ವಿಂಡೀಸ್ ಗೆ ಸುಲಭ ತುತ್ತಾದ ಲಂಕಾ
ವೆಸ್ಟ್ ಇಂಡೀಸ್ ನ ಫ್ಲೆಚರ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಶ್ರೀಲಂಕಾ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ..

ಬೆಂಗಳೂರು: ವೆಸ್ಟ್ ಇಂಡೀಸ್ ನ ಫ್ಲೆಚರ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಶ್ರೀಲಂಕಾ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.
ಭಾನುವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವಿಶ್ವಕಪ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 7 ವಿಕೆಟ್ ಗಳ ಗೆಲುವು ದಾಖಲಿಸಿದೆ. ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ವಿಂಡೀಸ್ ನ ಬದ್ರೀ ಅವರ ಮಾರಕ ಬೌಲಿಂಗ್ ದಾಳಿದೆ ತತ್ತರಿಸಿ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 122 ರನ್ ಗಳಿಸಲಷ್ಟೇ ಶಕ್ತವಾಯಿತು.
ತೀಸ್ರಾ ಪರೇರಾ (40 ರನ್) ಅವರನ್ನು ಹೊರತು ಪಡಿಸಿದರೆ ಲಂಕಾದ ಯಾವುದೇ ಬ್ಯಾಟ್ಸಮನ್ ವೆಸ್ ಇಂಡೀಸ್ ಬೌಲರ್ ಗಳನ್ನು ಎದುರಿಸುವ ಸಾಹಸ ಮಾಡಲಿಲ್ಲ. ಲಂಕಾದ ಮೂವರು ಆಟಗಾರರು ಶೂನ್ಯಕ್ಕೆ ಔಟ್ ಆದರೆ, ನಾಲ್ಕು ಬ್ಯಾಟ್ಸಮನ್ ಗಳು ಎರಡಂಕಿ ಕೂಡ ದಾಟಲಿಲ್ಲ. ಇದು ಲಂಕಾದ ವೈಫಲ್ಯಕ್ಕೆ ಕಾರಣವಾಯಿತು. ವಿಂಡೀಸ್ ಪರ ಬದ್ರೀ 3 ವಿಕೆಟ್ ಕಬಳಿಸಿದರೆ, ಬ್ರಾವೋ 2 ವಿಕೆಟ್ ಕಬಳಿಸಿದರು. ಇನ್ನು ರಸೆಲ್ ಮತ್ತು ಬ್ರಾತ್ ವೇಟ್ ತಲಾ ಒಂದು ವಿಕೆಟ್ ಪಡೆದರು.
ಲಂಕಾ ನೀಡಿದ 123 ರನ್ ಗಳ ಗುರಿ ಬೆನ್ನು ಹತ್ತಿದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರ ಫ್ಲೆಚರ್ ಲಂಕಾ ಬೌಲರ್ ಗಳ ಮೇಲೆ ಸವಾರಿ ಮಾಡಿದರು. ಕೇವಲ 64 ಎಸೆತಗಳನ್ನು ಎದುರಿಸಿದ ಫ್ಲೆಚರ್ 84 ರನ್ ಗಳನ್ನು ಸಿಡಿಸಿ ವೆಸ್ಟ್ ಇಂಡೀಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಚಾರ್ಲ್ಸ್ 10 ರನ್ ಗಳಿಸಿ ಔಟ್ ಆದರೆ, ಸ್ಯಾಮುಯೆಲ್ಸ್ 3 ಮತ್ತು ರಾಮ್ ದಿನ್ 5 ರನ್ ಗಳಿಸಿ ಔಟ್ ಆದರು. ಬಳಿಕ ಬಂದ ರಸೆಲ್ ಫ್ಲೆಚರ್ ಜೊತೆಗೂಡಿ ಅಜೇಯ 20 ರನ್ ಗಳಿಸುವ ಮೂಲಕ ಗೆಲುವಿನ ಔಪಚಾರಿಕತೆ ಮುಗಿಸಿದರು. ಲಂಕಾ ಪರ ಸಿರಿವರ್ಧನ 2 ವಿಕೆಟ್ ಪಡೆದರೆ, ವಂಡರ್ಸೇ 1 ವಿಕೆಟ್ ಪಡೆದರು.
ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡ 18.2 ಓವರ್ ಗಳಲ್ಲಿ 127 ರನ್ ದಾಖಲಿಸುವ ಮೂಲಕ ಶ್ರೀಲಂಕಾ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ವೆಸ್ಟ್ ಇಂಡೀಸ್ ನ ಫ್ಲೆಚರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


