ಅಭಿಮಾನಿಗಷ್ಟೇ ಅಲ್ಲ ಪಾಕಿಸ್ತಾನ ಮಹಿಳಾ ಕ್ರಿಕೆಟಿಗರಿಗೂ ಕೊಹ್ಲಿಯೇ ಫೇವರಿಟ್..!
ಭಾರತದ ಸ್ಫೋಟಕ ಬ್ಯಾಟ್ಸಮನ್ ಮತ್ತು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮೇಲಿನ ವಿದೇಶಿಗ..

ನವದೆಹಲಿ: ಭಾರತದ ಸ್ಫೋಟಕ ಬ್ಯಾಟ್ಸಮನ್ ಮತ್ತು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮೇಲಿನ ವಿದೇಶಿಗರ ಪ್ರೀತಿಯ ಸರಣಿ ಮುಂದುವರೆದಿದ್ದು, ಪಾಕಿಸ್ತಾನ ಮಹಿಳಾ ಕ್ರಿಕೆಟ್ ಪಡೆ ಇದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ.
ವಿರಾಟ್ ಕೊಹ್ಲಿಯನ್ನು ಬೆಂಬಲಿಸಿದ್ದ ಪಾಕಿಸ್ತಾನದ ಅಭಿಮಾನಿಯೊಬ್ಬ ಭಾರತದ ರಾಷ್ಟ್ರಧ್ವಜ ಹಾರಿಸಿದ್ದಕ್ಕೆ ಜೈಲಿಗೆ ಹೋಗಿ ಬಂದ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ಪಾಕಿಸ್ತಾನದ ವಿರಾಟ್ ಕೊಹ್ಲಿ ಅಭಿಮಾನ ಬಹಿರಂಗವಾಗಿದೆ. ಪಾಕಿಸ್ತಾನದಲ್ಲಿ ಕೊಹ್ಲಿ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ ಎಂಬುದಕ್ಕೆ ಸಾಕ್ಷಿ ಅಲ್ಲಿನ ಮಹಿಳಾ ಕ್ರಿಕೆಟಿಗರು! ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದಿಂದ ಈ ಮಾತು ಕೇಳಿಬಂದಿದ್ದು, ಅದೂಕೂಡ ತಂಡದ ನಾಯಕ್ ಸನಾ ಮಿರ್ ಅವರು ಸ್ವತಃ ಈ ಮಾತನ್ನು ಬಹಿರಂಗಗೊಳಿಸಿದ್ದಾರೆ.
ಹೌದು, ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಬಂದಿರುವ ಪಾಕ್ ತಂಡದ ಆಟಗಾರ್ತಿಯರು, ಕೊಹ್ಲಿ ತಮ್ಮ ಫೆವರಿಟ್ ಆಟಗಾರ ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಪಾಕಿಸ್ತಾನ ತಂಡದ 30 ವರ್ಷದ ನಾಯಕಿ ಸನಾ ಮಿರ್, ಭಾನುವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಇದನ್ನು ಹೇಳಿ ಅಚ್ಚರಿ ಮೂಡಿಸಿದರು. ‘ನಮಗೆ ಭಾರತೀಯ ಕ್ರಿಕೆಟಿಗರಲ್ಲಿ ಫೆವರಿಟ್ ಅನ್ನಲು ಕೆಲವರಿದ್ದಾರೆ. ನಮ್ಮ ತಂಡಕ್ಕೆ ಫೆವರಿಟ್ ಆಟಗಾರ ಯಾರು ಎಂದು ಕೇಳಿದರೆ ಅದು ವಿರಾಟ್ ಕೊಹ್ಲಿ ಮಾತ್ರ. ವೈಯುಕ್ತಿಕವಾಗಿ ಧೋನಿ ನನ್ನ ಫೆವರಿಟ್ ಆಟಗಾರ. ಯಾಕೆಂದರೆ ಅವರು ನಾಯಕತ್ವವನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಕಿರಿಯ ಆಟಗಾರರನ್ನೂ ತಂಡದ ಪರಿಣಾಮಕಾರಿ ಶಕ್ತಿಯನ್ನಾಗಿ ಮಾಡಿದ್ದಾರೆ’ ಎಂದು ಮನದಾಳದ ಮಾತು ಬಿಚ್ಚಿಟ್ಟರು.
ಮುಸ್ಲಿಂ ರಾಷ್ಟ್ರ ಪಾಕಿಸ್ತಾನದಲ್ಲಿ ಈಗ ಮಹಿಳಾ ಕ್ರಿಕೆಟ್ ಸುಧಾರಣೆಯತ್ತ ಮುಖಮಾಡಿದೆ ಎಂದ ಸನಾ, ‘ಮಕ್ಕಳ ಹೆತ್ತವರು ಈಗ ಆಸಕ್ತಿ ತೋರುತ್ತಿದ್ದು, ತಮ್ಮ ಮಗಳೂ ಕ್ರಿಕೆಟ್ ಆಡಬೇಕೆಂದು ಹೇಳುತ್ತಾರೆ’ ಎಂದರು. ಇನ್ನು ತಮ್ಮ ಬಳಿಕ ನಾಯಕತ್ವ ವಹಿಸುವವರಿಗೆ ನಾನು ಸಂಪೂರ್ಣ ಸಹಕಾರ ನೀಡಲಿದ್ದು, ಅವರ ನಾಯಕತ್ವದಲ್ಲಿ ನುರಿತರಾಗುವವರೆಗೂ ನಾನು ತಂಡದಲ್ಲಿ ಆಟಗಾರ್ತಿಯಾಗಿ ಮುಂದುವರೆದು ಅವರಿಗೆ ನೆರವಾಗುತ್ತೇನೆ. ಇದಕ್ಕೆ ನನಗೆ ಶ್ರೀಲಂಕಾ ತಂಡ ಮಾಜಿ ನಾಯಕರಾದ ಜಯವರ್ಧನೆ ಮತ್ತು ಕುಮಾರ ಸಂಗಕ್ಕಾರ ಅವರೇ ಸ್ಪೂರ್ತಿ. ಇಂತಹ ಆಟಗಾರರೇ ಜಾಗತಿಕವಾಗಿ ಕ್ರಿಕೆಟ್ ಗೆ ಅದ್ಭುತ ರಾಯಭಾರಿಗಳು ಎಂದು ಸನಾಮಿರ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


