ಧೋನಿ ಮ್ಯಾಜಿಕ್ ಗೆ ರಾಸ್ ಟೇಲರ್ ಔಟ್; ಟ್ವಿಟರ್ ನಲ್ಲಿ ವೈರಲ್ ಆಯ್ತು ರನ್ ಔಟ್ ದೃಶ್ಯ
ಧೋನಿ ತವರು ರಾಂಚಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ 4ನೇ ಏಕದಿನ ಪಂದ್ಯದಲ್ಲಿ ಭಾರತ ಸೋತಿರಬಹುದು. ಆದರೆ ತಮ್ಮ ಕೈಚಳಕದ ಮೂಲಕ ತವರಿನ ಅಭಿಮಾನಿಗಳ ಮನ ಗೆಲ್ಲುವಲ್ಲಿ ಧೋನಿ ಯಶಸ್ವಿಯಾಗಿದ್ದಾರೆ.

ರಾಂಚಿ: ಧೋನಿ ತವರು ರಾಂಚಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ 4ನೇ ಏಕದಿನ ಪಂದ್ಯದಲ್ಲಿ ಭಾರತ ಸೋತಿರಬಹುದು. ಆದರೆ ತಮ್ಮ ಕೈಚಳಕದ ಮೂಲಕ ತವರಿನ ಅಭಿಮಾನಿಗಳ ಮನ ಗೆಲ್ಲುವಲ್ಲಿ ಧೋನಿ ಯಶಸ್ವಿಯಾಗಿದ್ದಾರೆ.
ಭಾರತ ತಂಡಡ ನಾಯಕ ಎಂಎಸ್ ಧೋನಿ ಎಂತಹ ಚಾಣಾಕ್ಷ್ಯ ವಿಕೆಟ್ ಕೀಪರ್ ಎನ್ನುವುದಕ್ಕೆ ವಿಕೆಟ್ ಹಿಂದೆ ಅವರು ಹಿಡಿದಿರುವ ಕ್ಯಾಚ್ ಗಳು ಹಾಗೂ ಸ್ಟಂಪ್ ಔಟ್ ಗಳೇ ಸಾಕ್ಷಿಯಾಗಿ ನಿಲ್ಲುತ್ತವೆ. ನಿನ್ನೆ ರಾಂಚಿಯಲ್ಲಿ ನಡೆದ 4ನೇ ಏಕದಿನ ಪಂದ್ಯ ಇದಕ್ಕೆ ಮತ್ತೊಂದು ಸ್ಪಷ್ಟ ಮತ್ತು ನಿಖರ ಉದಾಹರಣೆಯಂತಿದ್ದು, ಪಂದ್ಯದಲ್ಲಿ ನಾಯಕ ಧೋನಿ ರಾಸ್ ಟೇಲರ್ ಅವರನ್ನು ರನ್ ಔಟ್ ಮಾಡಿದ ಪರಿ ಕೇವಲ ಪ್ರೇಕ್ಷಕರಲ್ಲಿ ಮಾತ್ರವೇ ಅಲ್ಲದೇ ಸ್ವತಃ ಕ್ರಿಕೆಟ್ ತಜ್ಞರಿಗೂ ಅಚ್ಚರಿ ತಂದಿದೆ ಮತ್ತು ವಿಕೆಟ್ ಕೀಪಿಂಗ್ ನಲ್ಲಿ ಧೋನಿ ತಾವೆಷ್ಟು ನಿಪುಣರು ಎಂದು ತೋರಿಸಿಕೊಟ್ಟಿದ್ದಾರೆ.
ನ್ಯೂಜಿಲೆಂಡ್ ಇನ್ನಿಂಗ್ಸ್ ನ ಅಂತಿಮ ಘಟದಲ್ಲಿ ಅಬ್ಬರ ಬ್ಯಾಟಿಂಗ್ ನಡೆಸುತ್ತಿದ್ದ ಸ್ಫೋಟಕ ಬ್ಯಾಟ್ಸಮನ್ ರಾಸ್ ಟೇಲರ್ ಅವರನ್ನು ಧೋನಿ ರನ್ ಔಟ್ ಮಾಡಿದ್ದರು. ಕುಲಕರ್ಣಿ ಎಸೆದ ಬಾಲ್ ಆನ್ನು ಧೋನಿ ವಿಕೆಟ್ ಅನ್ನು ನೋಡದೆಯೇ ನಿಖರವಾಗಿ ಎಸೆದು ಬೇಲ್ಸ್ ಹಾರಿಸಿದ್ದರು. ಆ ಒಂದು ಮ್ಯಾಜಿಕಲ್ ರನ್ ಔಟ್ ನಿಂದ ರಾಸ್ ಟೇಲರ್ ಔಟ್ ಆಗಿ ಪೆವಿಲಿಯನ್ ಸೇರಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


