ಸನ್ ರೈಸರ್ಸ್ ಗೆ ಶಾಕ್ ನೀಡಿದ ಡೇರ್ ಡೆವಿಲ್ಸ್
ಸನ್ ರೈಸರ್ಸ್ ಹೈದರಾಬಾದ್ ತಂಡದ ನೀರಸ ಬ್ಯಾಟಿಂಗ್ ನಿಂದಾಗಿ ಗುರುವಾರ ದೆಹಲಿ ವಿರುದ್ಧ ನಡೆದ ಪಂದ್ಯದಲ್ಲಿ 7 ವಿಕೆಟ್ ಗಳ ಅಂತರದ ಹೀನಾಯ ಸೋಲು ಕಂಡಿದೆ.

ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ತಂಡದ ನೀರಸ ಬ್ಯಾಟಿಂಗ್ ನಿಂದಾಗಿ ಗುರುವಾರ ದೆಹಲಿ ವಿರುದ್ಧ ನಡೆದ ಪಂದ್ಯದಲ್ಲಿ 7 ವಿಕೆಟ್ ಗಳ ಅಂತರದ ಹೀನಾಯ ಸೋಲು ಕಂಡಿದೆ.
ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ದೆಹಲಿ ತಂಡ ನಿಗದಿತ 20 ಓವರ್ ಗಳಲ್ಲಿ ಹೈದರಾಬಾದ್ ತಂಡವನ್ನು ಕೇವಲ 146 ರನ್ ಗಳಿಗೆ ನಿಯಂತ್ರಿಸಿತು. ಹೈದರಾಬಾದ್ ನ ಬ್ಯಾಟಿಂಗ್ ಪಿಚ್ ನಲ್ಲಿ ರನ್ ಗಳಿಸಲು ತಿಣುಕಾಡಿದ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 146 ರನ್ ಗಳನ್ನಷ್ಟೇ ಗಳಿಸಿದರು.
ಆರಂಭದಲ್ಲಿ ಹೈದರಾಬಾದ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕರಾದ ಡೇವಿಜ್ ವಾರ್ನರ್ ಮತ್ತು ಶಿಖರ್ ಧವನ್ ಜೋಡಿ ಅರ್ಧಶತಕದ ಜೊತೆಯಾಟ ನೀಡಿತು. ಈ ಪೈಕಿ ಧವನ್ 34 ರನ್ ಗಳಿಸಿ ಔಟ್ ಆದರೆ, ವಾರ್ನರ್ 46 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ವಿಲಿಯಮ್ಸನ್ ಕೂಡ 27 ರನ್ ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸುವ ಪ್ರಯತ್ನ ಮಾಡಿದರು. ಆದರೆ ವಿಲಿಯಮ್ಸನ್ ಗೆ ಹೈದರಾಬಾದ್ ತಂಡದ ಬೇರಾವ ಆಟಗಾರರನೂ ಉತ್ತಮ ಸಾಥ್ ನೀಡಲಿಲ್ಲ. ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ಸೇರಿದಂತೆ ಮಧ್ಯಮ ಕ್ರಮಾಂಕ ಸಂಪೂರ್ಣ ವಿಫಲರಾಗುವುದರೊಂದಿಗೆ ಹೈದರಾಬಾದ್ ತಂಡ 8 ವಿಕೆಟ್ ಕಳೆದುಕೊಂಡು 146 ರನ್ ಗಳನ್ನಷ್ಟೇ ಗಳಿಸಲಷ್ಟೇ ಶಕ್ತವಾಯಿತು.
ದೆಹಲಿ ಪರ ಕಲ್ಟರ್ ನೈಲ್ ಮತ್ತು ಮಿಶ್ರಾ 2 ವಿಕೆಟ್ ಪಡೆದರೆ, ಯಾದವ್, ಶಮಿ ಮತ್ತು ಮೋರಿಸ್ ತಲಾ 1 ವಿಕೆಟ್ ಪಡೆದರು.
ಹೈದರಾಬಾದ್ ನೀಡಿದ 146 ರನ್ ಗಳ ಗುರಿಯನ್ನು ಬೆನ್ನುಹತ್ತಿದ ದೆಹಲಿಗೆ ಡಿಕಾಕ್ ಉತ್ತಮ ಆರಂಭ ಒದಗಿಸಿದರು. ಆರಂಭಿಕ ಆಟಗಾರ ಅಗರ್ವಾಲ್ 10 ರನ್ ಗಳಿಸಿ ಔಟ್ ಆದರೂ ಕೂಡ ದೃತಿಗೆಡೆದ ಟಿಕಾಕ್ 31 ಎಸೆತಗಳಲ್ಲಿ 44 ರನ್ ಸಿಡಿಸಿದರು. ಬಳಿಕ ಬಂದ ನಾಯರ್ 20 ರನ್ ಗಳಿಸಿ ಔಟ್ ಆದರೆ, ಡಿಕಾಕ್ ಹೆನ್ರಿಕ್ಸ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಜೊತೆಗೂಡಿದ ಸ್ಯಾಮಸನ್ (ಅಜೇಯ 34 ರನ್)ಮತ್ತು ಪ್ಯಾಂಟ್ (ಅಜೇಯ 39 ರನ್)ಜೋಡಿ ಅರ್ಧಶತಕದ ಜೊತೆಯಾಟವಾಡುವ ಮೂಲಕ ದೆಹಲಿಗೆ 7 ವಿಕೆಟ್ ಗಳ ಭರ್ಜರಿ ಗೆಲುವು ತಂದುಕೊಟ್ಟರು.
ಹೈದರಾಬಾದ್ ಪರ ಹೆನ್ರಿಕ್ಸ್ 2 ವಿಕೆಟ್ ಪಡೆದರೆ, ನೆಹ್ರಾ 1 ವಿಕೆಟ್ ಪಡೆದರು. 4 ಓವರ್ ಗಳಲ್ಲಿ ಕೇವಲ 19 ರನ್ ನೀಡಿ 1 ವಿಕೆಟ್ ಪಡೆದ ದೆಹಲಿ ತಂಡದ ಕ್ರಿಸ್ ಮೋರಿಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


