ಜಹೀರ್ ಖಾನ್ ನಿಶ್ಚಿತಾರ್ಥ: ಟ್ವಿಟ್ಟರ್ ನಲ್ಲಿ ಶುಭಾಶಯ ಹೇಳುವಾಗ ಅನಿಲ್ ಕುಂಬ್ಳೆ ಯಡವಟ್ಟು
ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ನಾಯಕ, ಭಾರತದ ಮಾಜಿ ಕ್ರಿಕೆಟಿಗ ಜಹೀರ್ ಖಾನ್, ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಜೊತೆ ನಿಶ್ಚಿತಾರ್ಥದ ಸುದ್ದಿಯನ್ನು ಟ್ವಿಟ್ಟರ್ ನಲ್ಲಿ ..

Published On :
ನವದೆಹಲಿ: ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ನಾಯಕ, ಭಾರತದ ಮಾಜಿ ಕ್ರಿಕೆಟಿಗ ಜಹೀರ್ ಖಾನ್, ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಜೊತೆ ನಿಶ್ಚಿತಾರ್ಥದ ಸುದ್ದಿಯನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು.
ಈ ಜೋಡಿಗೆ ಹಲವು ಸಿನಿಮಾ ತಾರೆಯರು ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತ ತಂಡದ ಪ್ರಧಾನ ಕೋಚ್ ಅನಿಲ್ ಕುಂಬ್ಳೆ ಟ್ವಿಟರ್‌ನಲ್ಲಿ ಜಹೀರ್ ಜೋಡಿಗೆ ಶುಭಹಾರೈಕೆಗಳನ್ನು ಕೋರುವಾಗ ಯವಟ್ಟು ಮಾಡಿ ಮುಜುಗರಕ್ಕೆ ಒಳಗಾಗಿದ್ದಾರೆ.
ಸಾಗರಿಕಾ ಘಾಟ್ಗೆ ಬದಲಿಗೆ, ಕುಂಬ್ಳೆ ಹಿರಿಯ ಪತ್ರಕರ್ತೆ ಸಾಗರಿಕಾ ಘೋಷ್ ಅವರ ಹೆಸರು ಟ್ಯಾಗ್ ಮಾಡಿದ್ದರು, ತಪ್ಪಿನ ಅರಿವಾದ ಕೂಡಲೇ ಕುಂಬ್ಳೆ ಹಳೆ ಟ್ವೀಟನ್ನು ತೆಗೆದು ಹಾಕಿ, ಹೊಸದಾಗಿ ಶುಭಾಶಯ ಸಂದೇಶ ಬರೆದಿದ್ದಾರೆ. ಕುಂಬ್ಳೆ ಮಾತ್ರವಲ್ಲ, ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಅಧಿಕೃತ ಟ್ವಿಟರ್ ಪುಟದಲ್ಲೂ ಇದೇ ರೀತಿಯ ತಪ್ಪಾಗಿತ್ತು.
Monday gets to the best of us.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Twitterಟ್ವಿಟ್ಟರ್Zaheer Khanಅನಿಲ್ ಕುಂಬ್ಳೆನಿಶ್ಚಿತಾರ್ಥengagedAnil Kumbleಜಹೀರ್ ಖಾನ್Sagarika Ghatgeಸಾಗರಿಕಾ ಘಾಟ್ಕೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


