ಡಕ್‌ವರ್ಥ್ ಲೂಯಿಸ್ ಕಳಪೆ ನಿಯಮ ಎಂದ ಸ್ಟೀಫನ್ ಫ್ಲೆಮ್ಮಿಂಗ್
ಕ್ರಿಕೆಟ್ ನಲ್ಲಿ ಡಕ್‌ವರ್ಥ್ ಲೂಯಿಸ್ ಕಳಪೆ ನಿಯಮ ಎಂದು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮ್ಮಿಂಗ್ ಹೇಳಿದ್ದಾರೆ...

ಕ್ರಿಕೆಟ್ ನಲ್ಲಿ ಡಕ್‌ವರ್ಥ್ ಲೂಯಿಸ್ ಕಳಪೆ ನಿಯಮ ಎಂದು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮ್ಮಿಂಗ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಕೊಲ್ಕತ್ತಾ ವಿರುದ್ಧ ನಡೆದ ಪಂದ್ಯದಲ್ಲಿ ರೈಸಿಂಗ್ ಪುಣೆ ತಂಡಕ್ಕೆ ಡಕ್‌ವರ್ಥ್ ಲೂಯಿಸ್ ನಿಯಮ ಮಾರಕವಾಯಿತು. ಇದರಿಂದ ಬೇಸರಗೊಂಡಿರುವ ಸ್ಟೀಫನ್ ಡಕ್‌ವರ್ಥ್ ಅತ್ಯಂತ ಕಳಪೆ ನಿಯಮ. ಮೊದಲಿನಿಂದಲೂ ನಾನು ಇದನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಆದರೆ ಕೆಲವರು ಡಕ್‌ವರ್ಥ್ ಪರ ಇದ್ದಾರೆ ಈಗಾಗಿಯೇ ಕ್ರಿಕೆಟ್ ಆಟದಲ್ಲಿ ನಾವು ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ್ದ ಪುಣೆ ತಂಡ 17.4 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿತು. ಎರಡನೇ ಇನ್ನಿಂಗ್ಸ್ ಪ್ರಾರಂಭಕ್ಕೂ ಮುನ್ನ ಮಳೆ ಬಂದಿದ್ದರಿಂದ ಡಕ್‌ವರ್ಥ್ ಲೂಯಿಸ್ ನಿಯಮದಡಿ ಕೊಲ್ಕತ್ತಾಗೆ ಗೆಲ್ಲಲು 9 ಓವರ್ ಗಳಲ್ಲಿ 66 ರನ್ ಗುರಿ ನೀಡಿತ್ತು. ಬಿರುಸಿನ ಬ್ಯಾಟಿಂಗ್ ನಡೆಸಿದ ಯೂಸೂಫ್ ಪಠಾಣ್ 18 ಎಸೆತಗಳಲ್ಲಿ 37 ರನ್ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


