ಪಾಕ್ ವಿರುದ್ಧ ಆಸ್ಟ್ರೇಲಿಯಾಗೆ 21 ರನ್ ಜಯ; ಟಿ20 ವಿಶ್ವಕಪ್‌ನಿಂದ ಪಾಕ್ ಔಟ್
ಆಸ್ಟ್ರೇಲಿಯಾದ 193 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನಕ್ಕೆ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 172 ರನ್..

Published On :
ಮೊಹಾಲಿ: ಪಾಕಿಸ್ತಾನ - ಆಸ್ಟ್ರೇಲಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾ 21 ರನ್ ಗಳಿಂದ ಜಯಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗಿಳಿದ ಆಸ್ಟ್ರೇಲಿಯಾ ನಿಗದಿತ ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 193 ರನ್ ದಾಖಲಿಸಿತ್ತು. ಆಸ್ಟ್ರೇಲಿಯಾದ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನಕ್ಕೆ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 172 ರನ್‌ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು.
ಪಾಕಿಸ್ತಾನದ ಆರಂಭಿಕ ಆಟಗಾರ ಶರ್ಜೀಲ್ ಖಾನ್ ಉತ್ತಮ ಪ್ರದರ್ಶನ ನೀಡಿದ್ದರೂ, ಅಹ್ಮದ್ ಶೆಹಜಾದ್ ಮೂರನೇ ಓವರ್‌ನಲ್ಲಿ ಕೇವಲ ಒಂದು ರನ್ ಬಾರಿಸಿ ಹಜೇಲ್‌ವುಡ್ ಎಸೆತದಲ್ಲಿ ಕೌಲ್ಟರ್ ನಿಲೆ ಕೈಗೆ ಕ್ಯಾಚಿತ್ತು ಪೆವಿಲಿಯನ್‌ಗೆ ಮರಳಬೇಕಾಗಿ ಬಂತು. ಅನಂತರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಖಾಲಿದ್ ಲತೀಫ್, ಶರ್ಜೀಲ್ ಖಾನ್‌ಗೆ ಉತ್ತಮ ಸಾಥ್ ನೀಡಿದರು. 6 ನೇ ಓವರ್‌ನಲ್ಲಿ ಫಾಂಕ್ನರ್ ಎಸೆತಕ್ಕೆ ಶರ್ಜೀಲ್ (30) ವಿಕೆಟ್ ಕಳೆದುಕೊಂಡರು. ನಂತರ ಲತೀಫ್‌ಗೆ ಉಮರ್ ಅಕ್ಮಲ್ ಜತೆಯಾಗಿದ್ದು, ಇವರಿಬ್ಬರ ಜತೆಯಾಟ ಪಾಕಿಸ್ತಾನದ ಸ್ಕೋರ್ ಏರಿಕೆಯಾಗಲು ಸಹಾಯ ಮಾಡಿತು. ಏತನ್ಮಧ್ಯೆ, 11 ನೇ ಓವರ್‌ನಲ್ಲಿ ಜಂಪಾ ಅವರ ಖತರ್‌ನಾಕ್ ಬೌಲಿಂಗ್‌ಗೆ ಉಮರ್ ಅಕ್ಮಲ್ (32) ವಿಕೆಟ್ ಕಳೆದುಕೊಂಡರು.
ಇದಾದ ನಂತರ ಕ್ರೀಸ್‌ಗಿಳಿದಿದ್ದು ನಾಯಕ ಶಾಹಿದ್ ಅಫ್ರೀದಿ. ಒತ್ತಡವನ್ನೆದುರಿಸಿಯೇ ಬ್ಯಾಟಿಂಗ್ ಮಾಡಿದ ಅಫ್ರೀದಿ ಜಂಪಾ ಎಸೆತವನ್ನು ಎದುರಿಸುತ್ತಿದ್ದ ವೇಳೆ ನೆವಿಲ್‌ನಿಂದ ಸ್ಟಂಪಿಂಗ್‌ಗೆ ಬಲಿಯಾದರು. ಅಫ್ರೀದಿ ಏಳು ಎಸೆತಗಳನ್ನೆದುರಿಸಿ 14 ರನ್ ಗಳಿಸಿದ್ದರು.
ಅಫ್ರೀದಿ ನಂತರ ಶೊಯೆಬ್ ಮಲಿಕ್ ಲತೀಫ್‌ಗೆ ಉತ್ತಮ ಸಾಥ್ ನೀಡಿದರು. 18 ನೇ ಓವರ್‌ನಲ್ಲಿ 46 ರನ್ ಬಾರಿಸಿ ಫಾಂಕ್ನರ್ ಎಸೆತಕ್ಕೆ ಲತೀಫ್ ವಿಕೆಟ್ ಕಳೆದುಕೊಂಡರು.
ಲತೀಫ್ ನಿರ್ಗಮನದ ನಂತರ ಶೊಯೆಬ್ ಮಲಿಕ್ ಮಾತ್ರ ಏಕೈಕ ಹೋರಾಟಗಾರನಂತೆ ಕಂಡು ಬಂದರು. ಲತೀಫ್ ನಂತರ ಬಂದ ಇಮಾದ್ ವಾಸಿಂ (0), ಸರ್ಫರಾಜ್ ಅಹ್ಮದ್ (2) , ವಹೀಬ್ ರಿಯಾಜ್ (0) ಒಬ್ಬರ ಹಿಂದೆ ಒಬ್ಬರು ಎಂಬಂತೆ ಫಾಂಕ್ನರ್ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಪಂದ್ಯ ಅಂತ್ಯಗೊಂಡಾಗ ಕ್ರೀಸ್ ನಲ್ಲಿದ್ದ ಮೊಹಮ್ಮದ್ ಸಮಿ 2 ಎಸೆತದಲ್ಲಿ 5 ರನ್ (ಅಜೇಯ) ಗಳಿಸಿದರೆ ಶೊಯೆಬ್ ಮಲಿಕ್ 20 ಬಾಲ್‌ಗಳಲ್ಲಿ 40 ರನ್ ಪಡೆದು ಅಜೇಯರಾಗಿ ಉಳಿದರು.
ಪ್ರಸ್ತುತ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ನಿಗದಿತ ಓವರ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್‌ಗಳನ್ನು ದಾಖಲಿಸಿತು. ಆಸ್ಟ್ರೇಲಿಯಾ ಪರವಾಗಿ ಜೇಮ್ಸ್ ಫಾಂಕ್ನರ್ 5 ವಿಕೆಟ್, ಆ್ಯಡಮ್ ಜಂಪಾ 2 ಮತ್ತು ಜೋಶ್ ಹಜೇಲ್‌ವುಡ್ 1 ವಿಕೆಟ್ ಕಬಳಿಸಿದರು.
ಪಾಕಿಸ್ತಾನದ ವಿರುದ್ಧದ ಈ ಪಂದ್ಯವನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಸೆಮಿಫೈನಲ್ ಹಂತ ಪ್ರವೇಶಿಸುವ ಸನಿಹದಲ್ಲಿದೆ. ಮಾರ್ಚ್ 27 ಭಾನುವಾರದಂದು ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಪಂದ್ಯ ನಡೆಯಲಿದ್ದು, ಈ ಪಂದ್ಯ ಉಭಯ ತಂಡಗಳಿಗೆ ಸೆಮಿಫೈನಲ್ ಪ್ರವೇಶಿಸಲು ನಿರ್ಣಾಯಕ ಪಂದ್ಯವಾಗಲಿದೆ.
ಅದೇ ವೇಳೆ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಮಾತ್ರ ಗೆಲವು ಸಾಧಿಸಿದ್ದ ಪಾಕಿಸ್ತಾನ ತಂಡವು ನ್ಯೂಜಿಲ್ಯಾಂಡ್, ಭಾರತ ಮತ್ತು ಆಸ್ಟ್ರೇಲಿಯಾದೊಂದಿಗೆ ಸೋಲುವ ಮೂಲಕ ಐಸಿಸಿ ಟಿ20 ವಿಶ್ವಕಪ್ ಪಂದ್ಯದಿಂದಲೇ ಔಟ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


