನ ಕಾರನ್ನು ಬಚ್ಚಿಟ್ಟಿದ್ದೆ ಎಂದು ಪಾಂಡ್ಯ ಹೇಳಿದ್ದಾರೆ. 
ಸಂದರ್ಶನವೊಂದರಲ್ಲಿ ಮಾತನಾಡಿದ ಹಾರ್ದಿಕ್ ಪಾಂಡ್ಯ, ನಾನು ಮೂರು ವರ್ಷಗಳ ಕಾಲ ಸಾಕಷ್ಟು ಕಷ್ಟಪಟ್ಟಿದ್ದೆ. 2015ರ ಐಪಿಎಲ್ ಬಳಿಕ ಜೀವನವೇ ಬದಲಾಯಿತು. ಮುಂಬೈ ತಂಡ ಆ ಬಾರಿ ಚಾಂಪಿಯನ್ ಆಗುತ್ತಿದ್ದಂತೆ 50 ಲಕ್ಷ ರುಪಾಯಿ ದೊರೆಯಿತು. ಆ ನಂತವಷ್ಟೇ ನಾನು ಕುದುರಿಕೊಂಡೆ ಎಂದು ಹೇಳಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.