ಐಸಿಸಿ ಬ್ಯಾಟಿಂಗ್ ರ‍್ಯಾಂಕಿಂಗ್: ಕೊಹ್ಲಿ ಟಿ20, ಏಕದಿನದಲ್ಲಿ ಡಿವಿಲಿಯರ್ಸ್ ಗೆ ಅಗ್ರ ಸ್ಥಾನ
ಟಿ20 ಮಾದರಿ ಕ್ರಿಕೆಟ್ ನಲ್ಲಿ ಭಾರತದ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದರೆ, ಏಕದಿನದಲ್ಲಿ ದಕ್ಷಿಣ ಆಫ್ರಿಕಾದ ಎಬಿಡಿವಿಲಿಯರ್ಸ್ ಮತ್ತು ಟೆಸ್ಟ್ ನಲ್ಲಿ ಆಸ್ಚ್ರೇಲಿಯಾ ನಾಯಕತ ಸ್ಟೀವ್ ಸ್ಮಿತ್ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ.

ದುಬೈ: ಐಸಿಸಿ ಏಕದಿನ ರ‍್ಯಾಂಕಿಂಗ್ ನ ಬೆನ್ನಲ್ಲೇ ಬ್ಯಾಟ್ಸಮನ್ ಗಳ ರ‍್ಯಾಂಕಿಂಗ್ ಪಟ್ಟಿ ಕೂಡ ಬಿಡುಗಡೆಯಾಗಿದ್ದು, ಟಿ20 ಮಾದರಿ ಕ್ರಿಕೆಟ್ ನಲ್ಲಿ ಭಾರತದ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದರೆ, ಏಕದಿನದಲ್ಲಿ ದಕ್ಷಿಣ ಆಫ್ರಿಕಾದ ಎಬಿಡಿವಿಲಿಯರ್ಸ್ ಮತ್ತು ಟೆಸ್ಟ್ ನಲ್ಲಿ ಆಸ್ಚ್ರೇಲಿಯಾ ನಾಯಕತ ಸ್ಟೀವ್ ಸ್ಮಿತ್ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ.
ಟಿ20ಯಲ್ಲಿ ಭಾರತದ ವಿರಾಟ್ ಕೊಹ್ಲಿ 837 ರೇಟಿಂಗ್ಸ್ ನೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದರೆ, 803 ರೇಟಿಂಗ್ಸ್ ಪಡೆದಿರುವ ಆ್ಯರಾನ್ ಫಿಂಚ್ 2ನೇ ಸ್ಥಾನದಲ್ಲಿದ್ದಾರೆ. ಇನ್ನು ಪಟ್ಟಿಯಲ್ಲಿ 696 ಅಂಕಗಳೊಂದಿಗೆ ಕ್ರಿಸ್ ಗೇಯ್ಲ್ 8ನೇ ಸ್ಥಾನದಲ್ಲಿದ್ದಾರೆ.
ಏಕದಿನ ಬ್ಯಾಟ್ಸಮನ್ ಗಳ ಪಟ್ಟಿಯಲ್ಲಿ ದಕ್ಷಿಣಆಫ್ರಿಕಾದ ಎಬಿಡಿವಿಲಿಯರ್ಸ್ 887 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, 813 ಅಂಕಗಳೊಂದಿಗೆ ಭಾರತ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ.ಯ ಅಂತೆಯೇ ಪಟ್ಟಿಯಲ್ಲಿ 750 ಅಂಕಗಳನ್ನು ಗಳಿಸಿರುವ ರೋಹಿತ್ ಶರ್ಮಾ 6ನೇ ಸ್ಥಾನದಲ್ಲಿದ್ದರೆ, 8ನೇ ಸ್ಥಾನದಲ್ಲಿರುವ ಶಿಖರ್ ಧವನ್ 737 ಅಕಂಗಳನ್ನು ಗಳಿಸಿದ್ದಾರೆ.
ಟೆಸ್ಟ್ ರ‍್ಯಾಂಕಿಂಗ್ ನಲ್ಲಿ 925 ರೇಟಿಂಗ್ ಅಂಕಗಳನ್ನು ಪಡೆದಿರುವ ಸ್ಮಿತ್ ಅಗ್ರ ಸ್ಥಾನದಲ್ಲಿದ್ದರೆ, 868 ಅಂಕಗಳ ಪಡೆದಿರುವ ದಕ್ಷಿಣ ಆಫ್ರಿಕಾದ ಹಶೀಂ ಆಮ್ಲಾ 2ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಡಿವಿಲಿಯರ್ಸ್ 818 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದರೆ, 800 ಅಂಕ ಪಡೆದಿರುವ ಡೇವಿಡ್ ವಾರ್ನರ್ 8ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ತಂಡದ ಬ್ಯಾಟ್ಸಮನ್ ಗಳ ಅಗ್ರ 10 ರ ಪಟ್ಟಿಯಲ್ಲಿ ಭಾರತದ ಯಾವುದೇ ಒಬ್ಬ ಬ್ಯಾಟ್ಸಮನ್ ಸ್ಥಾನ ಸಂಪಾದಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


