3ನೇ ಟೆಸ್ಟ್: 2ನೇ ದಿನದಾಟಕ್ಕೆ ಶ್ರೀಲಂಕಾ 131/3
ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಪ್ರವಾಸಿ ಶ್ರೀಲಂಕಾ 3 ವಿಕೆಟ್ ನಷ್ಟಕ್ಕೆ 131 ರನ್ ಪೇರಿಸಿದೆ.

Published On :
ನವದೆಹಲಿ: ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಪ್ರವಾಸಿ ಶ್ರೀಲಂಕಾ 3 ವಿಕೆಟ್ ನಷ್ಟಕ್ಕೆ 131 ರನ್ ಪೇರಿಸಿದೆ.
ದೆಹಲಿ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ದೆಹಲಿಯ ಮಾಲಿನ್ಯ ಹಿನ್ನಲೆ ಲಂಕಾ ಆಟಗಾರರು ಪಂದ್ಯದ ನಡುವೆ ಪದೇ ಪದೇ ಸಮಸ್ಯೆ ಉಂಟು ಮಾಡಿದ ಪರಿಣಾಮ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 3 ವಿಕೆಟ್ ಬಾಕಿ ಇರುವಂತೆ 536 ರನ್ ಗಳಿಗೆ ಮೊದಲ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡರು.
ನಂತರ ಇನ್ನಿಂಗ್ಸ್ ಪ್ರಾರಂಭಿಸಿದ ಲಂಕಾ ಪಡೆಗೆ ಭಾರತೀಯ ಬೌಲರ್ ಗಳು ಆರಂಭಿಕ ಆಘಾತ ನೀಡಿದರು. ಮೊದಲ ಎಸೆತದಲ್ಲೇ ಕರುಣರತ್ನೆಯನ್ನು ಮೊಹಮ್ಮದ್ ಶಮಿ ಔಟ್ ಮಾಡಿದರು. ನಂತರ ಡಿ ಸಿಲ್ವಾ 1 ರನ್ ಗಳಿಸಿ ಔಟಾದರು. ಉತ್ತಮವಾಗಿ ಆಡುತ್ತಿದ್ದ ಪೆರೇರಾ(42)ರನ್ನು ಜಡೇಜಾ ಎಲ್ ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಎರಡನೇ ದಿನದಾಟದಂತ್ಯಕ್ಕೆ ಲಂಕಾ 3 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿದ್ದು 57 ರನ್ ಗಳಿಸಿರುವ ಮ್ಯಾಥ್ಯೂಸ್ ಹಾಗೂ 25 ರನ್ ಗಳಿಸಿರುವ ಚಾಂಡಿಮಲ್ ಮೂರನೇ ದಿನದಾಟವನ್ನು ಪ್ರಾರಂಭಿಸಲಿದ್ದಾರೆ.
ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಡೇಜಾ ತಲಾ 1 ವಿಕೆಟ್ ಪಡೆದಿದ್ದಾರೆ.
ಭಾರತ ಪರ ಮುರಳಿ ವಿಜಯ್ 155, ಶಿಖರ್ ಧವನ್ 23, ಪೂಜಾರ 23, ವಿರಾಟ್ ಕೊಹ್ಲಿ 243, ರಹಾನೆ 1, ರೋಹಿತ್ ಶರ್ಮಾ 65, ಅಶ್ವಿನ್ 4, ವೃದ್ಧಿಮಾನ್ ಸಾಹಾ ಅಜೇಯ 9, ರವೀಂಜ್ರ ಜಡೇಜಾ ಅಜೇಯ 5 ರನ್ ಗಳಿಸಿದ್ದಾರೆ.
ಲಂಕಾ ಪರ ಸಂದಕನ್ 4, ಘಮಗೆ 2, ಪೆರೇರಾ 1 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


