ಕ್ರಿಕೆಟ್

ಭಾರತ-ಬಾಂಗ್ಲಾ ಕ್ರಿಕೆಟ್ ವೈರತ್ವ: ನನಗೇನು ಗೊತ್ತಿಲ್ಲ ಎಂದ ನೆಹ್ರಾ

ಟೀಂ ಇಂಡಿಯಾ ಹಾಗೂ ಬಾಂಗ್ಲಾ ಅಭಿಮಾನಿಗಳ ನಡುವೆ ಸಾಮಾಜಿಕ ತಾಣಗಳಲ್ಲಿ ಉಂಟಾದ ಕಲಹದ ಬಗ್ಗೆ ಪ್ರತಿಕ್ರಿಯಿಸಿರುವ ವೇಗಿ ಆಶೀಶ್ ನೆಹ್ರಾ...

ಭಾರತ-ಬಾಂಗ್ಲಾ ಕ್ರಿಕೆಟ್ ವೈರತ್ವ: ನನಗೇನು ಗೊತ್ತಿಲ್ಲ ಎಂದ ನೆಹ್ರಾ
ಆಶೀಶ್ ನೆಹ್ರಾ
Published On :

ಬೆಂಗಳೂರು: ಟೀಂ ಇಂಡಿಯಾ ಹಾಗೂ ಬಾಂಗ್ಲಾ ಅಭಿಮಾನಿಗಳ ನಡುವೆ ಸಾಮಾಜಿಕ ತಾಣಗಳಲ್ಲಿ ಉಂಟಾದ ಕಲಹದ ಬಗ್ಗೆ ಪ್ರತಿಕ್ರಿಯಿಸಿರುವ ವೇಗಿ ಆಶೀಶ್ ನೆಹ್ರಾ ಅವರು, ನಾನು ಹಳೇಯ ನೊಕಿಯಾ ಮೊಬೈಲ್ ಬಳಸುತ್ತಿದ್ದೇನೆ. ಹೀಗಾಗಿ ನಾನು ಫೇಸ್ ಬುಕ್, ಟ್ವೀಟರ್, ವಾಟ್ಸ್ ಆಪ್ ಗಳನ್ನು ನೋಡುವುದಿಲ್ಲ ಹೀಗಾಗಿ ನನಗೆ ಭಾರತ-ಬಾಂಗ್ಲಾ ಕ್ರಿಕೆಟ್ ವೈರತ್ವದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಭಾರತ-ಬಾಂಗ್ಲಾ ಕ್ರಿಕೆಟ್ ವೈರತ್ವದ ಬಗ್ಗೆ ಬಾಂಗ್ಲಾ ಪರ್ತಕರ್ತರು ಕೇಳಿದ ಪ್ರಶ್ನೆ ಉತ್ತರಿಸಿದ ನೆಹ್ರಾ, ನೀವು ಕೇಳುತ್ತಿರುವ ಪ್ರಶ್ನೆಗೆ ಉತ್ತರಿಸುವ ಸೂಕ್ತ ವ್ಯಕ್ತಿ ನಾನಲ್ಲ. ನನ್ನ ಬಳಿ ಹಳೆಯ ನೋಕಿಯಾ ಮೊಬೈಲ್ ಇದೆ. ಅದರಲ್ಲಿ ಸಾಮಾಜಿಕ ಜಾಲತಾಣಗಳನ್ನು ನೋಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಬಾಂಗ್ಲಾ-ಭಾರತ ಪಂದ್ಯ ನಡೆಯಲಿದ್ದು ಈ ಕುರಿತು ಮಾತನಾಡಿದ ಅವರು, ನಮ್ಮ ತಂಡವು ಎಲ್ಲ ವಿಭಾಗಗಳಲ್ಲಿಯೂ ಬಲಿಷ್ಠವಾಗಿದೆ. ಎಲ್ಲ ಆಟಗಾರರು ಉತ್ತಮವಾಗಿ ಆಟವಾಡುತ್ತಿದ್ದಾರೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.