'ಬೇಬಿ' ಎಂದು ಕರೆದು ಮುಜುಗರಕ್ಕೆ ಒಳಗಾದ ಕರ್ನಾಟಕ ಆಟಗಾರ ರಾಹುಲ್
ವಿಮಾನ ನಿಲ್ದಾಣದಲ್ಲಿ ಬೇಬಿ ಎಂದು ಕರೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ಕೆ.ಎಲ್ ರಾಹುಲ್ ಮುಜುಗರಕ್ಕೆ...

ನವದೆಹಲಿ: ವಿಮಾನ ನಿಲ್ದಾಣದಲ್ಲಿ ಬೇಬಿ ಎಂದು ಕರೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ಕೆ.ಎಲ್ ರಾಹುಲ್ ಮುಜುಗರಕ್ಕೆ ಒಳಗಾಗಿದ್ದರಂತೆ.
ತಂಡದ ಸಹ ಆಟಗಾರ ಸಚಿನ್ ಬೇಬಿಯನ್ನು ರಾಹುಲ್ ಬೇಬಿಯೆಂದು ಕರೆಯುತ್ತಾರಂತೆ. ಅಂತೆ ಇತ್ತೀಚೆಗಷ್ಟೇ ವಿಮಾನ ನಿಲ್ದಾಣವೊಂದರಲ್ಲಿ ಹೋಗುತ್ತಿದ್ದಾಗ ಸಹಜವಾಗಿ ರಾಹುಲ್ ಸಚಿನ್ ಬೇಬಿಯನ್ನು ಬೇಬಿ ನನ್ನ ಬ್ಯಾಗ್ ಹಿಡಿದುಕೋ ಎಂದು ಹೇಳಿದರಂತೆ. ತಕ್ಷಣ ಪಕ್ಕದಲ್ಲಿ ನಿಂತಿದ್ದ ಮಹಿಳೆಯರಿಬ್ಬರು ರಾಹುಲ್ ರನ್ನು ಗುರಾಯಿಸಲು ಶುರು ಮಾಡಿದ್ದಾರೆ.
ತನ್ನತ್ತ ಮಹಿಳೆಯರು ಗುರಾಯಿಸುತ್ತಿರುವುದನ್ನು ಗಮನಿಸಿದ ರಾಹುಲ್ ಏನೋ ವ್ಯತ್ಯಾಸವಾಗಿದೆ. ನಾನು ಸಚಿನ್ ಬೇಬಿಯನ್ನು ಬೇಬಿ ಎಂದು ಕರೆದದ್ದನ್ನು ಮಹಿಳೆಯರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ತಿಳಿದು ಬಳಿಕ ಸಾರ್ವಜನಿಕವಾಗಿ ಸಚಿನ್ ಬೇಬಿಯನ್ನು ಬೇಬಿ ಎಂದು ಕರೆಯುವುದನ್ನು ಬಿಟ್ಟಿದ್ದಾರಂತೆ ಕೆಎಲ್ ರಾಹುಲ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


