ಕ್ರಿಕೆಟ್

ಯುವರಾಜ್ ಸಿಂಗ್ ಸಿಂಹ, ಅವನು ಡ್ರಗ್ಸ್ ಸೇವಿಸಲ್ಲ: ಯೋಗರಾಜ್ ಸಿಂಗ್

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಡ್ರಗ್ಸ್ ವ್ಯಸನಿ ಆರೋಪವನ್ನು ತಳ್ಳಿ ಹಾಕಿರುವ ತಂದೆ ಯೋಗರಾಜ್ ನನ್ನ ಮಗ ಸಿಂಹ, ಹುಲ್ಲು ತಿನ್ನುವುದಿಲ್ಲ...

ಯುವರಾಜ್ ಸಿಂಗ್ ಸಿಂಹ, ಅವನು ಡ್ರಗ್ಸ್ ಸೇವಿಸಲ್ಲ: ಯೋಗರಾಜ್ ಸಿಂಗ್
ಯುವರಾಜ್ ಸಿಂಗ್, ಯೋಗರಾಜ್ ಸಿಂಗ್
Published On :
ನವದೆಹಲಿ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಡ್ರಗ್ಸ್ ವ್ಯಸನಿ ಆರೋಪವನ್ನು ತಳ್ಳಿ ಹಾಕಿರುವ ತಂದೆ ಯೋಗರಾಜ್ ನನ್ನ ಮಗ ಸಿಂಹ, ಹುಲ್ಲು ತಿನ್ನುವುದಿಲ್ಲ ಎಂದು ಹೇಳಿದ್ದಾರೆ. 
ಯುವರಾಜ್ ಸಿಂಗ್ ಸಹೋದರ ಜೋರಾವರ್ ಸಿಂಗ್ ಪತ್ನಿ ಆಕಾಂಕ್ಷಾ ಶರ್ಮಾ ಇತ್ತೀಚೆಗಷ್ಟೇ ಹಿಂದಿಯ ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರಬಿದ್ದಿದ್ದು ಬಳಿಕ ಸಂದರ್ಶನವೊಂದರಲ್ಲಿ ಆಕಾಂಕ್ಷಾ ಯುವರಾಜ್ ಸಿಂಗ್ ಡ್ರಗ್ಸ್ ಸೇವಿಸುತ್ತಿದ್ದರು ಎಂದು ಹೇಳಿದ್ದರು. 
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಯೋಗರಾಜ್ ಸಿಂಗ್, ಆಕೆ ಮೂರ್ಖತನದ ಮಾತುಗಳನ್ನಾಡುತ್ತಾಳೆ. ಇವುಗಳ ಕಡೆ ಗಮನ ನೀಡುವ ಅಗತ್ಯವಿಲ್ಲ. ನಾನು ನಾಲ್ಕು ಮಕ್ಕಳ ತಂದೆ. ಯಾರೋಬ್ಬರು ಡ್ರಗ್ಸ್ ನ ದಾಸರಲ್ಲ ಎಂದು ಹೇಳಿದ್ದಾರೆ. 
ಇನ್ನು ಯುವರಾಜ್ ಸಿಂಗ್ ವಿರುದ್ಧ ಆರೋಪ ಮಾಡಿದ ಆಕಾಂಕ್ಷಾ ವಿರುದ್ಧ ಯುವಿ ತಾಯಿ ಶಬ್ನಂ ಸಿಂಗ್ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧತೆ ನಡೆಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.