ಥ್ಯಾಂಕ್ಸ್ ಅನುಷ್ಕಾ, ಕೊಹ್ಲಿಯನ್ನು ನಮಗೆ ವಾಪಸ್ ಕೊಟ್ಟಿದ್ದಕ್ಕೆ!
ಅನುಷ್ಕಾ ಶರ್ಮಾನಿಂದ ಬ್ರೇಕಪ್ ಆದ ನಂತರ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ನೆಟಿಜನ್‌ಗಳು ಅನುಷ್ಕಾ ಶರ್ಮಾಳಿಗೆ...

Published On :
ನವದೆಹಲಿ: ಭಾನುವಾರ ಆಸ್ಟ್ರೇಲಿಯಾವನ್ನು ಮಣಿಸಿದ ಟೀಂ ಇಂಡಿಯಾಗೆ ಸಾಮಾಜಿಕ ತಾಣ ಜೈಕಾರ ಹಾಕುತ್ತಿದೆ. ವಿರಾಟ್ ಕೊಹ್ಲಿ ಹೊಡೆಬಡಿ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಟ್ವೀಟ್‌ಗಳು ಹರಿದಾಡುತ್ತಿದ್ದು, ವಿರಾಟ್ ಕೊಹ್ಲಿ ಹೆಸರು ಟ್ರೆಂಡಿಂಗ್ ಆಗಿದೆ.
ಅದೇ ವೇಳೆ ಇದೀಗ ಮತ್ತೊಮ್ಮೆ ಸಾಮಾಜಿಕ ತಾಣದಲ್ಲಿ ಅನುಷ್ಕಾ ಶರ್ಮಾ ಟಾರ್ಗೆಟ್ ಆಗಿದ್ದಾಳೆ. ಅನುಷ್ಕಾ ಶರ್ಮಾನಿಂದ ಬ್ರೇಕಪ್ ಆದ ನಂತರ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ನೆಟಿಜನ್‌ಗಳು ಅನುಷ್ಕಾ ಶರ್ಮಾಳಿಗೆ ತರಹೇವಾರಿ ಟ್ವೀಟ್, ಪೋಸ್ಟ್‌ಗಳ ಮೂಲಕ ಧನ್ಯವಾದ ಹೇಳುತ್ತಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ 52 ಎಸೆತಗಳನ್ನೆದುರಿಸಿ ಕೊಹ್ಲಿ ಅಜೇಯ 82 ರನ್ ಗಳಿಸಿ ಭಾರದ ಗೆಲುವಿನ ರೂವಾರಿ ಆಗಿದ್ದರು.
ಏತನ್ಮಧ್ಯೆ, ಕೊಹ್ಲಿಗೆ ಕೈಕೊಟ್ಟಿರುವುದರಿಂದಲೇ ಆತ ಇಂಥಾ ಸ್ಫೋಟಕ ಪ್ರದರ್ಶನ ನೀಡಿದರು. ಅದಕ್ಕಾಗಿ ಥ್ಯಾಂಕ್ಸ್ ಅನುಷ್ಕಾ ಎಂದು ಹೇಳುವ ಟ್ರೋಲ್ ಗಳೂ ಅನುಷ್ಕಾ, ನೀನು ಹೋದ ನಂತರ ಕೊಹ್ಲಿ ಫಾರ್ಮ್ ನಲ್ಲಿದ್ದಾರೆ. ಇನ್ನು ಆತನ ಜೀವನಕ್ಕೆ ಬರಬೇಡ ಎಂಬ ಟ್ರೋಲ್ ಗಳೂ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ.
ಈ ಹಿಂದೆ ಪಾಕಿಸ್ತಾನದ ವಿರುದ್ಧ ಭಾರತ ಜಯ ಸಾಧಿಸಿದಾಗಲೂ ಕೊಹ್ಲಿಯನ್ನು ಕೊಂಡಾಡಿದ ನೆಟಿಜನ್ ಗಳು ಅನುಷ್ಕಾಳನ್ನೇ ಟಾರ್ಗೆಟ್ ಮಾಡಿದ್ದರು.
ಪಂದ್ಯ ಮುಗಿದ ಕೂಡಲೇ ಕೊಹ್ಲಿಯನ್ನು ಶ್ಲಾಘಿಸುವ ಮತ್ತು ಅನುಷ್ಕಾಳನ್ನು ಟ್ರೋಲ್ ಮಾಡಿದ ಪೋಸ್ಟ್‌ಗಳ ಸುರಿಮಳೆ ಸಾಮಾಜಿಕ ತಾಣದಲಿ ಕಂಡು ಬಂದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕ್ರಿಕೆಟ್ಸಾಮಾಜಿಕ ತಾಣAnushka Sharmaಅನುಷ್ಕಾ ಶರ್ಮಾVirat Kohliವಿರಾಟ್ ಕೊಹ್ಲಿSocial MediaCricket Offbeatಕ್ರಿಕೆಟ್ ಸ್ವಾರಸ್ಯTrolls
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


