ಕ್ರಿಕೆಟ್

2019ರ ವಿಶ್ವಕಪ್ ಅನ್ನು ಟೀಂ ಇಂಡಿಯಾ ಖಂಡಿತವಾಗಿಯೂ ಗೆಲ್ಲುತ್ತದೆ: ಅಕ್ಷರ್ ಪಟೇಲ್

ಇಂಗ್ಲೆಂಡ್ ನಲ್ಲಿ ನಡೆಯಲಿರುವ 2019ರ ವಿಶ್ವಕಪ್ ಅನ್ನು ಟೀಂ ಇಂಡಿಯಾ ಖಂಡಿತವಾಗಿಯೂ ಗೆಲ್ಲುತ್ತದೆ ಎಂದು ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಭವಿಷ್ಯ...

2019ರ ವಿಶ್ವಕಪ್ ಅನ್ನು ಟೀಂ ಇಂಡಿಯಾ ಖಂಡಿತವಾಗಿಯೂ ಗೆಲ್ಲುತ್ತದೆ: ಅಕ್ಷರ್ ಪಟೇಲ್
ಅಕ್ಷರ್ ಪಟೇಲ್-ಜಸ್ ಪ್ರೀತ್ ಬುಮ್ರಾ
Published On :
ಡಂಬುಲ್ಲಾ(ಶ್ರೀಲಂಕಾ): ಇಂಗ್ಲೆಂಡ್ ನಲ್ಲಿ ನಡೆಯಲಿರುವ 2019ರ ವಿಶ್ವಕಪ್ ಅನ್ನು ಟೀಂ ಇಂಡಿಯಾ ಖಂಡಿತವಾಗಿಯೂ ಗೆಲ್ಲುತ್ತದೆ ಎಂದು ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಭವಿಷ್ಯ ನುಡಿದಿದ್ದಾರೆ. 
ಸದ್ಯದ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಉತ್ತಮವಾಗಿ ಆಡುತ್ತಿದ್ದು ಬಲಿಷ್ಠ ತಂಡವಾಗಿದೆ. ಹೀಗಾಗಿ ಭಾರತ ಮುಂಬವರು ವಿಶ್ವಕಪ್ ಅನ್ನು ಗೆಲ್ಲುವ ಫೆವರೆಟ್ ತಂಡವಾಗಿದೆ ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ. 
ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಸದ್ಯ ಲಂಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಇನ್ನು ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 9 ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿದೆ ಎಂದರು. 
ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬುಮ್ರಾ ಮತ್ತು ಅಕ್ಷರ್ ಪಟೇಲ್ ನಡುವಿನ ಸಂದರ್ಶನದಲ್ಲಿ ಅಕ್ಷರ್ ಪಟೇಲ್, ಪ್ರಸ್ತುತ ಭಾರತ ಕ್ರಿಕೆಟ್ ತಂಡ ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿಲ್ಲ ಎಂಬುದು ಈ ತಂಡದ ಮಹತ್ವದ ಅಂಶವಾಗಿದೆ. ಇನ್ನು ಎಲ್ಲಾ ಆಟಗಾರರು ಉತ್ತಮವಾಗಿ ಆಡುತ್ತಿದ್ದು ಮುಂದಿನ ಪಂದ್ಯಗಳಲ್ಲೂ ಇದೇ ರೀತಿಯ ಆಟವನ್ನು ಮುಂದುವರೆಸಲಾಗುವುದು ಎಂದರು. 
 ಸದ್ಯ ತಂಡದಲ್ಲಿ ಯುವ ಆಟಗಾರರ ದಂಡೆ ಇದೆ. 26-27ರ ಆಸುಪಾಸಿನ ವಯಸ್ಸಿನವರಾಗಿದ್ದು ಪ್ರತಿಯೊಬ್ಬರ ಸಾಧನೆಯನ್ನು ಸಂಭ್ರಮಿಸುತ್ತೇವೆ. ಈಗಿರುವಾಗ 2019ರ ವಿಶ್ವಕಪ್ ಅನ್ನು ಖಂಡಿತವಾಗಿಯೂ ನಾವೇ ಗೆಲ್ಲುತ್ತೇವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. 
ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡಿದ್ದ ಅಕ್ಷರ್ ಪಟೇಲ್ ತಮ್ಮ ಸ್ಪಿನ್ ದಾಳಿಯಿಂದ ಲಂಕಾ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ್ದರು. 34 ರನ್ ಗಳಿಗೆ 3 ವಿಕೆಟ್ ಪಡೆಯುವ ಮೂಲಕ ತಮ್ಮ ವೃತ್ತಿ ಬದುಕಿನ ಶ್ರೇಷ್ಠ ಸಾಧನೆ ಮಾಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.