ಕ್ರಿಕೆಟ್

ಪಾಕಿಸ್ತಾನಕ್ಕೆ ಟಿ20 ವಿಶ್ವಕಪ್: ಭವಿಷ್ಯ ನುಡಿದ ಜ್ಯೋತಿಷಿ

2016 ಐಸಿಸಿ ಟ್ವೆಂಟಿ 20 ವಿಶ್ವಕಪ್ ಕ್ರಿಕೆಟ್ ಸಮರದ ಬಿಸಿಯೇರಿರುವ ಹೊತ್ತಿನಲ್ಲೇ, ಈ ಬಾರಿಯ ವಿಶ್ವಕಪ್ ಪಾಕಿಸ್ತಾನದ ಪಾಲಾಗಲಿದೆ...

ಪಾಕಿಸ್ತಾನಕ್ಕೆ ಟಿ20 ವಿಶ್ವಕಪ್: ಭವಿಷ್ಯ ನುಡಿದ ಜ್ಯೋತಿಷಿ
ಶಾಹಿದ್ ಅಫ್ರೀದಿ- ಮಹೇಂದ್ರ ಸಿಂಗ್ ಧೋನಿ
Published On :
ನವದೆಹಲಿ: 2016 ಐಸಿಸಿ ಟ್ವೆಂಟಿ 20 ವಿಶ್ವಕಪ್ ಕ್ರಿಕೆಟ್ ಸಮರದ ಬಿಸಿಯೇರಿರುವ ಹೊತ್ತಿನಲ್ಲೇ, ಈ ಬಾರಿಯ ವಿಶ್ವಕಪ್ ಪಾಕಿಸ್ತಾನದ ಪಾಲಾಗಲಿದೆ ಎಂದು ಭಾರತದ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
ಡಾನ್  (Dawn) ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದ ಪ್ರಕಾರ ಭಾರತೀಯ ಜ್ಯೋತಿಷಿ ಗ್ರೀನ್ ಸ್ಟೋನ್ ಲೋಬೋ ಎಂಬವರು ಈ ರೀತಿಯ ಭವಿಷ್ಯ ನುಡಿದಿದ್ದಾರೆ. ಒಂದು ವೇಳೆ ಪಾಕಿಸ್ತಾನ ಫೈನಲ್‌ಗೆ ತಲುಪಿದರೆ, ಪಾಕಿಸ್ತಾನವೇ ಈ ಬಾರಿ ವಿಶ್ವಕಪ್ ಗೆಲ್ಲಲಿದೆ.
ಅದೇ ವೇಳೆ ಫೈನಲ್ ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯವೇರ್ಪಟ್ಟರೆ ಅಲ್ಲಿ ಧೋನಿ ಪಡೆಯನ್ನು ಶಾಹಿದ್ ಅಫ್ರೀದಿ ತಂಡ ಪರಾಭವಗೊಳಿಸಲಿದೆ ಎಂದು ಲೋಬೋ ಹೇಳಿದ್ದಾರೆ.
ಆದಾಗ್ಯೂ, ವೈಜ್ಞಾನಿಕ ಅಧ್ಯಯನ ಮಾಡಿದ ನಂತರವೇ ತಾನು ಈ ಭವಿಷ್ಯ ನುಡಿದಿದ್ದು,  ಮಾರ್ಚ್ 19ರಂದು ಈಡನ್ ಗಾರ್ಡನ್‌ನಲ್ಲಿ ನಡೆಯುವ ಭಾರತ -ಪಾಕ್ ನಡುವಿನ ಪಂದ್ಯದಲ್ಲಿ ಭಾರತವೇ ಗೆಲ್ಲಲಿದೆ ಎಂದು ಲೋಬೋ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.