ಪಾಕಿಸ್ತಾನ ವಿಕೆಟ್ ಕೀಪರ್‌ಗೆ ಧೋನಿ ಸ್ಪೂರ್ತಿ!
ಕ್ರಿಕೆಟ್ ಭಾರತದಲ್ಲಿ ಒಂದು ಧರ್ಮ.ಇಂತಹ ಭಾರತದ ಕ್ರಿಕೆಟಿಗರು ವಿಶ್ವದ ಇತರೆ ರಾಷ್ಟ್ರಗಳ ಕ್ರಿಕೆಟಿಗರಿಗೆ ಮೊದಲಿನಿಂದಲೂ ಮಾದರಿ..

ಕೋಲ್ಕತಾ: ಕ್ರಿಕೆಟ್ ಭಾರತದಲ್ಲಿ ಒಂದು ಧರ್ಮ.ಇಂತಹ ಭಾರತದ ಕ್ರಿಕೆಟಿಗರು ವಿಶ್ವದ ಇತರೆ ರಾಷ್ಟ್ರಗಳ ಕ್ರಿಕೆಟಿಗರಿಗೆ ಮೊದಲಿನಿಂದಲೂ ಮಾದರಿಯಾಗಿದ್ದಾರೆ. ಇದಕ್ಕೀಗ ನೂತನ ಸೇರ್ಪಡೆ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ.
ಭಾರತ ತಂಡದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಕ್ರಿಕೆಟ್ ಜಗತ್ತಿನ ಬೆಸ್ಟ್ ಮ್ಯಾಚ್ ಫಿನಿಶರ್‌ಗಳಲ್ಲಿ ಒಬ್ಬ ಅನ್ನುವುದು ಈಗಾಗಲೇ ಸಾಬೀತಾಗಿದೆ. ಇನ್ನು ಪಾಕಿಸ್ತಾನದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸಮನ್ ಸರ್ಫಾಜ್ ಅಹ್ಮದ್ ಅವರೂ ಕೂಡ ಧೋನಿಯಂತೆಯೇ ಫಿನಿಶರ್ ಆಗಬೇಕೆಂದು ಬಯಸಿದ್ದು, ಧೋನಿ ತಮಗೆ ಮಾದರಿ ಕ್ರಿಕೆಟಿಗ ಎಂದು ಹೇಳಿದ್ದಾರೆ.
ಕೋಲ್ಕತಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸರ್ಫಾಜ್ ಅಹ್ಮದ್, ‘ಖಂಡಿತಾ, ಧೋನಿ ನನಗೆ ಪ್ರೇರಣೆ. ಅತ್ಯುತ್ತಮವಾಗಿ ಬ್ಯಾಟಿಂಗ್-ಕೀಪಿಂಗ್ ಮಾಡಬಲ್ಲ ಅವರನ್ನು ನಾನು ಮಾದರಿ ವ್ಯಕ್ತಿಯನ್ನಾಗಿಸಿಕೊಂಡಿದ್ದೇನೆ. ಅವರಂತೆ ನಾನೂ ಪಾಕಿಸ್ತಾನ ತಂಡಕ್ಕೆ ಮ್ಯಾಚ್ ಫಿನಿಶಿಂಗ್ ಇನಿಂಗ್ಸ್ ಆಡಲು ಬಯಸುತ್ತೇನೆ’ಎಂದು ಹೇಳಿದ್ದಾರೆ.
ಇನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೇವರಿಟ್ ಎಂಬ ಖ್ಯಾತಿ ಪಡೆದಿರುವ ಭಾರತ ತಂಡವನ್ನು ಎದುರಿಸುವ ಕುರಿತು ಮಾತನಾಡಿದ ಸರ್ಫಾಜ್, "ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ವಿರುದ್ಧದ ಪಂದ್ಯ ಮಹತ್ವದ್ದಾಗಿದೆ. ಉಭಯ ತಂಡಗಳಿಗೂ ಒತ್ತಡವಿದ್ದು, ಇದುವರೆಗೆ ವಿಶ್ವಕಪ್‌ನಲ್ಲಿ ಭಾರತ ತಂಡದ ವಿರುದ್ಧ ಗೆಲ್ಲದ ದಾಖಲೆಯನ್ನು ಮುರಿಯುವ ಪ್ರಯತ್ನ ಮಾಡಲಿದ್ದೇವೆ. ಭಾರತದ ವಿರುದ್ಧ ಈಗಾಗಲೇ ನಾನು ಆಡಿದ್ದು, ಮತ್ತೊಮ್ಮೆ ಕಾಣಲಿರುವ ಅಭಿಮಾನಿಗಳ ಅಬ್ಬರ ನಮಗೆ ಪ್ರೇರಣೆಯಾಗಿರಲಿದೆ" ಎಂದು 17 ಟಿ20 ಪಂದ್ಯಗಳನ್ನಾಡಿರುವ 28 ವರ್ಷದ ಸರ್ಫಾಜ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


