ಪುಟ್ಬಾಲಿಗ ಮೆಸ್ಸಿ, ಜೋಕೊವಿಕ್ ರನ್ನು ಹಿಂದಿಕ್ಕಿದ ಕೊಹ್ಲಿ
ವಿಶ್ವದ ಮೋಸ್ಟ್ ಮಾರ್ಕೆಟೆಬಲ್(ವ್ಯಾಪಾರಾರ್ಹ) ಕ್ರೀಡಾಪಟುಗಳ ಪಟ್ಟಿಯಲ್ಲಿ ಪುಟ್ಬಾಲ್ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಹಾಗೂ ಟೆನ್ನಿಸ್...

ನವದೆಹಲಿ: ವಿಶ್ವದ ಮೋಸ್ಟ್ ಮಾರ್ಕೆಟೆಬಲ್(ವ್ಯಾಪಾರಾರ್ಹ) ಕ್ರೀಡಾಪಟುಗಳ ಪಟ್ಟಿಯಲ್ಲಿ ಪುಟ್ಬಾಲ್ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಹಾಗೂ ಟೆನ್ನಿಸ್ ಆಟಗಾರ ನೋವಾಕ್ ಜೋಕೊವಿಕ್ ರನ್ನು ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ್ದಾರೆ.
ಕ್ರೀಡೆಯಲ್ಲಿನ ವಾಣಿಜ್ಯ ವ್ಯವಹಾರಗಳ ಬಗ್ಗೆ ಸಂಶೋಧನೆ ನಡೆಸಿರುವ ಸ್ಪೋರ್ಟ್ಸ್ ಪ್ರೋ ಕಳೆದ ಮೂರು ವರ್ಷದ ಅವಧಿಯಲ್ಲಿ ವಿಶ್ವದಲ್ಲಿ ಆಟಗಾರರು ಹಾಗೂ ಅವರ ಬ್ರಾಂಡ್ ಗೆ ಇರುವ ಮನ್ನಣೆ ಆಧರಿಸಿ ರ್ಯಾಂಕಿಂಗ್ ನೀಡಿದೆ.
ವಿಶ್ವದ 50 ಆಟಗಾರರ ಪಟ್ಟಿಯಲ್ಲಿ ಎನ್ಬಿಎ ಸ್ಟಾರ್ ಸ್ಟೇಫನ್ ಕರ್ರಿ ಅಗ್ರಸ್ಥಾನದಲ್ಲಿದ್ದರೆ, ಫ್ರಾನ್ಸ್ ನ ಫುಟ್ಬಾಲಿಗ ಪೌಲ್ ಪೋಗಾಬ್ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ನಾಲ್ಕನೇ ಸ್ಥಾನದಲ್ಲಿ ಗಾಲರ್ ಜೋರ್ಡನ್ ಸೆಪಿತ್ ಇದ್ದಾರೆ. ಜೋಕೊವಿಚ್ 23ನೇ ಸ್ಥಾನದಲ್ಲಿದ್ದರೆ, ಮೆಸ್ಸಿ ಹಾಗೂ ಸಿಂಟ್ ಕಿಂಗ್ ಉಸೇನ್ ಬೋಲ್ಟ್ ಕ್ರಮವಾಗಿ 27 ಸ್ಥಾನದಲ್ಲಿದ್ದಾರೆ.
ಪಟ್ಟಿಯಲ್ಲಿ ಭಾರತದ ಸಾನಿಯಾ ಮಿರ್ಜಾ ಹೊರತು ಪಡಿಸಿ ಮತ್ಯಾವ ಆಟಗಾರರು ಸ್ಥಾನಪಡೆದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


