ಕೊನೇ ಓವರ್ ನಲ್ಲಿ ಧೋನಿ ಹೇಳಿದ್ದೇನು..? ಸ್ವತಃ ಪಾಂಡ್ಯಾ ಹೇಳಿದ್ದಾರೆ ಕೇಳಿ
ಆ ಮ್ಯಾಜಿಕಲ್ ಓವರ್ ಎಸೆದ ಹಾರ್ದಿಕ್ ಪಾಂಡ್ಯಾ ಧೋನಿ ಏನು ಹೇಳಿದ್ದರು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಪಾಂಡ್ಯಾಗೆ ಧೋನಿ ಏನು ಹೇಳಿದ್ದರು ಎಂದು ಕೇಳಿದರೆ ನಿಜಕ್ಕೂ ನೀವೂ ಕೂಡ ಬೆರಗಾಗುತ್ತೀರಾ..!

ನವದೆಹಲಿ: ಬಾಂಗ್ಲಾದೇಶದ ವಿರುದ್ಧ ಸೋಲಿನ ದವಡೆಯಲ್ಲಿದ್ದ ಭಾರತ ತಂಡವನ್ನು ಕೊನೆಯ ಓವರ್ ನಲ್ಲಿ ಮ್ಯಾಜಿಕ್ ಮಾಡುವ ಮೂಲಕ ಭಾರತದ ಹಾರ್ದಿಕ್ ಪಾಂಡ್ಯಾ ಗೆಲ್ಲಿಸಿಕೊಟ್ಟಿದ್ದರು. ಆ ಮ್ಯಾಜಿಕಲ್ ಓವರ್ ಗೂ ಮುನ್ನು ಧೋನಿ ಪಾಂಡ್ಯಾಗೆ ಏನೋ ಹೇಳಿದ್ದರು. ಧೋನಿ ಪಾಂಡ್ಯಾಗೆ ಏನು ಹೇಳಿದ್ದರು ಎಂಬ ಪಂದ್ಯ ಮುಗಿದ 3 ದಿನಗಳೇ ಕಳೆದಿದ್ದರೂ ಇನ್ನು ಚರ್ಚೆಯ ವಿಷಯವಾಗಿದೆ.
ಈ ಹಿಂದೆ ಒಂದು ಸಣ್ಣ ಹಿಂಟ್ ನೀಡಿದ್ದ ನಾಯಕ ಧೋನಿ ಯಾರ್ಕರ್ ಎಸೆದಂತೆ ಪಾಂಡ್ಯಾಗೆ ಸೂಚಿಸಿದ್ದೆ ಎಂದಷ್ಟೇ ಹೇಳಿದ್ದರು. ಇದೀಗ ಆ ಮ್ಯಾಜಿಕಲ್ ಓವರ್ ಎಸೆದ ಹಾರ್ದಿಕ್ ಪಾಂಡ್ಯಾ ಧೋನಿ ಏನು ಹೇಳಿದ್ದರು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಪಾಂಡ್ಯಾಗೆ ಧೋನಿ ಏನು ಹೇಳಿದ್ದರು ಎಂದು ಕೇಳಿದರೆ ನಿಜಕ್ಕೂ ನೀವೂ ಕೂಡ ಬೆರಗಾಗುತ್ತೀರಾ..!
ಭಾರತದ ತಂಡದ ಕೂಲ್ ಕ್ಯಾಪ್ಟನ್ ತಮ್ಮ ಅನಿರೀಕ್ಷಿತ ಮತ್ತು ದಿಢೀರ್ ನಿರ್ಧಾರಗಳಿಂದಾಗಿಯೇ ಕ್ರಿಕೆಟ್ ಜಗತ್ತಿನಲ್ಲಿ ಖ್ಯಾತಿ ಪಡೆದವರು. ಈ ವರೆಗೂ ಭಾರತ ಸೋಲಿನ ದವಡೆಯಲ್ಲಿದ್ದ ಪಂದ್ಯವನ್ನು ಗೆದ್ದಿರುವುದು ಧೋನಿ ಅವರ ಇಂತಹ ದಿಢೀರ್ ಮತ್ತು ಅನಿರೀಕ್ಷಿತ ನಿರ್ಧಾರಗಳಿಂದಾಗಿಯೇ. ಈ ಪಟ್ಟಿಗೆ ಇತ್ತೀಚೆಗಿನ ಸೇರ್ಪಡೆ ಬಾಂಗ್ಲಾದೇಶ ವಿರುದ್ಧದ ಟಿ20 ವಿಶ್ವಕಪ್ ಪಂದ್ಯ. ಇಡೀ ಕ್ರಿಕೆಟ್ ಜಗತ್ತನ್ನೇ ಚಕಿತಗೊಳಿಸಿದ್ದ ಆ ಪಂದ್ಯದ ಕೊನೆಯ ಓವರ್ ನಲ್ಲಿ ಪಾಂಡ್ಯಾ ನಿಜಕ್ಕೂ ಮ್ಯಾಜಿಕ್ ಮಾಡಿದ್ದರು. ಆ ಓವರ್ ಗೂ ಮುನ್ನ ಪಾಂಡ್ಯಾರನ್ನು ಕರೆಸಿಕೊಂಡಿದ್ದ ಧೋನಿ ಏನೋ ಹೇಳುತ್ತಿದ್ದರು. ಬಹುಶಃ ಧೋನಿ ಪಂದ್ಯ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡುತ್ತಿರಬೇಕು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಓವರ್ ಆರಂಭಕ್ಕೂ ಮುನ್ನ ಧೋನಿ ಏನು ಹೇಳಿದ್ದರು ಎಂಬುದನ್ನು ಆ ಮ್ಯಾಜಿಕಲ್ ಓವರ್ ಎಸೆದ ಹಾರ್ದಿಕ್ ಪಾಂಡ್ಯಾ ಬಹಿರಂಗಪಡಿಸಿದ್ದಾರೆ.
"ಕೊನೇ ಓವರ್ಗೆ ಮುನ್ನ ಧೋನಿ ನನಗೆ ಹೆಚ್ಚೇನೂ ಹೇಳಲಿಲ್ಲ. ಏನೂ ಭಯವಿಲ್ಲದೆ ಬೌಲಿಂಗ್ ಮಾಡು (ಬಿಂದಾಸ್ ಬೌಲಿಂಗ್ ಕರ್) ಎಂದಿದ್ದರು. ಅವರು ನನ್ನಿಚ್ಛೆಯಂತೆ ಬೌಲ್ ಮಾಡಲು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟರು. ಆತ್ಮವಿಶ್ವಾಸದಿಂದ ಬೌಲಿಂಗ್ ಮಾಡಿದರೆ ಯಶಸ್ಸು ಲಭಿಸುತ್ತದೆ ಅನ್ನುವುದು ಅವರಿಗೆ ಗೊತ್ತಿತ್ತು. ಹೀಗಾಗಿಯೇ ಒತ್ತಡದ ನಡುವೆಯೂ ನನಗೆ ನನ್ನಿಚ್ಛೆಯಂತೆ ಬೌಲ್ ಮಾಡಲು ಸ್ವಾತಂತ್ರ್ಯ ನೀಡಿದ್ದರು ಎಂದು ಹಾರ್ದಿಕ್ ಪಾಂಡ್ಯಾ ಹೇಳಿದ್ದಾರೆ.
ಒಟ್ಟಾರೆ ಆ ರೋಚಕ ಪಂದ್ಯದ ಮ್ಯಾಜಿಕಲ್ ಓವರ್ ಗೂ ಮುನ್ನ ಧೋನಿ ಏನೋ ಮಾಸ್ಟರ್ ಪ್ಲಾನ್ ಮಾಡಿದ್ದರು ಎಂದು ವಾದಿಸುತ್ತಿದ್ದ ಮಂದಿಗೆ ನಿಜಕ್ಕೂ ಧೋನಿ ಅಷ್ಟು ಒತ್ತಡದ ನಡುವೆಯೂ ಹೀಗೆ ಹೇಳಿದ್ದರೆ ಎಂಬ ಪ್ರಶ್ನೆ ಕಾಡುವುದಂತೂ ನಿಜ.. ಇದಕ್ಕೇ ಏನೋ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಕ್ರಿಕೆಟ್ ಜಗತ್ತಿನ ಗ್ಯಾಂಬ್ಲರ್ ಎಂದು....
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


