ಭಾರತವನ್ನೇಕೆ ಅಷ್ಟೊಂದು ದ್ವೇಷಿಸುತ್ತೀರಾ; ಪಾಕ್ ಪತ್ರಕರ್ತರಿಗೆ ಆಫ್ರಿದಿ ಪ್ರಶ್ನೆ
ಪಾಕಿಸ್ತಾನ ಮಾಧ್ಯಮಗಳು ಭಾರತದ ವಿರುದ್ಧ ಏಕೆ ಅಷ್ಟೊಂದು ದ್ವೇಷ ಸಾಧಿಸುತ್ತಿವೆ ಎಂದು ಪಾಕ್ ಕ್ರಿಕೆಟ್ ತಂಡದ ನಾಯಕ್ ಶಾಹಿದ್ ಅಫ್ರಿದಿ ಪತ್ರಕರ್ತರನ್ನು ಪ್ರಶ್ನಿಸಿದ್ದಾರೆ...

ಕರಾಚಿ: ಪಾಕಿಸ್ತಾನ ಮಾಧ್ಯಮಗಳು ಭಾರತದ ವಿರುದ್ಧ ಏಕೆ ಅಷ್ಟೊಂದು ದ್ವೇಷ ಸಾಧಿಸುತ್ತಿವೆ ಎಂದು ಪಾಕ್ ಕ್ರಿಕೆಟ್ ತಂಡದ ನಾಯಕ್ ಶಾಹಿದ್ ಅಫ್ರಿದಿ ಪತ್ರಕರ್ತರನ್ನು ಪ್ರಶ್ನಿಸಿದ್ದಾರೆ.
ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಮಾರ್ಚ್ 19ರಂದು ಭಾರತದ ವಿರುದ್ಧ ಧರ್ಮಶಾಲಾದಲ್ಲಿ ನಡೆಯುವ ಪಂದ್ಯದಲ್ಲಿ ಗೆಲ್ಲಲೇ ಬೇಕೆಂಬ ಒತ್ತಡ ನಿಮ್ಮಲ್ಲಿದೆಯೇ ಎಂಬ ಪಾಕ್ ಪತ್ರಕರ್ತರ ಪ್ರಶ್ನೆಗೆ ಆಫ್ರಿದಿ ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನ ಜನತೆ ಹಾಗೂ ಮಾಧ್ಯಮಗಳು ಭಾರತದ ವಿರುದ್ಧ ಪಂದ್ಯವನ್ನು ಏಕೆ ಇಷ್ಟೊಂದು ಗಂಭೀರವಾಗಿ ಪರಿಗಣಿಸುತ್ತವೆಯೋ ಗೊತ್ತಿಲ್ಲ. ನಾವು ಬೇರೆ ತಂಡಗಳ ಜತೆಗೂ ಪಂದ್ಯ ಆಡುತ್ತೇವೆ. ಆಗ ಇರದ ಹುಚ್ಚು ದೇಶಾಭಿಮಾನ ಭಾರತದ ವಿರುದ್ಧ ಆಡುವಾಗ ಮಾಧ್ಯಮಗಳು ಏಕೆ ಸೃಷ್ಟಿ ಮಾಡುತ್ತಿವೆ? ಈ ರೀತಿ ಇಂಡೋ-ಪಾಕ್ ಪಂದ್ಯವನ್ನು ವಿಭಿನ್ನವಾಗಿ ಚಿತ್ರಿಸುವ ಮೂಲಕ ಜನರಲ್ಲಿ ದ್ವೇಷದ ಭಾವನೆ ಹೆಚ್ಚುತ್ತಿದೆ ಎಂದು ಆರೋಪಿಸಿದರು.
ಭಾರತೀಯ ಕಿರುತೆರೆ ಶೋಗಳನ್ನು ಪಾಕಿಸ್ತಾನದ ಪ್ರಜೆಗಳು ನೋಡುತ್ತಾರೆ. ಚಿತ್ರಮಂದಿರಗಳಲ್ಲಿ ಭಾರತೀಯ ಸಿನಿಮಾ ವೀಕ್ಷಿಸುತ್ತಾರೆ. ಅಷ್ಟೇ ಏಕೆ ಭಾರತೀಯ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮಗಳು ನೆರವೇರುತ್ತದೆ. ಆದರೆ ಕ್ರೀಡೆ ವಿಚಾರಕ್ಕೆ ಬಂದರೆ ಯುದ್ಧದಂತೆ ಬಿಂಬಿಸಲಾಗುತ್ತದೆ ಎಂದು ಆಫ್ರಿದಿ ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


