ಮ್ಯಾಚ್ ಫಿಕ್ಸಿಂಗ್ ಮಾಡಿದ್ರೆ 10 ವರ್ಷ ಜೈಲುಶಿಕ್ಷೆ!
ಇನ್ನು ಮುಂದೆ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗುವ ಯಾವುದೇ ಕ್ರೀಡಾಪಟುವಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದಾದ ನೂತನ ವಿಧೇಯಕವನ್ನು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಸಿದ್ಧಪಡಿಸಿದ್ದಾರೆ...

ನವದೆಹಲಿ: ಇನ್ನು ಮುಂದೆ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗುವ ಯಾವುದೇ ಕ್ರೀಡಾಪಟುವಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದಾದ ನೂತನ ವಿಧೇಯಕವನ್ನು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಸಿದ್ಧಪಡಿಸಿದ್ದಾರೆ.
ಲೋಕಸಭಾ ಸದಸ್ಯರೂ ಆಗಿರುವ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಮೂರು ಖಾಸಗಿ ವಿಧೇಯಕಗಳನ್ನು ಸಿದ್ಧಪಡಿಸಿದ್ದು, ಮ್ಯಾಚ್ ಫಿಕ್ಸಿಂಗ್ ನಡೆಸುವ ಯಾವುದೇ ಕ್ರೀಡಾಪಟುವಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಶಿಫಾರಸು ಒಳಗೊಂಡಿರುವ ‘ರಾಷ್ಟ್ರೀಯ ಕ್ರೀಡಾ ನೀತಿಸಂಹಿತೆ ಆಯೋಗ’ ಎಂಬ ವಿಧೇಯಕವೂ ಇದರಲ್ಲಿ ಸೇರಿದೆ ಎಂದು ತಿಳಿದುಬಂದಿದೆ. ಕ್ರಿಕೆಟಿಗರಾದ ಶ್ರೀಶಾಂತ್, ಅಜಿತ್ ಚಾಂಡೀಲಾ ಮತ್ತು ಅಂಕಿತ್ ಚೌಹ್ವಾಣ್ ಹೆಸರುಗಳು ಕೇಳಿಬಂದಿದ್ದ 2013ರ ಐಪಿಎಲ್ ನಲ್ಲಿ ಭುಗಿಲೆದ್ದ ಸ್ಪಾಟ್ ಫಿಕ್ಸಿಂಗ್ ಹಗರಣದ ಹಿನ್ನೆಲೆಯಲ್ಲಿ ಠಾಕೂರ್ ಅವರ ಈ ನಡೆ ಮಹತ್ವದ್ದೆನಿಸಿದೆ.
‘ಕ್ರೀಡಾಪ್ರೇಮಿಗಳಿಗೆ ನ್ಯಾಯ ಒದಗಿಸುವ ಸಲುವಾಗಿ ಕ್ರೀಡಾಪಟುಗಳು ವಿಶ್ವಾಸಾರ್ಹರಾಗಿರುವಂತೆ ನೋಡಿಕೊಳ್ಳುವುದು ಅಗತ್ಯ. ಸದ್ಯ ಮ್ಯಾಚ್ ಫಿಕ್ಸಿಂಗ್ ತಡೆಯುವಂಥ ಯಾವುದೇ ಕಾನೂನು ಇಲ್ಲ. ಇಂಥ ಪೀಡೆಯನ್ನು ತೊಲಗಿಸುವಂಥ ಕಾನೂನು ಅಗತ್ಯವಾಗಿದೆ’ ಎಂದು ವಿಧೇಯಕಗಳನ್ನು ಸಿದ್ಧಪಡಿಸಿರುವ ಅನುರಾಗ್ ಠಾಕೂರ್ ಅವರು ತಿಳಿಸಿದ್ದಾರೆ.
ಈ ಮೂರು ವಿಧೇಯಕಗಳು ಕೇವಲ ಮ್ಯಾಚ್ ಫಿಕ್ಸಿಂಗ್ ಮಾತ್ರವಲ್ಲದೇ ಡೋಪಿಂಗ್, ವಯೋಮಿತಿ-ಲಿಂಗ ಮೋಸ ಮತ್ತು ಮಹಿಳೆಯರ ಮೇಲಿನ ಕಿರುಕುಳ ಪ್ರಕರಣಗಳನ್ನು ತಡೆಯಲು ರಾಷ್ಟ್ರೀಯ ಕ್ರೀಡಾ ನೀತಿಸಂಹಿತೆ ಸಂಸ್ಥೆ ರಚಿಸಬೇಕೆಂಬುದು ವಿಧೇಯಕದ ಮೂಲ ಉದ್ದೇಶವಾಗಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


