ರಣಜಿ ಕ್ರಿಕೆಟ್ ನಲ್ಲಿ ಡಬಲ್ ಸೆಂಚುರಿ, ಇಂಗ್ಲೆಂಡ್ ವಿರುದ್ಧದ ಸರಣಿಗೆ ತಾವು ಸಿದ್ಧ ಎಂದ ಯುವಿ
ಪ್ರಸಕ್ತ ಸಾಲಿನ ರಣಜಿ ಋತುವಿನಲ್ಲಿ ಪಂಜಾಬ್ ನಾಯಕ ಹಾಗೂ ಸ್ಫೋಟಕ ಬ್ಯಾಟ್ಸಮನ್ ಭರ್ಜರಿ ಆಟದ ಮೂಲಕ ಫಾರ್ಮ್ ಗೆ ಮರಳಿದ್ದು, ಬರೋಡಾ ವಿರುದ್ಧ ಆಕರ್ಷ|ಕ ದ್ವಿಶತಕ ಸಿಡಿಸುವ ಮೂಲಕ ಇಂಗ್ಲೆಂಡ್ ವಿರುದ್ಧದ ಸರಣಿಗೆ ತಾವೂ ಸಿದ್ದ ಎಂದು ಸಾಬೀತು ಪಡಿಸಿದ್ದಾರೆ.

ನವದೆಹಲಿ: ಪ್ರಸಕ್ತ ಸಾಲಿನ ರಣಜಿ ಋತುವಿನಲ್ಲಿ ಪಂಜಾಬ್ ನಾಯಕ ಹಾಗೂ ಸ್ಫೋಟಕ ಬ್ಯಾಟ್ಸಮನ್ ಭರ್ಜರಿ ಆಟದ ಮೂಲಕ ಫಾರ್ಮ್ ಗೆ ಮರಳಿದ್ದು, ಬರೋಡಾ ವಿರುದ್ಧ ಆಕರ್ಷ|ಕ ದ್ವಿಶತಕ ಸಿಡಿಸುವ ಮೂಲಕ ಇಂಗ್ಲೆಂಡ್ ವಿರುದ್ಧದ ಸರಣಿಗೆ ತಾವೂ ಸಿದ್ದ ಎಂದು ಸಾಬೀತು ಪಡಿಸಿದ್ದಾರೆ.
ಕಳಪೆ ಫಾರ್ಮ್ ನಿಂದಾಗಿ ಟೆಸ್ಟ್ ಕ್ರಿಕೆಟ್ ನಿಂದ ದೂರವುಳಿದಿದ್ದ ಯುವಿ, ದೆಹಲಿಯಲ್ಲಿ ನಡೆದ ರಣಜಿ ಟೂರ್ನಿಯ ಗ್ರೂಪ್ ಎ ವಿಭಾಗದ ಪಂದ್ಯದಲ್ಲಿ ಬರಡೋ ವಿರುದ್ಧ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. ಅಂತೆಯೇ ಪಂಜಾಬ್ ಗೆ ತಂಡಕ್ಕೆ ನಾಯಕ ಯುವಿ 3 ಅಂಕಗಳಿಸಿಕೊಡುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಬರೋಡಾ ತಂಡದ ಬೌಲರ್ ಗಳನ್ನು ಸುಧೀರ್ಘವಾಗಿ ಕಾಡಿದ ಯುವಿ ಹಾಗೂ ವೋಹ್ರಾ ಜೋಡಿ 343 ರನ್ ಗಳ ಜೊತೆಯಾಟವಾಡುವ ಮೂಲಕ ಪಂಜಾಬ್ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟಿತು. ಕೇವಲ ರಣಜಿ ಕ್ರಿಕೆಟ್ ಮಾತ್ರವಲ್ಲದೇ ತಮ್ಮ ಭರ್ಜರಿ ಆಟದ ಮೂಲಕ ಯುವಿ ರಾಷ್ಟ್ರೀಯ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬರೋಡಾ ಬೌಲರ್ ಗಳನ್ನು ಕಾಡಿದ ಯುವಿ ಒಟ್ಟು 260 ರನ್ ಸಿಡಿಸುವ ಮೂಲಕ ಸೀಸನ್ 2ನೇ ದ್ವಿಶತಕ ಸಿಡಿಸಿದರು.
ಯುವಿಯ ಭರ್ಜರಿ ದ್ವಿಶತಕದಲ್ಲಿ ಒಟ್ಟು 26 ಬೌಂಡರಿ, ನಾಲ್ಕು ಸಿಕ್ಸರ್ ಗಳನ್ನು ಸಿಡಿಸಿದ್ದರು. ಯುವಿಗೆ ಭರ್ಜರಿ ಸಾಥ್ ನೀಡಿದ ವೋಹ್ರಾ ಕೂಡ 20 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. ಆ ಮೂಲಕ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಯುವಿ ಹಾಗೂ ವೋಹ್ರಾ ಸಿದ್ಧ ಎಂದು ಸಾಬೀತು ಪಡಿಸಿದ್ದಾರೆ. ಕಳಪೆ ಫಾರ್ಮ್ ನಿಂದ ಟೆಸ್ಟ್ ಕ್ರಿಕೆಟ್ ನಿಂದ ದೂರುವುಳಿದಿದ್ದ ಯುವಿ ಭರ್ಜರಿ ಆಟದ ಮೂಲಕ ಫಾರ್ಮ್ ಗೆ ಮರಳಿದ್ದು, ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆದಾರರು ಯುವಿಯನ್ನು ಪರಿಗಣಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


