ಐರ್ಲೆಂಡ್ ವಿರುದ್ಧ ಕ್ರಿಕೆಟ್ ಶಿಶು ಒಮನ್ ಗೆ ರೋಚಕ ಜಯ
ನಿರೀಕ್ಷೆಯಂತೆಯೇ 2016ರ ಐಸಿಸಿ ಟಿ20 ವಿಶ್ವಕಪ್ ಹಲವು ಅಚ್ಚರಿಗಳಿಗೆ ಕಾರಣವಾಗುತ್ತಿದ್ದು, ಬುಧವಾರ ನಡೆದ ಐರ್ಲೆಂಡ್ ಮತ್ತು ಒಮನ್ ನಡುವಿನ ಪಂದ್ಯದಲ್ಲಿ ಕ್ರಿಕೆಟ್ ಶಿಶು ಒಮನ್ 2 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ.

ಧರ್ಮಶಾಲಾ: ನಿರೀಕ್ಷೆಯಂತೆಯೇ 2016ರ ಐಸಿಸಿ ಟಿ20 ವಿಶ್ವಕಪ್ ಹಲವು ಅಚ್ಚರಿಗಳಿಗೆ ಕಾರಣವಾಗುತ್ತಿದ್ದು, ಬುಧವಾರ ನಡೆದ ಐರ್ಲೆಂಡ್ ಮತ್ತು ಒಮನ್ ನಡುವಿನ ಪಂದ್ಯದಲ್ಲಿ ಕ್ರಿಕೆಟ್ ಶಿಶು ಒಮನ್ 2 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ನಿಗಧಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ನಾಯಕ ಪೋರ್ಟ್ ಫೀಲ್ಡ್ (29 ರನ್), ಸ್ಟರ್ಲಿಂಗ್ (29 ರನ್), ಜಿಸಿ ವಿಲ್ಸನ್ (38 ರನ್) ಸಮಯೋಚಿತ ಆಟದ ನೆರವಿನಿಂದ ಐರ್ಲೆಂಡ್ 157 ರನ್ ಗಳ ಸವಾಲಿನ ಮೊತ್ತ ಪೇರಿಸಿತು. ಈ ಮೊತ್ತವನ್ನು ಬೆನ್ನು ಹತ್ತಿದ ಒಮನ್ ಶೀಸಾನ್ ಮಕ್ಸೂದ್ (38 ರನ್), ಖವಾರ್ ಅಲಿ (34 ರನ್), ಜತೀಂದರ್ ಸಿಂಗ್ (24 ರನ್) ಮತ್ತು ಅಮೀರ್ ಅಲಿ (32 ರನ್) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಪಂದ್ಯದ ಕೊನೆಯ ಓವರ್ ನಲ್ಲಿ ರೋಚಕ ಜಯ ಸಾಧಿಸಿತು.
ಕೊನೆಯ ಓವರ್ ನಲ್ಲಿ ಸತತ 2 ವಿಕೆಟ್ ಗಳು ಬೀಳುವ ಮೂಲಕ ಒಮನ್ ಸೋಲಿನ ದವಡೆಗೆ ಸಿಲುಕಿತ್ತಾದರೂ, ಕೊನೆಯ ಓವರ್ ನಲ್ಲಿ ಎಡವಿದ ಐರ್ಲೆಂಡ್ ವಿಕೆಟ್ ಕೀಪರ್ ಮಾಡಿದ ಎಡವಟ್ಟಿನಿಂದಾಗಿ ಅನಗತ್ಯವಾಗಿ ನಾಲ್ಕು ರನ್ ನೀಡುವ ಮೂಲಕ ಒಮನ್ ಗೆಲುವಿಗೆ ಪರೋಕ್ಷವಾಗಿ ಕಾರಣವಾಯಿತು. ಕೊನೆಯ ಹಂತದವರೆಗೂ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಒಮನ್ ಗೆಲುವಿಗೆ ಕಾರಣರಾದ ಅಮೀರ್ ಅಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


