ಟೀಂ ಇಂಡಿಯಾ ಕೋಚ್ ಆಯ್ಕೆ; ಇಂದು ಸಂಜೆ ಅಧಿಕೃತ ಘೋಷಣೆ?
ಬಹು ನಿರೀಕ್ಷಿತ ಟೀಂ ಇಂಡಿಯಾದ ನೂತನ ಕೋಚ್ ಆಯ್ಕೆ ವಿಚಾರಕ್ಕೆ ಗುರುವಾರ ಸಂಜೆ ತೆರೆ ಬೀಳುವ ಸಾಧ್ಯತೆ ಇದ್ದು, ಸಲಹಾ ಸಮಿತಿ ನೀಡಿರುವ ಶಿಫಾರಸಿನ ಮೇರೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ನೂತನ ಕೋಚ್ ಹೆಸರನ್ನು ಬಹಿರಂಗ ಪಡಿಸಲಿದೆ.

ಧರ್ಮಶಾಲಾ: ಬಹು ನಿರೀಕ್ಷಿತ ಟೀಂ ಇಂಡಿಯಾದ ನೂತನ ಕೋಚ್ ಆಯ್ಕೆ ವಿಚಾರಕ್ಕೆ ಗುರುವಾರ ಸಂಜೆ ತೆರೆ ಬೀಳುವ ಸಾಧ್ಯತೆ ಇದ್ದು, ಸಲಹಾ ಸಮಿತಿ ನೀಡಿರುವ ಶಿಫಾರಸಿನ ಮೇರೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ನೂತನ ಕೋಚ್ ಹೆಸರನ್ನು ಬಹಿರಂಗ ಪಡಿಸಲಿದೆ.
ಪ್ರಧಾನ್ ಕೋಚ್ ಆಯ್ಕೆಗೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಆಯ್ಕೆ ಪ್ರಕ್ರಿಯೆ ನಿನ್ನೆ ಪೂರ್ಣಗೊಂಡಿದ್ದು, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ತ್ರಿಮೂರ್ತಿಗಳನ್ನೊಳಗೊಂಡ ಸಲಹಾ ಸಮಿತಿ ಕೋಚ್ ಹುದ್ದೆ ಆಕಾಂಕ್ಷಿಗಳ ಸಂದರ್ಶನ ನಡೆಸಿ ಅದರ ವರದಿ ಮತ್ತು ತಮ್ಮ ಶಿಫಾರಸ್ಸನ್ನು ಬಿಸಿಸಿಐಗೆ ನೀಡಿದ್ದಾರೆ. ಈ ಬಗ್ಗೆ ವರದಿ ತಮ್ಮ ಕೈ ಸೇರಿದ್ದು, ಗುರುವಾರ ಸಂಜೆ ನೂತನ ಕೋಚ್ ಹೆಸರನ್ನು ಅಧಿಕೃತವಾಗಿ ಪ್ರಕಟಿಸುವುದಾಗಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಇಂದು ಧರ್ಮಶಾಲಾದಲ್ಲಿ ನಡೆಯಲಿರುವ ಬಿಸಿಸಿಐನ ಮೊದಲ ವಾರ್ಷಿಕ ಸಭೆಯಲ್ಲಿ ಚರ್ಚಿಸಿ ನೂತನ ಕೋಚ್ ಹೆಸರನ್ನು ಬಹಿರಂಗ ಪಡಿಸಲಾಗುತ್ತದೆ ಎಂದು ಠಾಕೂರ್ ತಿಳಿಸಿದ್ದಾರೆ. ಇನ್ನು ಟೀಂ ಇಂಡಿಯಾದ ನೂತನ ಕೋಚ್ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಇಂದು ಸಂಜೆ ತೆರೆ ಬೀಳಲಿದ್ದು, ಕೋಚ್ ರೇಸ್ ಗೆ ತಡವಾಗಿ ಎ೦ಟ್ರಿ ಕೊಟ್ಟರೂ ಕನ್ನಡಿಗ ಅನಿಲ್ ಕು೦ಬ್ಳೆ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಅಂತೆಯೇ ತ೦ಡದ ಮಾಜಿ ಡೈರೆಕ್ಟರ್ ರವಿಶಾಸ್ತ್ರಿ ಕೂಡ ಕುಂಬ್ಳೆ ಪ್ರಬಲ ಪೈಪೋಟಿ ನೀಡುತ್ತಿದ್ದು, ಇವರಿಬ್ಬರಲ್ಲಿ ಒಬ್ಬರು ಹುದ್ದೆ ಅಲಂಕರಿಸಲಿದ್ದಾರೆ.
ಮೂಲಗಳ ಪ್ರಕಾರ ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಹರಾಗಿದ್ದರೂ, ಈ ಹಿಂದಿ ತಂಡದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಕಾರಣ ಅವರ ಅವಧಿಯಲ್ಲಿನ ತಂಡದ ಪ್ರದರ್ಶನ ಸಲಹಾ ಸಮಿತಿ ಸದಸ್ಯರ ಗಮನ ಸೆಳೆಯುವಲ್ಲಿ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ. ನಿದೇ೯ಶಕನಾಗಿದ್ದ ಅವಯಲ್ಲಿ ಟೆಸ್ಟ್ ನಿವ೯ಹಣೆ ಉತ್ತಮವೆನಿಸಿದ್ದರೂ, ಏಕದಿನ ಮತ್ತು ಟಿ20 ನಿವ೯ಹಣೆ ತೃಪ್ತಿದಾಯಕವೆನಿಸಿಲ್ಲ. ಅಲ್ಲದೆ ಏಕದಿನ, ಟಿ20 ವಿಶ್ವಕಪ್‍ಗಳ ಸೆಮಿಫೈನಲ್‍ನಲ್ಲೇ ಎಡವಿರುವುದು ಶಾಸ್ತ್ರಿ ಹಿನ್ನಡೆಗೆ ಕಾರಣ ಎಂದು ಹೇಳಲಾಗುತ್ತಿದೆ. ಇನ್ನು ಸಂದರ್ಶನದ ವೇಳೆ ಸಲಹಾ ಸಮಿತಿಗೆ ಅನಿಲ್ ಕುಂಬ್ಳೆ ನೀಡಿರುವ ಪ್ರಾತ್ಯಕ್ಷಿಕೆ ಮತ್ತು ವಿದೇಶದಲ್ಲಿ ತಂಡದ ಉತ್ತಮ ಪ್ರದರ್ಶನಕ್ಕೆ ಕೈಗೊಳ್ಳಬಹುದಾದ ಕ್ರಮಗಳು ತೃಪ್ತಿ ನೀಡಿದ್ದು ಬಹುತೇಕ ಅನಿಲ್ ಕುಂಬ್ಳೆ ಅವರೇ ಟೀಂ ಇಂಡಿಯಾದ ಕೋಚ್ ಆಗಿ ಆಯ್ಕೆಯಾದರೂ ಯಾವುದೇ ಅಚ್ಚರಿ ಇಲ್ಲ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


