ಯುವರಾಜ್‌ಗೆ ಗೆಲುವಿನ ಸಿಹಿ ನೀಡಿದ ಸನ್ ರೈಸರ್ಸ್ ಹೈದರಾಬಾದ್
ಅಂತೂ ಐಪಿಎಲ್ 9ರ ಆವೃತ್ತಿಯಲ್ಲಿ ಸ್ಟಾರ್ ಆಲ್ ರೌಂಡರ್ ಯುವರಾಜ್ ಸಿಂಗ್ ಸನ್ ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದಿದ್ದು, ಯುವರಾಜ್ ಗೆ ಸನ್ ರೈಸರ್ಸ್ ಗೆಲುವಿನ ಸಿಹಿ ನೀಡಿದೆ...

ಹೈದರಾಬಾದ್: ಅಂತೂ ಐಪಿಎಲ್ 9ರ ಆವೃತ್ತಿಯಲ್ಲಿ ಸ್ಟಾರ್ ಆಲ್ ರೌಂಡರ್ ಯುವರಾಜ್ ಸಿಂಗ್ ಸನ್ ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದಿದ್ದು, ಯುವರಾಜ್ ಗೆ ಸನ್ ರೈಸರ್ಸ್ ಗೆಲುವಿನ ಸಿಹಿ ನೀಡಿದೆ.
ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ ಲಯನ್ಸ್ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತು. ಸಾಧಾರಣ ಮೊತ್ತ ಬೆನ್ನಟ್ಟಿದ ಹೈದರಾಬಾದ್ ಇನ್ನು ಒಂದು ಓವರ್ ಬಾಕಿ ಇರುವಂತೆ ಗುರಿ ಬೆನ್ನಟ್ಟಿತು. ಶಿಖರ್ ಧವನ್ 47 ರನ್ ಗಳ ಕೊಡುಗೆಯಿಂದಾಗಿ 5 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿ 5 ವಿಕೆಟ್ ಗಳಿಂದ ಜಯ ಗಳಿಸಿತು.
ಗುಜರಾತ್ ಪರ ಸ್ಮಿತ್ 1, ಬ್ರೆಂಡಮ್ ಮೆಕ್ಕಲಮ್ 7, ಸುರೇಶ್ ರೈನಾ 20, ಕಾರ್ತಿಕ್ 0, ಬ್ರಾವೋ 18, ಜಡೇಜಾ 18, ಫಿಂಚ್ ಅಜೇಯ 51 ಹಾಗೂ ಪ್ರವಿಣ್ ಕುಮಾರ್ 6 ರನ್ ಗಳಿಸಿದ್ದಾರೆ.
ಹೈದರಾಬಾದ್ ಪರ ಭುವನೇಶ್ವರ್ ಕುಮಾರ್, ರೆಹಮಾನ್ ತಲಾ 2 ವಿಕೆಟ್ ಪಡೆದಿರೆ, ಸ್ರಾನ್ ಹಾಗೂ ಹೆನ್ರಿಕ್ಸ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ಹೈದರಾಬಾದ್ ಪರ ಡೇವಿಡ್ ವಾರ್ನರ್ 24, ಶಿಖರ್ ಧವನ್ ಅಜೇಯ 47, ವಿಲಿಯಮ್ಸನ್ 6, ಹೆನ್ರಿಕ್ಸ್ 14, ಯುವರಾಜ್ ಸಿಂಗ್ 5, ಹೂಡಾ 18 ನಮನ್ ಓಜಾ ಅಜೇಯ 9 ರನ್ ಗಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


