ಕ್ರಿಕೆಟ್ ತೀರ್ಪು ಬದಲಿಸಲಿಲ್ಲವೆಂದು ಅಂಪೈರ್ ತಂಗಿ ಕೊಂದ ಸ್ನೇಹಿತ
ಬೌಲರ್ ಎಸೆತದ ಚೆಂಡಿಗೆ ನೋ ಬಾಲ್ ಎಂದು ತೀರ್ಪು ನೀಡಿದ್ದಕ್ಕೆ ಕ್ರಿಕೆಟರ್ ಒಬ್ಬ ಅಂಪೈರ್ ತಂಗಿಯನ್ನೇ ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ...

ನವದೆಹಲಿ: ಬೌಲರ್ ಎಸೆತದ ಚೆಂಡಿಗೆ ನೋ ಬಾಲ್ ಎಂದು ತೀರ್ಪು ನೀಡಿದ್ದಕ್ಕೆ ಕ್ರಿಕೆಟರ್ ಒಬ್ಬ ಅಂಪೈರ್ ತಂಗಿಯನ್ನೇ ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಹೆಚ್ಚುತ್ತಿರುವ ಐಪಿಎಲ್ ಖ್ಯಾತಿಯು ದೇಶದ ಭಾಗಗಳಲ್ಲಿ ಸ್ಥಳೀಯ ಕ್ರಿಕೆಟ್ ಲೀಗ್ ಆಯೋಜಿಸಲು ಉತ್ತೇಜನ ನೀಡುತ್ತಿದೆ. ಈ ಟ್ರೆಂಡ್ ಅನುಸರಿಸಿ ಉತ್ತರ ಪ್ರದೇಶದ ಅಲಿಗಢನಲ್ಲಿರುವ ಜರಾರಾ ನಗರದಲ್ಲೂ ಕ್ರಿಕೆಟ್ ಲೀಗ್ ಆಯೋಜಿಸಲಾಗಿತ್ತು. ಜರಾರಾ ಪ್ರೀಮಿಯರ್ ಲೀಗ್ ಎಂಬ ಹೆಸರಿನ ಪಂದ್ಯಾವಳಿಯಲ್ಲಿ ಅಂಪೈರ್ ರಾಜ್ ಕುಮಾರ್ ನೀಡಿದ ತೀರ್ಪು ಈ ಮಟ್ಟದಲ್ಲಿ ಅನಾಹುತವನ್ನು ಸೃಷ್ಟಿಸಿದೆ.
ಮೇ 28 ರಂದು ಜರಾರಾ ಮತ್ತು ಬರಿಕಿ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಪಂದ್ಯ ನಿರ್ಣಾಯಕ ಹಂತದಲ್ಲಿದ್ದಾಗ ಬೌಲರ್ ಎಸೆದ ಚೆಂಡೊಂದಕ್ಕೆ ಅಂಪೈರ್ ನೋಬಾಲ್ ಎಂದು ತೀರ್ಪು ನೀಡಿದ್ದಾರೆ. ಬೌಲ್ ಮಾಡುತ್ತಿದ್ದ ತಂಡದ ಸದಸ್ಯ ಸಂದಿಪ್ ಪಾಲ್ ತನ್ನ ತೀರ್ಪನ್ನು ಬದಲಿಸುವಂತೆ ಅಂಪೈರ್ ಬಳಿ ಕದನಕ್ಕಿಳಿದಿದ್ದಾನೆ. ಆದರೆ ಅವರು ತಮ್ಮ ತೀರ್ಮಾನವನ್ನು ಬದಲಿಸಿಲ್ಲ. ಇದರಿಂದ ಸಿಟ್ಟಿಗೆದ್ದ ಪಾಲ್ ಅಂಪೈರ್ ರಾಜಕುಮಾರ್‌ನನ್ನು ಕೊಲ್ಲುವ ಬೆದರಿಕೆ ಒಡ್ಡಿದ್ದಾನೆ.
ಮರುದಿನ ಪಾಲ್ ಅಂಪೈರ್ ರಾಜ್ ಕುಮಾರ್ ಸಹೋದರಿ ಪೂಜಾ ಮತ್ತು ಆಕೆಯ ಮೂರು ಜನ ಸ್ನೇಹಿತೆಯರನ್ನು ಭೇಟಿಯಾಗಿದ್ದಾನೆ. ಮೊದಲಿನಿಂದಲೂ ಪರಿಚಿತನಾಗಿದ್ದ ಆತ ಕುಡಿಯಲು ತಂಪು ಪಾನೀಯ ನೀಡಿದಾಗ ಪೂಜಾ ಮತ್ತು ಆಕೆಯ ಸ್ನೇಹಿತರು ನಿರಾಕರಿಸಲಿಲ್ಲ. ಆದರೆ ಪಾಲ್ ಮೂವರಿಗೂ ತಂಪು ಪಾನೀಯದಲ್ಲಿ ವಿಷ ಬೆರಸಿ ಕೊಟ್ಟಿದ್ದಾನೆ. ಅದನ್ನು ಕುಡಿದ ಪೂಜಾ ತಕ್ಷಣ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಆಕೆಯ ಸ್ನೇಹಿತೆಯರು ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


