ಕ್ರಿಕೆಟ್

ಕೇರಂ ಸ್ಪೆಷಲಿಸ್ಟ್ ಅಶ್ವಿನ್ ಬಗ್ಗೆ ಎಚ್ಚರವಿರಲಿ: ಇಂಗ್ಲೆಂಡ್‌ ಆಟಗಾರರಿಗೆ ಪೀಟರ್ಸನ್ ಕಿವಿಮಾತು

ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವ ಭಾರತ ಇದೀಗ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದ್ದು, ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್...

ಕೇರಂ ಸ್ಪೆಷಲಿಸ್ಟ್ ಅಶ್ವಿನ್ ಬಗ್ಗೆ ಎಚ್ಚರವಿರಲಿ: ಇಂಗ್ಲೆಂಡ್‌ ಆಟಗಾರರಿಗೆ ಪೀಟರ್ಸನ್ ಕಿವಿಮಾತು
ಆರ್ ಅಶ್ವಿನ್-ಕೇವಿನ್ ಪೀಟರ್ಸನ್
Published On :
ಲಂಡನ್: ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವ ಭಾರತ ಇದೀಗ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದ್ದು, ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ಆಟಗಾರರಿಗೆ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಬಗ್ಗೆ ಎಚ್ಚರವಹಿಸುವಂತೆ ಮಾಜಿ ಕ್ರಿಕೆಟಿಗ ಕೇವಿನ್ ಪೀಟರ್ಸನ್ ಕಿವಿಮಾತು ಹೇಳಿದ್ದಾರೆ. 
ಐದು ಪಂದ್ಯಗಳ ಟೆಸ್ಟ ಸರಣಿಯ ಮೊದಲ ಪಂದ್ಯ ನವೆಂಬರ್ 9 ರಿಂದ ರಾಜ್ ಕೋಟ್ ನಲ್ಲಿ ಆರಂಭವಾಗಲಿದ್ದು, ಭಾರತ ಪರ ಉತ್ತಮ ಪ್ರದರ್ಶನ ನೀಡುತ್ತಿರುವ ಆರ್ ಅಶ್ವಿನ್ ಬಗ್ಗೆ ಎಚ್ಚರವಹಿಸುವಂತೆ ಹೇಳಿದ್ದಾರೆ. ಆರ್ ಅಶ್ವಿನ್ ಶ್ರೇಷ್ಠ ಬೌಲರ್, ವಿವಿಧ ಪ್ರಯೋಗಗಳಿಂದ ಬೌಲಿಂಗ್ ಮಾಡುವುದರಲ್ಲಿ ಸಿದ್ಧ ಹಸ್ತರು ಎಂದು ಹೇಳಿದ್ದಾರೆ. 
ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಪೈಕಿ ಆರು ಇನ್ನಿಂಗ್ಸ್ ಗಳಲ್ಲಿ ಆಡಿರುವ ಆರ್ ಅಶ್ವಿನ್ ತಮ್ಮ ಮಾರಕ ಸ್ಪಿನ್ ದಾಳಿಯಿಂದ ಒಟ್ಟು 27 ವಿಕೆಟ್ ಗಳನ್ನು ಪಡೆದಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.