ಬೆ೦ಗಳೂರು ನನ್ನ ತವರು: ಕ್ರಿಸ್ ಗೇಯ್ಲ್..!
ಸಿಕ್ಸರ್ ಗಳ ಮೂಲಕವೇ ಅಭಿಮಾನಿಗಳ ಮನಸೂರೆಗೊಳ್ಳುವ ವೆಸ್ಟ್ ಇಂಡೀಸ್ ತಂಡದ ದೈತ್ಯ ಕ್ರಿಸ್ ಗೇಯ್ಲ್ ಗೆ ಬೆಂಗಳೂರೇ ತವರಂತೆ..

ಮು೦ಬೈ: ಸಿಕ್ಸರ್ ಗಳ ಮೂಲಕವೇ ಅಭಿಮಾನಿಗಳ ಮನಸೂರೆಗೊಳ್ಳುವ ವೆಸ್ಟ್ ಇಂಡೀಸ್ ತಂಡದ ದೈತ್ಯ ಕ್ರಿಸ್ ಗೇಯ್ಲ್ ಗೆ ಬೆಂಗಳೂರೇ ತವರಂತೆ..
ಈ ವಿಚಾರವನ್ನು ಸ್ವತಃ ಅವರೇ ಬಹಿರಂಗ ಪಡಿಸಿದ್ದು, ಇ೦ಗ್ಲೆ೦ಡ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಆಟವಾಡಿದ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಕ್ರಿಸ್ ಗೇಯ್ಲ್ ಬೆ೦ಗಳೂರು ತಮ್ಮ "ತವರು ಮ್ಯೆದಾನ' ಎಂದು ಹೇಳಿದರು. ಆ ಮೂಲಕ ಬೆ೦ಗಳೂರಿನ ಚಿನ್ನಸ್ವಾಮಿ ಕ್ರೀಡಾ೦ಗಣದಲ್ಲೂ ಸಿಕ್ಸರ್ ಗಳ ಸುರಿಮಳೆ ಮು೦ದುವರಿಸುವ ಸೂಚನೆ ನೀಡಿದ್ದಾರೆ. ಸಿಕ್ಸರ್ ಗಳನ್ನು ಸಿಡಿಸಿ ಅತ್ಯಧಿಕ ಸಿಕ್ಸರ್ ಸಿಡಿಸಿದ ದಾಖಲೆ ಬರೆದಿರುವ ಕ್ರಿಸ್ ಗೇಯ್ಲ್ ಅದೇ ಸಿಕ್ಸರ್ ಗಳ ಮೂಲಕ ಟಿ20 ವಿಶ್ವಕಪ್ ಇತಿಹಾಸದ ಅತಿವೇಗದ ಶತಕ ಸಾಧನೆಯ ತಮ್ಮದೇ ದಾಖಲೆಯನ್ನು ಸುಧಾರಿಸಿಕೊ೦ಡಿದ್ದಾರೆ.
ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಮೂಲಕ ಭಾರತದಲ್ಲಿ ಅಪಾರ ಅಭಿಮಾನಿ ಬಳಗವನ್ನು ಸ೦ಪಾದಿಸಿ ಕೊಂಡಿರುವ ಕ್ರಿಸ್ ಗೇಯ್ಲ್ ಗೆ ಬೆ೦ಗಳೂರು ಪಿಚ್ ಈಗ ಚಿರಪರಿಚಿತವಾಗಿರುವುದು ಅವರ ಮಾತಿನಿ೦ದಲೇ ಸ್ಪಷ್ಟವಾಗುತ್ತದೆ. "ನಾನು ಕ್ರೀಸ್ ಗೆ ಇಳಿಯುವ ಮುನ್ನ ಸಹ ಆಟಗಾರ ಸುಲೇಮನ್ ಬೆನ್, "ನನಗೆ ಮನೋರ೦ಜನೆ ಬೇಕು' ಎ೦ದಿದ್ದರು.
ಇನ್ನೀಗ ನನ್ನ "ತವರು ಮ್ಯೆದಾನ' ಬೆ೦ಗಳೂರಿನಲ್ಲಿ ಶ್ರೀಲ೦ಕಾ ವಿರುದ್ಧವೂ ಇ೦ಥದ್ದೇ ಮನೋರ೦ಜನೆ ಒದಗಿಸುವ ಭರವಸೆಯಲ್ಲಿದ್ದೇನೆ' ಎ೦ದು ಅವರು ಪ೦ದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಹೇಳಿದರು. ಇದೇ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿ೦ಡೀಸ್- ಶ್ರೀಲ೦ಕಾ ತಂಡಗಳು ಮುಖಾಮುಖಿಯಾಗಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


