ಪಾಕ್ ವಿರುದ್ಧ ಪಂದ್ಯ ಗೆದ್ದ ಟೀಂ ಇಂಡಿಯಾಗೆ ಸಚಿನ್ ವಿಶೇಷ ಸಂದೇಶ
ಇದೊಂದು ಅದ್ಭುತ ಗೆಲವು ಟೀಂ ಇಂಡಿಯಾ. ಈ ಇನ್ನಿಂಗ್ಸ್ ಮತ್ತು ಆ ನಮನಕ್ಕಾಗಿ ವಿರಾಟ್ ಕೊಹ್ಲಿಗೆ ಧನ್ಯವಾದಗಳು. ಪಂದ್ಯ ಮುಗಿದ....

Published On :
ಮುಂಬೈ: ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಪರಾಭವಗೊಳಿಸಿದ ಟೀಂ ಇಂಡಿಯಾಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ವಿಶೇಷ ಸಂದೇಶ ನೀಡಿದ್ದಾರೆ.
ಶನಿವಾರ ಕೊಲ್ಕತ್ತಾದ ಈಡೆನ್ ಗಾರ್ಡೆನ್ಸ್ ನಲ್ಲಿ ಪಂದ್ಯ ವೀಕ್ಷಿಸಿದ ಸಚಿನ್ ತೆಂಡೂಲ್ಕರ್, ಭಾರತೀಯ ತಂಡಕ್ಕೆ ಹುರುಪು ತುಂಬುತ್ತಿದ್ದುದು ಕಂಡು ಬಂತು. ಸಚಿನ್ ಈಡೆನ್ ಮೈದಾನಕ್ಕೆ ಕಾಲಿಟ್ಟಾಗ ಅಭಿಮಾನಿಗಳು ಸಚಿನ್..ಸಚಿನ್...ಎಂದು ಕೂಗುತ್ತಾ ಸಚಿನ್‌ಗೆ ಸ್ವಾಗತ ಕೋರಿದ್ದರು.
ಪಂದ್ಯದುದ್ದಕ್ಕೂ ಭಾರತದ ತಂಡವನ್ನು ಪ್ರೋತ್ಸಾಹಿಸುತ್ತಾ ಬಂದ ಸಚಿನ್ ಭಾರತ ಪಾಕ್‌ನ್ನು ಪರಾಭವಗೊಳಿಸಿದ ನಂತರ ಫೇಸ್‌ಬುಕ್‌ನಲ್ಲಿ ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿ ಸಂದೇಶ ಬರೆದಿದ್ದಾರೆ.
ಇದೊಂದು ಅದ್ಭುತ ಗೆಲವು ಟೀಂ ಇಂಡಿಯಾ. ಈ ಇನ್ನಿಂಗ್ಸ್ ಮತ್ತು ಆ ನಮನಕ್ಕಾಗಿ ವಿರಾಟ್ ಕೊಹ್ಲಿಗೆ ಧನ್ಯವಾದಗಳು. ಪಂದ್ಯ ಮುಗಿದ ನಂತರ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂಗೆ ಮರಳುವಾಗ ನನ್ನತ್ತ ಕೈ ಬೀಸಿದರು. ನಾನು ಅವರ ಟೀಂ ನಿಂದ ಹೊರೆಗೆ ಬಂದೇ ಇಲ್ಲ ಎಂಬ ಅನುಭವ ನನಗೆ... ಎಂದು ಸಚಿನ್ ಫೇಸ್ ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Sachin Tendulkarಸಚಿನ್ ತೆಂಡೂಲ್ಕರ್ಭಾರತTeam IndiaPakistanಪಾಕಿಸ್ತಾನICC T20 World Cupಐಸಿಸಿ ಟಿ 20 ವಿಶ್ವಕಪ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


