ಎಂಎಸ್ ಧೋನಿ ಪಡೆ ಮಣಿಸಿದ ಮುಂಬೈ ಇಂಡಿಯನ್ಸ್
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯ 29ನೇ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂರಪ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದೆ...

ಪುಣೆ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯ 29ನೇ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂರಪ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಶಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಇಂಡಿಯನ್ಸ್ ತಂಡ ಪುಣೆ ತಂಡವನ್ನು 159 ರನ್ ಗಳಿಗೆ ಕಟ್ಟಿ ಹಾಕಿತು. 160 ರನ್ ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಅಬ್ಬರ ಬ್ಯಾಟಿಂಗ್ ನಿಂದಾಗಿ ಮುಂಬೈ ತಂಡ 8 ವಿಕೆಟ್ ಗಳಿಂದ ಜಯ ಗಳಿಸಿತು.
ಮುಂಬೈ ಪರ ರೋಹಿತ್ ಶರ್ಮಾ ಅಜೇಯ 85, ಪಟೇಲ್ 21, ಅಂಬಟ್ಟಿ ರಾಯುಡು 22, ಬಟ್ಲರ್ ಅಜೇಯ 27 ರನ್ ಗಳಿಸಿದ್ದಾರೆ.
ಪುಣೆ ಪರ ದಿಂಡಾ, ಆರ್. ಅಶ್ವಿನ್ ತಲಾ 1 ವಿಕೆಟ್ ಪಡೆದಿದ್ದಾರೆ.
ಪುಣೆ ಪರ ಅಜಿಂಕ್ಯ ರಹಾನೆ 4, ತಿವಾರಿ 57, ಸ್ಮಿತ್ 45, ಹ್ಯಾಂಡ್ಸ್ ಕೊಂಬ್ 6, ಎಂಎಸ್ ಧೋನಿ 24, ಪೆರೇರಾ ಅಜೇಯ 12 ಹಾಗೂ ಬಾಟಿಯಾ 3 ರನ್ ಗಳಿಸಿದ್ದಾರೆ.
ಮುಂಬೈ ಪರ ಬುಮ್ರಾ 3, ಸೌಥಿ ಹಾಗೂ ಹರ್ಭಜನ್ ಸಿಂಗ್ ತಲಾ 1 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


