ಕ್ರಿಕೆಟ್

2019ರ ವಿಶ್ವಕಪ್ ಪಂದ್ಯವರೆಗೆ ಧೋನಿ ನಾಯಕನಾಗಿರಬೇಕೆ?: ಸೌರವ್ ಗಂಗೂಲಿ

2019ರಲ್ಲಿ ನಡೆಯುವ ಐಸಿಸಿ ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ನಾಯಕತ್ವ ವಹಿಸಲು ಮಹೇಂದ್ರ ಸಿಂಗ್ ಧೋನಿಗೆ ಸಾಧ್ಯವಾಗುವುದೇ? ಎಂಬುದರ ಬಗ್ಗೆ...

2019ರ ವಿಶ್ವಕಪ್ ಪಂದ್ಯವರೆಗೆ ಧೋನಿ ನಾಯಕನಾಗಿರಬೇಕೆ?: ಸೌರವ್ ಗಂಗೂಲಿ
ಸೌರವ್ ಗಂಗೂಲಿ -ವಿರಾಟ್ ಕೊಹ್ಲಿ (ಕೃಪೆ ಪಿಟಿಐ)
Published On :
ನವದೆಹಲಿ: 2019ರಲ್ಲಿ ನಡೆಯುವ ಐಸಿಸಿ ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ನಾಯಕತ್ವ ವಹಿಸಲು ಮಹೇಂದ್ರ ಸಿಂಗ್ ಧೋನಿಗೆ ಸಾಧ್ಯವಾಗುವುದೇ? ಎಂಬುದರ ಬಗ್ಗೆ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಗಂಗೂಲಿ, ಮುಂಬರಲಿರುವ ಪಂದ್ಯಗಳ ಬಗ್ಗೆ ಪ್ರತಿಯೊಂದು ತಂಡವೂ ಯೋಜನೆಗಳನ್ನು ಹೂಡಿರುತ್ತದೆ. ಹೀಗಿರುವಾಗ ಮುಂದಿನ ಮೂರು -ನಾಲ್ಕು ವರ್ಷಗಳ ನಂತರವೂ ಎಂಎಸ್ ಧೋನಿಯನ್ನೇ ಆಯ್ಕೆಗಾರರು ನಾಯಕನಾಗಿ ಮುಂದುವರಿಸುತ್ತಾರೆಯೆ? ಎಂಬ ಪ್ರಶ್ನೆ ನನ್ನದು.
ಧೋನಿಯವರ ನಾಯಕತ್ವ ಕೌಶಲದ ಬಗ್ಗೆ ಗಂಗೂಲಿ ಹೊಗಳಿದ್ದರೂ, ಈಗ ಆ ನಾಯಕತ್ವದ ಹೊಣೆಯನ್ನು ಇನ್ನೊಬ್ಬ ಕಿರಿಯನಿಗೆ ದಾಟಿಸುವ ಸಮಯ ಬಂದಿದೆ. ಆ ನಾಯಕತ್ವ ಪಟ್ಟವನ್ನು ವಿರಾಟ್ಕೊಹ್ಲಿಗೆ ವಹಿಸಬೇಕೆಂಬುದು ಗಂಗೂಲಿ ಇಚ್ಛೆ. 
ಸುದೀರ್ಘ 9 ವರ್ಷಗಳಿಂದ ಧೋನಿ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದಾರೆ. ಇನ್ನೂ ನಾಲ್ಕು ವರ್ಷಗಳ ಕಾಲ ಅವರು ನಾಯಕ ಸ್ಥಾನದಲ್ಲಿ ಮುಂದುವರಿಯಬೇಕೆ? ಈಗಾಗಲೇ ಅವರು ಟೆಸ್ಟ್ ಪಂದ್ಯದ ನಾಯಕ ಸ್ಥಾನವನ್ನು ತೊರೆದಿದ್ದು, ಈಗ ಏಕದಿನ ಪಂದ್ಯ ಮತ್ತು ಟಿ 20 ಪಂದ್ಯಗಳನ್ನಾಡುತ್ತಿದ್ದಾರೆ. 
ಕೊಹ್ಲಿಗೆ ನಾಯಕತ್ವ ವಹಿಸುವ ಬಗ್ಗೆ ಒಲವು ತೋರಿರುವ ಗಂಗೂಲಿ, ಹಲವಾರು ಬಾರಿ ಕೊಹ್ಲಿಯನ್ನು ಫುಟ್ಬಾಲ್ ದಂತಕತೆ ಮೆರಡೋನಾಗೆ ಹೋಲಿಸಿದ್ದಾರೆ. 27ರ ಹರೆಯದ ಕೊಹ್ಲಿ ಈಗಾಗಲೇ ಭಾರತದ ಟೆಸ್ಟ್ ಕ್ಯಾಪ್ಟನ್ ಆಗಿದ್ದು, ಅಲ್ಲಿಯೂ ಯಶ ಗಳಿಸಿದ್ದಾರೆ. ಇತ್ತೀಚೆಗೆ ನಡೆದ ಐಸಿಸಿ ವಿಶ್ವ ಟಿ 20 ಪಂದ್ಯದಲ್ಲಿ ಕೊಹ್ಲಿ ಮ್ಯಾನ್ ಆಫ್ದ ಟೂರ್ನಮೆಂಟ್ ಪ್ರಶಸ್ತಿ ಗಳಿಸಿದ್ದು, ಐಪಿಎಲ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಂಡಿಗನಾಗಿದ್ದಾರೆ.
ಪ್ರತಿ ಬಾರಿ ವಿರಾಟ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರ ಆಟ ಮತ್ತು ಮಾನಸಿಕ ಸಾಮರ್ಥ್ಯಗಳು, ಮೈದಾನದಲ್ಲಿ ಅವರ ಕೌಶಲ್ಯತೆ ಎಲ್ಲವೂ ಮೆಚ್ಚುವಂಥದ್ದೇ. 
ಆದ್ದರಿಂದ 2019ರಲ್ಲಿ ಟೀಂ ಇಂಡಿಯಾವನ್ನು ಧೋನಿ ಮುನ್ನಡೆಸಬೇಕೆ? ಎಂಬುದರ ಬಗ್ಗೆ ಆಯ್ಕೆಗಾರರು ಚಿಂತನೆ ನಡೆಸಬೇಕು. ಒಂದು ವೇಳೆ ಬೇಡ ಎಂಬುದು ಅವರ ಉತ್ತರವಾಗಿದ್ದರೆ, ಹೊಸ ನಾಯಕನ್ನು ಹುಡುಕಬೇಕು. ಅದೇ ವೇಳೆ ಬೇಕು ಎಂಬುದು ಅವರ ಉತ್ತರವಾಗಿದ್ದರೆ, ಆ ಉತ್ತರ ನನಗೆ ಅಚ್ಚರಿಯನ್ನುಂಟು ಮಾಡಲಿದೆ, ಧೋನಿ ಮುಂದುವರಿಯುತ್ತಾರೆ  ಎಂದು ಗಂಗೂಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.