ಒಂದೇ ಐಪಿಎಲ್ ಆವೃತ್ತಿಯಲ್ಲಿ 3 ಶತಕ ಸಿಡಿಸಿ 'ವಿರಾಟ್' ವಿಶ್ವದಾಖಲೆ
ಐಪಿಎಲ್ ಪಂದ್ಯಾವಳಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಐಪಿಎಲ್ ಆವೃತ್ತಿಯಲ್ಲಿ ಮೂರು ಶತಕ ಸಿಡಿಸಿದ ಸಾಧನೆಗೆ ರಾಯಲ್ ಚಾಲೆಂಡರ್ಸ್ ತಂಡದ ನಾಯಕ ವಿರಾಟ್...

ಐಪಿಎಲ್ ಪಂದ್ಯಾವಳಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಐಪಿಎಲ್ ಆವೃತ್ತಿಯಲ್ಲಿ ಮೂರು ಶತಕ ಸಿಡಿಸಿದ ಸಾಧನೆಗೆ ರಾಯಲ್ ಚಾಲೆಂಡರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗುಜರಾತ್ ಲಯನ್ಸ್ ಬೌಲರ್ ಗಳಿಗೆ ಬೆವರಿಳಿಸಿದರು. 55 ಎಸೆತಗಳಲ್ಲಿ ಭರ್ಜರಿ 8 ಸಿಕ್ಸರ್ ಗಳೊಂದಿಗೆ 109 ರನ್ ಗಳಿಸಿ ಮೂರನೇ ಶತಕ ದಾಖಲಿಸಿದರು.
ಏಪ್ರಿಲ್ 24 ರಂದು ರಾಜ್ ಕೋಟ್ ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಐಪಿಎಲ್ ನ ಚೊಚ್ಚಲ ಶತಕ(100*) ಬಾರಿಸಿದ್ದರು. ಇದಾದ ಬಳಿಕ ಮೇ 7 ರಂದು ಪುಣೆ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಅಜೇಯ 108 ರನ್ ಗಳಿಸಿ ಎರಡನೇ ಶತಕ ಸಿಡಿಸಿದರು.
ಇನ್ನು ಆರ್ಸಿಬಿ ಪರ ಆಡುತ್ತಿರುವ ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಅವರ ಎರಡು ಶತಕ ಸಿಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


