ಕ್ರಿಕೆಟ್

ಅಳುವ ಬಾಲಕಿ ವಿಡಿಯೋ ಶೇರ್ ಮಾಡಿದ್ದ ಕೊಹ್ಲಿ ವಿರುದ್ಧ ಬಾಲಿವುಡ್ ಗಾಯಕ ಕಿಡಿ

ಮಗುವಿಗೆ ಪಾಠ ಹೇಳಿಕೊಡುವಾಗ ತಾಯಿಯ ಕಠಿಣ ವರ್ತನೆಯಿದ್ದ ವಿಡಿಯೋವೊಂದನ್ನು ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಶಿಖರ್ ಧವನ್, ಯುವರಾಜ್ ಸಿಂಗ್ ...

ಅಳುವ ಬಾಲಕಿ ವಿಡಿಯೋ ಶೇರ್ ಮಾಡಿದ್ದ ಕೊಹ್ಲಿ ವಿರುದ್ಧ ಬಾಲಿವುಡ್ ಗಾಯಕ ಕಿಡಿ
ವಿರಾಟ್ ಕೊಹ್ಲಿ ಮತ್ತು ಬಾಲಕಿ ಹಯಾ
Published On :
ನವದೆಹಲಿ: ಮಗುವಿಗೆ ಪಾಠ ಹೇಳಿಕೊಡುವಾಗ ತಾಯಿಯ ಕಠಿಣ ವರ್ತನೆಯಿದ್ದ ವಿಡಿಯೋವೊಂದನ್ನು ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಶಿಖರ್ ಧವನ್, ಯುವರಾಜ್ ಸಿಂಗ್ ಮತ್ತು ರಾಬಿನ್ ಉತ್ತಪ್ಪ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಶೇರ್ ಮಾಡಿದ್ದರು.
ವಿಡಿಯೋದಲ್ಲಿರುವ ಪುಟ್ಟ ಹುಡುಗಿ ಬಾಲಿವುಡ್ ಗಾಯಕರಾದ ತೋಷಿ ಮತ್ತು ಶರಿಬ್ ಸಬ್ರಿ ಅವರ ಸಹೋದರಿಯ ಪುತ್ರಿ. ಮೂರು ವರ್ಷ ವಯಸ್ಸಿನ ಹಯಾ ಎಂದು ತಿಳಿದು ಬಂದಿದೆ.
ವಿಡಿಯೋವೊಂದನ್ನು ಶೇರ್ ಮಾಡಿದ್ದ ವಿರಾಟ್ ಕೊಹ್ಲಿ ಮತ್ತು  ಮಕ್ಕಳ ಜೊತೆ ಮೃಗೀಯ ವರ್ತನೆ ನಿಲ್ಲಿಸಿ ಎಂದು ಮನವಿ ಮಾಡಿದ್ದರು. 
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ಗಾಯಕ ತೋಷಿ ಒಂದೂವರೆ ನಿಮಿಷದ ಈ ವೀಡಿಯೋದಲ್ಲಿ ತಾಯಿಯೊಬ್ಬಳಿಗೆ ತನ್ನ ಮಗುವಿನ ಮೇಲಿನ ಪ್ರೀತಿಯ ಬಗ್ಗೆ ಪ್ರಶ್ನಿಸಲಾಗದು ಎಂದು ಕಿಡಿಕಾರಿದ್ದಾರೆ. .
ಈ ಕುರಿತು ಪ್ರತಿಕ್ರಿಯೆ ನೀಡಿರುವ ತೋಷಿ ಹಾಗೂ ಸಬ್ರಿ, ನಮ್ಮ ಸೋದರಿ ಮಗಳು ಹಯಾ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ.
ಹಯಾಳನ್ನು ಬಯ್ದರೆ ಕೆಲ ಕ್ಷಣದಲ್ಲೇ ಅದನ್ನು ಮರೆತುಬಿಟ್ಟು ಆಡಲು ಓಡುತ್ತಾಳೆ. ಆದರೆ, ಹಾಗೆಂದು ಅವಳನ್ನು ಕೇವಲ ಮುದ್ದು ಮಾಡಿದರೆ ಆಕೆ ಓದಿನ ಬಗ್ಗೆ ನಿರ್ಲಕ್ಷ ತಳೆಯುವುದಿಲ್ಲವೇ, ಆಮೇಲೆ ಆಕೆ ಓದಲು ಬರೆಯಲು ಕಷ್ಟ ಪಡಬೇಕಾಗುತ್ತದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.