ಅನುರಾಗ್ ಠಾಕೂರ್ ಸೇರಿ ಬಿಸಿಸಿಐ ವರಿಷ್ಠರ ವಜಾ ಮಾಡಿ: ಸುಪ್ರೀಂಗೆ ಲೋಧ ಸಮಿತಿ
ನ್ಯಾಯಮೂರ್ತಿ ಲೋಧ ಸಮಿತಿ ಶಿಫಾರಸ್ಸುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ತರಾಟೆ ತೆಗೆದುಕೊಂಡಿದೆ...

Published On :
ನವದೆಹಲಿ: ನ್ಯಾಯಮೂರ್ತಿ ಲೋಧ ಸಮಿತಿ ಶಿಫಾರಸ್ಸುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ತರಾಟೆ ತೆಗೆದುಕೊಂಡಿದೆ.
ಲೋಧ ಸಮಿತಿಯ ಶಿಫಾರಸ್ಸುಗಳನ್ನು ಪಾಲಿಸದ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿನ ಅಜಯ್ ಶಿರ್ಕೆ ಸೇರಿದಂತೆ ಬಿಸಿಸಿಐನ ಉನ್ನತಾಧಿಕಾರಿಗಳನ್ನು ಸ್ಥಾನದಿಂದ ವಜಾಗೊಳಿಸುವಂತೆ ಸಮಿತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಬಿಸಿಸಿಐಗೆ ಲೋಧ ಸಮಿತಿಯ ಶಿಫಾರಸ್ಸುಗಳನ್ನು ಪಾಲಿಸುವಂತೆ ಆದೇಶಿಸಿದೆ.
ಕೋರ್ಟ್ ಮುಂದೆ ಲೋಧ ಸಮಿತಿಯು ನಾವು ಕಳುಹಿಸಿದ ಇಮೇಲ್ ಹಾಗೂ ಇನ್ನಿತ್ತರ ಯಾವುದೇ ಸಂಪರ್ಕ ಸಂವಹನಕ್ಕೆ ಬಿಸಿಸಿಐ ಪ್ರತಿಕ್ರಿಯಿಸಿದೆ ನ್ಯಾಯಾಲಯದ ಆಜ್ಞೆಯನ್ನು ಉಲ್ಲಂಘಿಸಿದೆ ಎಂದು ವಾದಿಸಿತು. ಇದಕ್ಕೆ ನ್ಯಾಯಮೂರ್ತಿ ಟಿಎಸ್ ಠಾಕೂರ್ ಅವರು ಲೋಧ ಸಮಿತಿ ಗಂಭೀರ ಆರೋಪಗಳನ್ನು ಮಾಡುತ್ತಿದ್ದು ಬಿಸಿಸಿಐ ಕೋರ್ಟ್ ನ ಆದೇಶವನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.
ಬಿಸಿಸಿಐ ತಮ್ಮದೆ ಕಾನೂನು ಎಂದು ಬಾವಿಸಿದರೆ ಅದು ತಪ್ಪು. ಕೋರ್ಟ್ ನ ಆದೇಶಗಳನ್ನು ಬಿಸಿಸಿಐ ಪಾಲಿಸಬೇಕು. ನೀವು (ಬಿಸಿಸಿಐ) ಧಣಿಗಳಂತೆ ವರ್ತಿಸಿದರೆ ನಾವು ನಿಮ್ಮನ್ನು ಸರಿ ದಾರಿಗೆ ತರಬೇಕಾಗುತ್ತದೆ ಎಂದು ನ್ಯಾಯಾಮೂರ್ತಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್supreme courtಸುಪ್ರೀಂಕೋರ್ಟ್BCCIಬಿಸಿಸಿಐAnurag Thakurಅನುರಾಗ್ ಠಾಕೂರ್ಲೋಧಾ ಸಮಿತಿLodha panel
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


