ಕ್ರಿಕೆಟ್

ಇಂಡೋ-ಬಾಂಗ್ಲಾ ರೋಚಕ ಪಂದ್ಯಕ್ಕೆ ಸಾಕ್ಷಿಯಾದ ಹಾಕಿ ಆಟಗಾರರು

ಹಲವು ರೋಚಕತೆಗೆ ಕಾರಣವಾದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯಕ್ಕೆ ಭಾರತದ ಹಾಕಿ ಆಟಗಾರರೂ ಕೂಡ ಸಾಕ್ಷಿಯಾಗಿದ್ದರು...

ಇಂಡೋ-ಬಾಂಗ್ಲಾ ರೋಚಕ ಪಂದ್ಯಕ್ಕೆ ಸಾಕ್ಷಿಯಾದ ಹಾಕಿ ಆಟಗಾರರು
ಭಾರತ-ಬಾಂಗ್ಲಾ ನಡುವಿನ ಕ್ರಿಕೆಟ್ ಪಂದ್ಯ ವೀಕ್ಷಣೆಯಲ್ಲಿ ಭಾರತದ ಹಾಕಿ ಆಟಗಾರರು(ಚಿತ್ರಕೃಪೆ: ಟ್ವಿಟರ್-ಬಿಸಿಸಿಐ)
Published On :

ಬೆಂಗಳೂರು: ಹಲವು ರೋಚಕತೆಗೆ ಕಾರಣವಾದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯಕ್ಕೆ ಭಾರತದ ಹಾಕಿ ಆಟಗಾರರೂ ಕೂಡ ಸಾಕ್ಷಿಯಾಗಿದ್ದರು.

ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವನ್ನು ಭಾರತದ ತಂಡದ ನಾಯಕ ಸರ್ದಾರ್ ಸಿಂಗ್ ನೇತೃತ್ವದ ಹಾಕಿ ತಂಡದ  ಆಟಗಾರರು ಕಣ್ತುಂಬಿಕೊಂಡರು. ರಿಯೋ ಒಲಿಂಪಿಕ್ಸ್ ಹಾಗೂ ಅಜ್ಲಾನ್ ಷಾ ಕಪ್‌ಗಾಗಿ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಶಿಬಿರದಲ್ಲಿ ಪಾಲ್ಗೊಂಡಿರುವ ಭಾರತ ಹಾಕಿ ತಂಡದ ಆಟಗಾರರು ಬುಧವಾರದ ಪಂದ್ಯ ವೀಕ್ಷಿಸಿದರು.

ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದ ಹಾಕಿ ಆಟಗಾರರಿಗೆ ಪಂದ್ಯ ವೀಕ್ಷಿಸುವಂತೆ ಖುದ್ದು ಬಿಸಿಸಿಐ ಆಹ್ವಾನ ನೀಡಿತ್ತು. ಅಲ್ಲದೆ ಸಂಪೂರ್ಣ ಹಾಕಿ ತಂಡಕ್ಕೆ ಪಂದ್ಯ ವೀಕ್ಷಿಸಲು ಬೇಕಾದ ಎಲ್ಲ  ಏರ್ಪಾಟುಗಳನ್ನೂ ಬಿಸಿಸಿಐ ಮಾಡಿತ್ತು. ಬಿಸಿಸಿಐ ಆಹ್ವಾನದ ಮೇರೆಗೆ ಕೆಂಪು ಟಿಶರ್ಟ್ ಧರಿಸಿ ಕ್ರೀಡಾಂಗಣಕ್ಕೆ ಆಗಮಿಸಿದ ಹಾಕಿ ಆಟಗಾರರ ಭಾರತ ತಂಡವನ್ನು ಹುರಿದುಂಬಿಸಿದರು. ಅಲ್ಲದೆ  ಭಾರತ ತಂಡ ಕೊನೆಯ ಓವರ್ ನಲ್ಲಿ ರೋಚಕ ಜಯ ದಾಖಲಿಸುತ್ತಿದ್ದಂತೆಯೇ ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದರು.

ಕ್ರೀಡಾ ಉತ್ತೇಜನದ ದೃಷ್ಟಿಯಿಂದ ಬಿಸಿಸಿಐನ ಈ ಕಾರ್ಯ ನಿಜಕ್ಕೂ ಶ್ಲಾಘನಾರ್ಹವಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಬಿಸಿಸಿಐನ ಈ ಕಾರ್ಯಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.