ಕ್ರಿಕೆಟ್

ಕ್ರಿಕೆಟ್ ಮಂಡಳಿಗೆ ನನ್ನ ಕೆಲಸ ಇಷ್ಟವಾಗಿದ್ದರೆ ನನ್ನನ್ನು ಮುಂದುವರಿಸಲಿ: ರವಿ ಶಾಸ್ತ್ರಿ

ಭಾರತ ತಂಡದೊಟ್ಟಿಗೆ ನಿರ್ದೇಶಕನಾಗಿ ಕಳೆದ 18 ತಿಂಗಳುಗಳು ಕಾರ್ಯನಿರ್ವಹಿಸಿದ್ದು ಬದುಕಿನಲ್ಲೇ ಮರೆಯಲಾಗದ ಕ್ಷಣಗಳು ಎಂದು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅವರು ಹೇಳಿದ್ದಾರೆ...

ಕ್ರಿಕೆಟ್ ಮಂಡಳಿಗೆ ನನ್ನ ಕೆಲಸ ಇಷ್ಟವಾಗಿದ್ದರೆ ನನ್ನನ್ನು ಮುಂದುವರಿಸಲಿ: ರವಿ ಶಾಸ್ತ್ರಿ
ರವಿಶಾಸ್ತ್ರಿ
Published On :

ಚೆನ್ನೈ: ಭಾರತ ತಂಡದೊಟ್ಟಿಗೆ ನಿರ್ದೇಶಕನಾಗಿ ಕಳೆದ 18 ತಿಂಗಳುಗಳು ಕಾರ್ಯನಿರ್ವಹಿಸಿದ್ದು ಬದುಕಿನಲ್ಲೇ ಮರೆಯಲಾಗದ ಕ್ಷಣಗಳು ಎಂದು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅವರು ಹೇಳಿದ್ದಾರೆ.

2014 ಆಗಸ್ಟ್ ತಿಂಗಳಿನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 1-3 ಅಂತರದಲ್ಲಿ ಟೆಸ್ಟ್ ಸರಣಿ ಕಳೆದುಕೊಂಡ ಬಳಿಕ ಭಾರತ ತಂಡ ನಿರ್ದೇಶಕ ಹುದ್ದೆಗೆ 18 ತಿಂಗಳುಗಳ ಕಾಲ ರವಿಶಾಸ್ತ್ರಿಯವರನ್ನು ನೇಮಕ ಮಾಡಲಾಗಿತ್ತು. ಇದೀಗ ಬಿಸಿಸಿಐ ಅಧ್ಯಕ್ಷನಾಗಿ ಅನುರಾಗ್ ಟಾಕುರ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಜುಲೈ ತಿಂಗಳಿನಲ್ಲಿ ಭಾರತ ವೆಸ್ಟ್ ಇಂಡೀಸ್ ಗೆ ಹೋಗುವುದಕ್ಕೂ ಮುನ್ನ ಹೊಸ ಕೋಚ್ ಗಳನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭಿಸಬೇಕೆಂದು ಹೇಳಿದ್ದರು.

ಇದರಂತೆ ರವಿಶಾಸ್ತ್ರಿಯವರ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಅವಧಿ ಕೂಡ ಪೂರ್ಣಗೊಂಡಿದೆ. ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ರವಿಶಾಸ್ತ್ರಿಯವರು, ಮತ್ತೆ ನಿರ್ದೇಶಕನಾಗಿ ಮುಂದುವರೆಯಲು ಇಚ್ಛಿಸುತ್ತೇನೆ. ನಿರ್ದೇಶಕ ಹುದ್ದೆಯಲ್ಲಿ ಮುಂದುವರಿಯುವಿಕೆ ಸಂಬಂಧ ಅಧಿಕಾರಿಗಳೊಂದಿಗೆ ಹೇಳಿಕೊಂಡಿದ್ದೇನೆ.  ನನ್ನ ಕಾರ್ಯವೈಖರಿ ಕ್ರಿಕೆಟ್ ಮಂಡಳಿಯವರಿಗೆ ಇಷ್ಟವಾಗಿದ್ದೇ ಆದರೆ, ಅವರೇ ನನ್ನನ್ನು ಮತ್ತೆ ನೇಮಕ ಮಾಡುತ್ತಾರೆಂದು ಹೇಳಿದ್ದಾರೆ.

ಅಧಿಕಾರದಲ್ಲಿರುವಷ್ಟು ದಿನ ನಾನು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಅಧಿಕಾರಕ್ಕೆ ಬಂದಾಗ ತಂಡದಲ್ಲಿ ಕೆಲವು ಬೆಳವಣಿಗೆಗಳಾಗಲು ಕಾಲಾವಕಾಶಬೇಕೆಂದು ಅಂದುಕೊಂಡಿದ್ದೆ. ಆದರೆ, ನನ್ನ ಅನಿಸಿಕೆ ತಪ್ಪಾಗಿತ್ತು. ನಿರ್ದೇಶಕನಾಗಿ ಇದೊಂದು ನನ್ನ ಜೀವನದ ಅತ್ಯಂತ ಅಮೂಲ್ಯ ಮತ್ತು ಅವಿಸ್ಮರಣೀಯ ಹಂತವಾಗಿದೆ ಎಂದಿದ್ದಾರೆ.

ಇದೇ ವೇಳೆ ಕೊಹ್ಲಿಯನ್ನು ಕೊಂಡಾಡಿದ ಅವರು, ಐಪಿಎಲ್ ಸೀಸನ್ ನಲ್ಲಿ 1000 ರನ್ ಗಳಿಸಿದ ಏಕೈಕ ಆಟಗಾರ ಕೊಹ್ಲಿ. ಕೊಹ್ಲಿ ಆಟ ಸಾಕಷ್ಟು ಆಶ್ಚರ್ಯವನ್ನುಂಟು ಮಾಡಿತು. ಕೊಹ್ಲಿ ತರಬೇತಿ ಪಡೆಯುತ್ತಿದ್ದ ಸಮಯವನ್ನು ಬಹಳ ಹತ್ತಿರದಲ್ಲಿ ನೋಡುವ ಅವಕಾಶ ನನಗೆ ದೊರೆತಿತ್ತು. ಕೊಹ್ಲಿ ಕೇವಲ ಆಟದ ಸಮಯದಲ್ಲಿ ಅಷ್ಟೇ ಅಲ್ಲದೆ, ತರಬೇತಿ ಸಮಯದಲ್ಲಿ ಶ್ರಮ ಪಡುವುದನ್ನು ನೋಡಿದ್ದೇನೆ.

ಕ್ರೀಡಾಂಗಣಕ್ಕೆ ಬರುವುದಕ್ಕೂ ಮುನ್ನ ಕೊಹ್ಲಿ ಮೊದಲು ತನ್ನನ್ನು ಎಲ್ಲಾ ರೀತಿಯಲ್ಲು ತಯಾರು ಮಾಡಿಕೊಳ್ಳುತ್ತಾನೆ. ಕೊಹ್ಲಿ ಜಗತ್ತಿನಲ್ಲೇ ಉತ್ತಮ ಆಟಗಾರನಾಗಲಿದ್ದಾನೆ. ಆತನಿಗೆ ಮೈಲ್ದರ್ಜೆಯಲ್ಲಿರಬೇಕೆಂಬ ಆಸೆಯಿದೆ. ಹೀಗಾಗಿಯೇ ದಿನದಿಂದ ದಿನಕ್ಕೆ ಉನ್ನತ ಮಟ್ಟಕ್ಕೇರುತ್ತಿದ್ದಾನೆಂದು ಹೇಳಿದ್ದಾರೆ.

ವಿಶ್ವಕಪ್ ಸಂದರ್ಭದಲ್ಲಿ ಆಸ್ಟ್ರೇಲಿಯಾ ಜೊತೆಗಿನ ಆಟ ಮರೆಯಲಾಗದ ಕ್ಷಣವಾಗಿತ್ತು. ಎಲ್ಲಾ ತಂಡಗಳ ಮೇಲೂ ಉತ್ತಮ ರೀತಿಯಲ್ಲಿ ಆಡುತ್ತಲೇ ಬಂದಿದ್ದೆವು. ಆದರೆ, ಸೆಮಿಫೈನಲ್ ನಲ್ಲಿನ ಸೋಲು ನಿರಾಶೆ ತಂದಿತ್ತು. ಈ ಬಗ್ಗೆ ಯಾವುದೇ ನನ್ನಿಂದ ಯಾವುದೇ ದೂರಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.