ಕ್ರಿಕೆಟ್

ಟ್ವಿಟರ್ ನಲ್ಲಿ ಕಾಲೆಳೆದವನಿಗೆ ಸಿಕ್ತು "ಭಜ್ಜಿ" ಶಾಕ್

ಪ್ರತಿಭೆ ಇದ್ದರೂ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದೇ ಪರದಾಡುತ್ತಿರುವ ಕ್ರಿಕೆಟಿಗ ಹರ್ಭಜನ್ ಸಿಂಗ್ ಕಾಲೆಳೆದ ಟ್ವಿಟರ್ ಬಳಕೆದಾರನೊಬ್ಬನಿಗೆ ಭಜ್ಜಿ ಭಱ್ಜರಿ ಶಾಕ್ ನೀಡಿದ್ದಾರೆ.

ಟ್ವಿಟರ್ ನಲ್ಲಿ ಕಾಲೆಳೆದವನಿಗೆ ಸಿಕ್ತು "ಭಜ್ಜಿ" ಶಾಕ್
ಕ್ರಿಕೆಟಿಗ ಹರ್ಭಜನ್ ಸಿಂಗ್ (ಸಂಗ್ರಹ ಚಿತ್ರ)
Published On :

ನವದೆಹಲಿ: ಪ್ರತಿಭೆ ಇದ್ದರೂ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದೇ ಪರದಾಡುತ್ತಿರುವ ಕ್ರಿಕೆಟಿಗ ಹರ್ಭಜನ್ ಸಿಂಗ್ ಕಾಲೆಳೆದ ಟ್ವಿಟರ್ ಬಳಕೆದಾರನೊಬ್ಬನಿಗೆ ಭಜ್ಜಿ ಭಱ್ಜರಿ ಶಾಕ್ ನೀಡಿದ್ದಾರೆ.

ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದೆಯಾದರೂ, ಪ್ರತಿಭಾನ್ವಿತ ಆಟಗಾರ ಹರ್ಭಜನ್ ಸಿಂಗ್ ಗೆ ಮಾತ್ರ ಈ ವರೆಗೂ ಅಂತಹ ಅವಕಾಶ ಸಿಕ್ಕಿಲ್ಲ. ಆದರೆ ಇದನ್ನೇ  ಬಂಡವಾಳವನ್ನಾಗಿಸಿಕೊಂಡ ಟ್ವಿಟರ್ ಬಳಕೆದಾರನೊಬ್ಬ ಭಜ್ಜಿ ಕಾಲೆಳೆಯಲು ಹೋಗಿ ಅವರಿಂದ ಸರಿಯಾಗಿ ಬೆಂಡೆತ್ತಿಸಿಕೊಂಡಿದ್ದಾನೆ.

ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದಲ್ಲಿದ್ದರೂ ಹನ್ನೊಂದರ ಬಳಗದಲ್ಲಿ ಆಡಲು ಅವಕಾಶ ಸಿಗದ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್​ರನ್ನು ಟ್ವಿಟರ್​ನಲ್ಲಿ ಕಾಲೆಳೆದಿದ್ದ ಹಾಸ್ಯ ಟ್ವಿಟರ್  ಖಾತೆದಾರನ ಮೇಲೆ ಕುಪಿತಗೊಂಡ ಭಜ್ಜಿ ಮಾತಿನ ಚಾಟಿಯೇಟು ನೀಡಿದ್ದಾರೆ. ತಂಡದಲ್ಲಿ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಜವಾಬ್ಧಾರಿಯುತ ನಿರ್ವಹಣೆ ತೋರುತ್ತಿರುವುದರಿಂದ  ಕಳೆದ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಭಾರತ ತಂಡಕ್ಕೆ ಪುನರಾಗಮನ ಕಂಡಿದ್ದ ಭಜ್ಜಿ ಕೆಲ ಪಂದ್ಯಗಳನ್ನಾಡಿ ಬೆಂಚ್ ಕಾದಿದ್ದೇ ಹೆಚ್ಚು.

ಇದನ್ನು ‘ಕ್ರಿಕೆಟ್ ಬ್ಯಾಕೊಡ್’ ಎಂಬ ಹಾಸ್ಯ ಸಾಮಾಜಿಕ ತಾಣದ ಬಳಕೆದಾರ, "ಅಣ್ಣಾ ನಿಮ್ಮ ಭಾರತ ಪ್ರವಾಸ ಹೇಗೆ ಸಾಗುತ್ತಿದೆ? ಮಜಾ ಸಿಗುತ್ತಿರಬಹುದಲ್ವಾ? ಉಚಿತ ಹೋಟೆಲ್, ಊಟ,  ಡಿನ್ನರ್ ಎಲ್ಲವೂ…ಮಸ್ತ್ ಲೈಫ್ ಅಲ್ವಾ ಎಂದು ಹರ್ಭಜನ್ ಖಾತೆಗೆ ಟ್ಯಾಗ್ ಮಾಡಿ ಬರೆದಿದ್ದ. ಸಾಮಾನ್ಯವಾಗಿ ಇಂಥ ಕಾಲೆಳೆದಾಟಕ್ಕೆ ಕ್ರಿಕೆಟಿಗರು ಪ್ರತಿಕ್ರಿಯಿಸದಿದ್ದರೂ ಈ ಟ್ವೀಟ್ ಗೆ ಮಾತ್ರ  ತಾಳ್ಮೆ ಕಳೆದಕೊಂಡ ಹರ್ಭಜನ್, ‘ನಗರದಲ್ಲಿ ಆನೆ ನಡೆಯುವಾಗ ಸಾವಿರ ನಾಯಿಗಳು ಬೊಗಳುತ್ತವೆ, ಅವುಗಳಲ್ಲಿ ನೀನು ಒಬ್ಬ’( ಹಾತಿ ಚಲಾ ಬಜಾರ್ ಕುತ್ತೇ ಬೊಕ್ಕೆ ಹಜಾರ್, ಯು ಆರ್  ವನ್ ಆಫ್ ದೆಮ್) ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.