ಕ್ರಿಕೆಟ್

ಐಸಿಸಿ ನೀಡಿದ 643 ಕೋಟಿ ರು. ಆಫರ್ ತಿರಸ್ಕರಿಸಿದ ಬಿಸಿಸಿಐ

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಡುವಿನ ಹಣಕಾಸು ಹಂಚಿಕೆ ತಿಕ್ಕಾಟ ತಾರಕಕ್ಕೇರಿದ್ದು...

ಐಸಿಸಿ ನೀಡಿದ 643 ಕೋಟಿ ರು. ಆಫರ್ ತಿರಸ್ಕರಿಸಿದ ಬಿಸಿಸಿಐ
ಟೀಂ ಇಂಡಿಯಾ
Published On :
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಡುವಿನ ಹಣಕಾಸು ಹಂಚಿಕೆ ತಿಕ್ಕಾಟ ತಾರಕಕ್ಕೇರಿದ್ದು ಐಸಿಸಿಯ ನೀಡಿದ 643 ಕೋಟಿ ಆಫರ್ ಅನ್ನು ಬಿಸಿಸಿಐ ತಿರಸ್ಕರಿಸಿದೆ. 
ದುಬೈನಲ್ಲಿ ನಡೆದ ಐಸಿಸಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಹಣಕಾಸು ಹಂಚಿಕೆಗೆ ಹೊಸ ಮಾದರಿ ಜಾರಿ ತಂದಿದ್ದು ಅದರನುಸಾರ ಹೆಚ್ಚುವರಿ 100 ಮಿಲಿಯನ್ ಅಮೆರಿಕನ್ ಡಾಲರ್(ಅಂದಾಜು 643 ಕೋಟಿ ರು.) ನೀಡುವ ಪ್ರಸ್ತಾಪವನ್ನು ಬಿಸಿಸಿಐ ತಿರಸ್ಕರಿಸಿದೆ. 
ಶಶಾಂಕ್ ಮನೋಹರ್ ನಮಗೆ ಹೆಚ್ಚುವರಿ ಹಣ ನೀಡುವುದಾಗಿ ಪ್ರಸ್ತಾಪಿಸಿದ್ದು ನಿರ್ದಿಷ್ಟ ಸಮಯದೊಳಗೆ ನಿರ್ಧಾರ ತಿಳಿಸುವಂತೆ ಸೂಚಿಸಿದ್ದಾರೆ. ಆದರೆ ನಾವು ಅವರ ಪ್ರಸ್ತಾಪವನ್ನು ತಿರಸ್ಕರಿಸುತ್ತಿದ್ದೇವೆ. ಹೀಗಿದ್ದಾಗ ಮತ್ತೆ ನಿರ್ಧಾರ ತಿಳಿಸುವ ಅವಶ್ಯಕತೆ ಇಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
ಐಸಿಸಿ ಬಿಸಿಸಿಐ ನಡುವಿ ಸಂಘರ್ಘದಿಂದಾಗಿ ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾ ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಜೂನ್ 1ರಿಂದ ಇಂಗ್ಲೆಂಡ್ ನಲ್ಲಿ ಆರಂಭಗೊಳ್ಳಲಿರುವ ಟೂರ್ನಿಗೆ ಪ್ರಸ್ತುತ ತಂಡವನ್ನು ಪ್ರಕಟಿಸಬೇಕಿತ್ತು. ಉಭಯ ಮಂಡಳಿಗೆ ಕಿತ್ತಾಟದಿಂದಾಗಿ ಟೂರ್ನಿಯಲ್ಲಿ ಭಾರತ ಆಡುವ ಸಾಧ್ಯತೆ ಕಡಿಮೆ ಇದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.