ಮಹಿಳಾ ಟಿ20 ವಿಶ್ವಕಪ್: ಐರ್ಲೆಂಡ್ ವಿರುದ್ಧ ಶ್ರೀಲಂಕಾಗೆ ಜಯ
ಮೊಹಾಲಿಯಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ನ ಭಾನುವಾರದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಶ್ರೀಲಂಕಾ ವನಿತೆಯರು 14 ರನ್..

ಮೊಹಾಲಿ: ಮೊಹಾಲಿಯಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ನ ಭಾನುವಾರದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಶ್ರೀಲಂಕಾ ವನಿತೆಯರು 14 ರನ್ ಗಳ ರೋಚಕ ಜಯ ಸಾಧಿಸಿದ್ದಾರೆ.
ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ವನಿತೆಯರ ತಂಡ ಜಯಂಗಿಣಿ (34ರನ್), ವೀರಕ್ಕೋಡಿ (32 ರನ್) ಮತ್ತು ಕೌಶಲ್ಯ (ಅಜೇಯ 35 ರನ್) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 129 ರನ್ ಕಲೆಹಾಕಿತು. ಐರ್ಲೆಂಡ್ ವನಿತೆಯರ ಪರ ಮೆಟ್ ಕಲ್ಫೆ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿ 4 ವಿಕೆಟ್ ಕಬಳಿಸಿ ಲಂಕಾವನ್ನು ಕೇವಲ 129 ರನ್ ಗಳಿಗೆ ನಿಯಂತ್ರಿಸಿದರು. ಉಳಿದಂತೆ ಡೆಲಾನಿ ಮತ್ತು ರೀಲ್ಲಿ ತಲಾ 1 ವಿಕೆಟ್ ಪಡೆದರು.
ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಐರ್ಲೆಂಡ್ ವನಿತೆಯರು ಅದೇ ಪ್ರದರ್ಶನವನ್ನು ಬ್ಯಾಟಿಂಗ್ ನಲ್ಲಿ ಮುಂದುವರೆಸುವಲ್ಲಿ ವಿಫಲರಾದರು. ಲಂಕಾ ನೀಡಿದ 130 ರನ್ ಗಳ ಗುರಿಗೆ ಬದಲಾಗಿ ಐರ್ಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದು ಕೊಂಡು 115ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಶ್ರೀಲಂಕಾ ವನಿತೆಯರ ವಿರುದ್ಧ 14 ರನ್ ಗಳ ಅಂತರದಿಂದ ರೋಚಕ ಸೋಲು ಕಂಡಿತು. ಲಂಕಾಪರ ಎಸ್ ಎಂ ಕುಮಾರಿ 3 ವಿಕೆಟ್ ಪಡೆದರೆ, ರಣವೀರಾ ಮತ್ತು ರಣಸಿಂಘೆ ತಲಾ 1 ವಿಕೆಟ್ ಪಡೆದರು.
ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಐರ್ಲೆಂಡ್ ಮೆಟಕಲ್ಫೆ ಪಂದ್ಯಶ್ರೇಷ್ಢ ಪ್ರಶಸ್ತಿಗೆ ಭಾಜನರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


