'ಬ್ಲಷ್' ವಿವಾದ; ಕ್ರಿಸ್ ಗೇಲ್ ಕೈ ತಪ್ಪಿದ ಬಿಗ್ ಬ್ಯಾಷ್ ಲೀಗ್ ಅವಕಾಶ
ಆಸ್ಟ್ರೇಲಿಯಾದ ಟ್ವೆಂಟಿ 20 ಟೂರ್ನಮೆಂಟ್ ಬಿಗ್ ಬ್ಯಾಷ್ ಲೀಗ್ ನಲ್ಲಿ ದ ಮೆಲ್ಬರ್ನ್ ರೆನೆಗೇಡ್ಸ್ ಪರವಾಗಿ ಆಡಬೇಕಾಗಿದ್ದ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ನ...

Published On :
ಮೆಲ್ಬರ್ನ್: ಆಸ್ಟ್ರೇಲಿಯಾದ ಟ್ವೆಂಟಿ 20 ಟೂರ್ನಮೆಂಟ್ ಕೆಎಫ್ ಸಿ ಪ್ರಾಯೋಜಕತ್ವದ ಬಿಗ್ ಬ್ಯಾಷ್ ಲೀಗ್ ನಲ್ಲಿ ದ ಮೆಲ್ಬರ್ನ್ ರೆನೆಗೇಡ್ಸ್ ಪರವಾಗಿ ಆಡಬೇಕಾಗಿದ್ದ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ನ ಒಪ್ಪಂದವನ್ನು ನವೀಕರಣ ಮಾಡಲಾಗುವುದಿಲ್ಲ ಎಂದು ಟೀಂ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಋತುವಿನಲ್ಲಿ ಟೀವಿ ರಿಪೋರ್ಟರ್ ಜತೆ ಕ್ರಿಸ್ ಗೇಲ್ ಅಸಭ್ಯ ವರ್ತನೆ ತೋರಿದ್ದು ವಿವಾದವಾಗಿತ್ತು. ಈ ವಿವಾದದ ಕಾರಣದಿಂದಲೇ ಕ್ರಿಸ್ ಗೇಲ್ನ ಒಪ್ಪಂದವನ್ನು ನವೀಕರಣ ಮಾಡದೆ ಆತನನ್ನು ಟೀಂ ನಿಂದ ಹೊರಗಿಡಲಾಗಿದೆ ಎಂದು ಹೇಳಲಾಗುತ್ತಿದೆ.
ಗೇಲ್ನ ಒಪ್ಪಂದವನ್ನು ನವೀಕರಣ ಮಾಡುವುದಿಲ್ಲ ಎಂಬ ಸುದ್ದಿಯನ್ನು ಎಂದು ಟೀಂ ಸಿಇಒ ಸ್ಟ್ಯುವಾರ್ಟ್ ಕನ್ವರಿ ದೃಢೀಕರಿಸಿದ್ದಾರೆ. ಈ ವಿವಾದದ ಹಿನ್ನೆಲೆಯಲ್ಲಿ ಟೀಂ, ಕ್ರಿಸ್ ಗೇಲ್ಗೆ 7000 ಡಾಲರ್ (ರು. 4.62 ಲಕ್ಷ) ದಂಡ ವಿಧಿಸಿತ್ತು.
ಅದೇ ವೇಳೆ ಇತ್ತೀಚೆಗೆ ಗೇಲ್ ಪತ್ರಕರ್ತೆಯೊಂದಿಗೆ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ನಲ್ಲಿ ಭಾಗವಹಿಸುವ ಅವಕಾಶವನ್ನೂ ಗೇಲ್ ಕಳೆದುಕೊಂಡಿದ್ದಾರೆ ಎಂಬ ಸುದ್ದಿಯಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಪರವಾಗಿ ಆಡುತ್ತಿರುವ ಕ್ರಿಸ್ ಗೇಲ್ ಬ್ರಿಟಿಷ್ ಪತ್ರಕರ್ತೆಗೆ ಸಂದರ್ಶನ ನೀಡುವ ವೇಳೆ ಆಕೆಯೊಂದಿಗೆ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಪತ್ರಕರ್ತೆ ಆರೋಪಿಸಿದ್ದರು.
ಏನಿದು ಬ್ಲಷ್ ವಿವಾದ?
ಕಳೆದ ವರ್ಷ ಜನವರಿಯಲ್ಲಿ ನಡೆದ ಬಿಗ್ ಬ್ಯಾಶ್ ಲೀಗ್ (ಬಿಬಿಎಲ್) ನಲ್ಲಿ ಚಾನೆಲ್ 10 ನ ಮ್ಯಾಕಲಾಲಿನ್ ಎಂಬ ಪತ್ರಕರ್ತೆಯೊಂದಿಗೆ ಗೇಲ್ ಅನುಚಿತ ವರ್ತನೆ ತೋರಿದ್ದರು.
ನಾನು ನಿನಗೆ ಸಂದರ್ಶನವನ್ನು ನೀಡಲು ಬಯಸುತ್ತೇನೆ. ನಿನ್ನ ಕಣ್ಣುಗಳನ್ನು ನೋಡುವುದಕ್ಕಾಗಿಯೇ ನಾನಿಲ್ಲಿದ್ದೇನೆ. ಈ ಪಂದ್ಯವನ್ನು ನಾವು ಗೆಲ್ಲುತ್ತೇವೆ. ಇದಾದನಂತರ ಕುಡಿಯೋಣ. ಡೋಂಟ್ ಬ್ಲಷ್ ಬೇಬಿ ಎಂದು ಹೇಳುವ ಮೂಲಕ ಗೇಲ್ ವಿವಾದಕ್ಕೊಳಾಗಿದ್ದರು.
ಮರುದಿನ ತಾನು ಪತ್ರಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿಲ್ಲ. ನಾನು ಬೇರೆ ಉದ್ದೇಶಿದಿಂದ ಆಕೆಯೊಂದಿಗೆ ಮಾತನಾಡಿಲ್ಲ ಎಂದು ಗೇಲ್ ಕ್ಷಮೆಯಾಚಿಸಿದ್ದರು.
ತನ್ನ ಮಗುವಿಗೆ 'ಬ್ಲಷ್' ಎಂದು ಹೆಸರಿಟ್ಟ ಕ್ರಿಸ್ ಗೇಲ್
'ಡೋಂಟ್ ಬ್ಲಷ್ ಬೇಬಿ' ವಿವಾದ ನೆನಪಿಗಾಗಿಯೇ ಗೇಲ್ ತನ್ನ ಮಗಳಿಗೆ ಬ್ಲಷ್ ಎಂದು ಹೆಸರಿಟ್ಟಿದ್ದರು.
ತನ್ನ ಮಗುವಿಗೆ 'ಬ್ಲಷ್' ಎಂದು ಹೆಸರಿಟ್ಟ ಕ್ರಿಸ್ ಗೇಲ್
'ಡೋಂಟ್ ಬ್ಲಷ್ ಬೇಬಿ' ವಿವಾದ ನೆನಪಿಗಾಗಿಯೇ ಗೇಲ್ ತನ್ನ ಮಗಳಿಗೆ ಬ್ಲಷ್ ಎಂದು ಹೆಸರಿಟ್ಟಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Chris Gayleಕ್ರಿಸ್ ಗೇಲ್Big Bash Leagueಬಿಗ್ ಬ್ಯಾಷ್ ಲೀಗ್Cricket Offbeatಕ್ರಿಕೆಟ್ ಸುದ್ದಿ ಸ್ವಾರಸ್ಯMelbourne Renegadesದ ಮೆಲ್ಬರ್ನ್ ರೆನೆಗೇಡ್ಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


